ನರ್ಸಿಂಗ್ ವಿದ್ಯಾರ್ಥಿಗಳಿಂದ ಸ್ತನ್ಯಪಾನ ಜಾಗೃತಿ ಜಾಥಾ
ಹೊಳೆನರಸೀಪುರ: ವಿಶ್ವ ಸ್ತನ್ಯಪಾನ ದಿನದ ಅಂಗವಾಗಿ ಪಟ್ಟಣದ ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬುಧವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸ್ತನ್ಯಪಾನದ ಮಹತ್ವ ಕುರಿತಂತೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಜಾಥಾ ನಡೆಸಿದರು. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸ್ತನ್ಯಪಾನದ ಪ್ರಾಮುಖ್ಯತೆ ಮತ್ತು ಇದರಿಂದಾಗುವ ಪ್ರಯೋಜನಗಳ ಕುರಿತಂತೆ ಭಿತ್ತಿಪತ್ರಗಳನ್ನು ಹಿಡಿದು ಸ್ತನ್ಯಪಾನವನ್ನು ಪ್ರೋತ್ಸಾಹಿಸುವಂತೆ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ತಾಯಿಯ ಎದೆ ಹಾಲು ಮಗುವಿನ ಬೆಳವಣಿಗೆಯ ಹಂತದಲ್ಲಿ ಜೀವಾಮೃತವಿದ್ದಂತೆ. ಆದರೆ ಇಂದು ಎಷ್ಟೋ ತಾಯಂದಿರು ಮೂಢನಂಬಿಕೆ ಹಾಗೂ ತಮ್ಮ ಸೌಂದರ್ಯದ ಬಗೆಗಿನ ಇನ್ನಿಲ್ಲದ ಕಾಳಜಿಯಿಂದಾಗಿ ಎದೆಹಾಲು ನೀಡದೇ ತಮ್ಮ ಕೈಯಾರೆ ತಮ್ಮ ಮಕ್ಕಳ ಆರೋಗ್ಯವನ್ನು ಹಾಳುಗೆಡವುತ್ತಿದ್ದಾರೆ ಎಂದು ಕಾಲೇಜಿನ ಉಪ-ಪ್ರಾಂಶುಪಾಲೆ ಎಂ.ಡಿ.ಸೀತಮ್ಮ ವಿಷಾದಿಸಿದರು. ಕಾಲೇಜಿನ ಪ್ರಾಧ್ಯಾಪಕ ಹಾಗೂ ಎನ್.ಎಸ್.ಎಸ್ ಘಟಕದ ಅಧಿಕಾರಿ ಚಂದ್ರಶೇಖರ ಹಡಪದ್ ಮಾತನಾಡಿ, ಎಷ್ಟೋ ತಾಯಂದಿರು ಇಂದು ತಮ್ಮ ಎದೆಹಾಲನ್ನು ಮಕ್ಕಳಿಗೆ ನೀಡದೇ ಇರುವುದರಿಂದಾಗಿ ವಿಶ್ವದಲ್ಲಿನ ಬಹುತೇಕ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ಅನಾರೋಗ್ಯಗಳು ಚಿಕ್ಕಂದಿನಿಂದಲೇ ತಾಯ ಎದೆಹಾಲು ವಂಚಿತ ಮಕ್ಕಳಲ್ಲಿ ಕಂಡುಬರುತ್ತಿದೆ ಎಂದು ಹೇಳಿದರು. ಕಾಲೇಜಿನ ಅಧ್ಯಾಪಕ ವರ್ಗದವರಾದ ಎಚ್.ಎನ್.ಪಾಟೀಲ್, ಕೃಷ್ಣವೇಣಿ, ಸಾವಿತ್ರಮ್ಮ, ಶೈಲಜಾ, ವತ್ಸಲ ಹಾಗೂ ರಾಮು ಅವರುಗಳೂ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

