ಹಾಸನ

'ವಕೀಲರು ಕಾರ್ಯಾಗಾರ ಸದುಪಯೋಗ ಪಡಿಸಿಕೊಳ್ಳಿ'

Published On :

ಕ.ಪ್ರ.ವಾರ್ತೆ   ಅರಸೀಕೆರೆ   ಆ.8
ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯ ಉಚ್ಚ ನ್ಯಾಯಾಲಯ ಆದೇಶದ ಮೇರೆಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ವಕೀಲರಲ್ಲಿ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಾಗಾರಗಳನ್ನು ನುರಿತ ಕಾನೂನು ತಜ್ಞರಿಂದ ನಡೆಸಲಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾ. ಸರಸ್ವತಿ ವಿ.ಕೊಸಂದರ್ ತಿಳಿಸಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ವಕೀಲರ ಸಂಘದ ಭವನದಲ್ಲಿ ವಕೀಲರಿಗಾಗಿ ಏರ್ಪಡಿಸಿದ್ದ ಕಾನೂನು ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಸ್ಥಳೀಯವಾಗಿ ಮೂರು ದಿನ ನಡೆದ ಕಾರ್ಯಾಗಾರದಲ್ಲಿ ಸಂವಿಧಾನದಲ್ಲಿನ ಅನೇಕ ಕಾನೂನುಗಳ ಬಗ್ಗೆ ಹಿರಿಯ ಕಾನೂನು ತಜ್ಞರಾದ ವಕೀಲರಿಂದ ಅನೇಕ ಉತ್ತಮ ಮಾಹಿತಿಗಳನ್ನು ಹಿರಿಯ ಹಾಗೂ ಕಿರಿಯ ವಕೀಲರುಗಳಿಗೆ ನೀಡಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ  ದೇವಾನಂದ ಮಾತನಾಡಿ, ಜ್ಞಾನದ ತೀರ್ಥದೊಳು ಸ್ನಾನ ಮಾಡಿದರೆ ಜ್ಞಾನ ಎಲ್ಲರಿಗೂ ಲಭಿಸುತ್ತದೆ ಎಂಬುವುದು ಸರಿಯಲ್ಲ, ಸತತ ಪರಿಶ್ರಮದಿಂದ ಮಾತ್ರ ಜ್ಞಾನಾರ್ಜನೆ ಪಡೆದುಕೊಳ್ಳಲು ವ್ಯಕ್ತಿಯ ಅನುವಂಶಿಕತೆ ಮತ್ತು ಪರಿಸರದ ಪ್ರಭಾವಗಳು ನಂತರ ಸಂಗತಿ ಎಂದು ಅಭಿಪ್ರಾಯ ಪಟ್ಟರು.
ನ್ಯಾ. ಪ್ರಕಾಶ್ ಚನ್ನಪ್ಪ ಕುರುಬೆಟ್ ಹಾಗೂ ಮೈಸೂರಿನ ಹಿರಿಯ ವಕೀಲರಾದ ಕೆ.ಎಸ್.ಧರ್ಮೇಂದ್ರ ದಂಡ ಪ್ರಕ್ರಿಯೆ ಸಂಹಿತೆ ಬಗ್ಗೆ ಮಾತನಾಡಿ ಕಾನೂನುಗಳ ಬಗ್ಗೆ ಹಿರಿಯ ವಕೀಲರು ಹಿರಿಯ ವಕೀಲರಿಗೆ ಹೆಚ್ಚಿನ ಮಾರ್ಗದರ್ಶನ ನೀಡಬೇಕೆಂದು ಸಲಹೆ ನೀಡಿದರು.
ಸಹಾಯಕ ಸರ್ಕಾರಿ ವಕೀಲರಾದ ಕೃಷ್ಣ ಜಿ.ದೇಶಭಂಡಾರಿ, ವಕೀಲರ ಸಂಘದ ಕಾರ್ಯದರ್ಶಿ ಓ.ಎ.ಶಿವಕುಮಾರ್, ಮಾಜಿ ಅಧ್ಯಕ್ಷ ಕೆ.ಎ.ರವಿಶಂಕರ್, ಮಾಜಿ ಕಾರ್ಯದರ್ಶಿ ಸದಾನಂದ್, ಮಲ್ಲೇಶ್, ಹಿರಿಯಣ್ಣಯ್ಯ, ಕೇಶವಮೂರ್ತಿ ಇದ್ದರು. ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಸರ್ವೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.