ಬೆಂಡೇಕೆರೆಯಲ್ಲಿ ಅಶುಚಿತ್ವ, ಡೆಂಘೀ ಭೀತಿ
ಕ.ಪ್ರ.ವಾರ್ತೆ ಹಾಸನ ಆ.8
ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಗ್ರಾಪಂ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲದ ಕಾರಣ ಗ್ರಾಮದಲ್ಲಿ ಶುಚಿತ್ವದ ಕೊರತೆಯಿಂದಾಗಿ ಅನೈರ್ಮಲ್ಯ ಹೆಚ್ಚಾಗಿ ಮಲೇರಿಯಾ, ಚಿಕೂನ್ಗುನ್ಯ, ಡೆಂಘೀಯಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಿಸುವಂತಾಗಿದೆ ಎಂದು ತಾಲೂಕಿನ ಬೆಂಡೇಕೆರೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಬಿ.ಎಚ್.ರಸ್ತೆಯ ಪಕ್ಕದಲ್ಲಿರುವ ತಾಲೂಕಿನ ಬೆಂಡೇಕೆರೆ ಗ್ರಾಮದ ಮಧ್ಯ ಭಾಗದಲ್ಲಿನ ಗಣಪತಿ ಪೆಂಡಾಲ್ ಸುತ್ತಮುತ್ತಲೂ ವಸತಿ ಪ್ರದೇಶವಿದ್ದು, ಇಲ್ಲಿ ಅನೇಕ ವರ್ಷದಿಂದ ವ್ಯವಸ್ಥಿತವಾದ ಚರಂಡಿಗಳನ್ನು ನಿರ್ಮಿಸಿದ ಕಾರಣ ಬಹುತೇಕ ಚರಂಡಿಗಳಲ್ಲಿ ಕಲುಷಿತ ನೀರು ಹರಿಯುವ ಜಾಗದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಹುಳಹುಪ್ಪಟೆಗಳ ವಾಸಸ್ಥಾನವಾಗಿದ್ದು, ಮಳೆ ನೀರು ಹರಿದುಹೋಗಲು ಸಾಧ್ಯವಾಗದಂತೆ ಕಸಕಡ್ಡಿಗಳು ಅನೇಕ ತಿಂಗಳುಗಳಿಂದ ತುಂಬಿದ್ದು, ಸ್ವಚ್ಛತೆಯಿಲ್ಲದೆ ಗಬ್ಬೆದ್ದು ದುರ್ನಾತ ಬೀರುತ್ತಿದೆ.
ಇದರ ಸಮೀಪದಲ್ಲೆ ಅನೇಕ ಕುಟುಂಬಗಳು ವಾಸವಿದ್ದು, ಜನರು ಮೂಗು ಮುಚ್ಚಿ ಒಡಾಡುವಂತಾಗಿದೆ. ಸ್ವಚ್ಛಗೊಳಿಸುವ ಕಾರ್ಯವನ್ನು ಇಲ್ಲಿನ ಗ್ರಾಪಂ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಮಾಡುತ್ತಿಲ್ಲ ಎಂಬುದು ಇಲ್ಲಿನ ಜನರ ದೂರಾಗಿದೆ. ಇತ್ತೀಚೆಗೆ ಗ್ರಾಮಗಳಲ್ಲಿ ಅನೇಕರಿಗೆ ಡೆಘೀ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿರುವ ನಾಗರಿಕರು ಅನೇಕ ಬಾರಿ ಈ ಬಗ್ಗೆ ಗ್ರಾಮಸಭೆಗಳಲ್ಲಿ ಗ್ರಾಮದ ಸ್ವಚ್ಛತೆ ಕಾಪಾಡಬೇಕೆಂದು ಗ್ರಾಮಸ್ಥರು ಎಷ್ಟೇ ಒತ್ತಾಯಿಸಿದರೂ ನರಿ ಕೂಗು ಗಿರಿ ಮುಟ್ಟೀತೆ ಎಂಬಂತಾಗಿದೆ.
ತ್ವರಿತವಾಗಿ ಗ್ರಾಪಂ ಅಧಿಕಾರಿಗಳು ಸ್ವಚ್ಛತೆ ಕಾಮಗಾರಿಗೆ ಮುಂದಾಗದಿದ್ದರೆ ಗ್ರಾಪಂ ಕಚೇರಿ ಮುಂದೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

