ಕರಡೆ ಕಲಾವಿದರ ಮಾಸಾಶನಕ್ಕೆಇಲಾಖೆ ಕೊಕ್ಕೆ
ಕ.ಪ್ರ.ವಾರ್ತೆ ಹಾರನಹಳ್ಳಿ ಆ.9
ಅಪರೂಪದ ಜಾನಪದ ಕಲೆ ಕರಡೆ ವಾದ್ಯ ನುಡಿಸುವುದರಲ್ಲಿ ಪ್ರವೀಣರಾದ ಕಲಾವಿದರಾದ ಜಾನಕಲ್ಲಯ್ಯ ಹಾಗೂ ರಂಗಸ್ವಾಮಿ ಅವರಿಗೆ ಮಾಸಾಶನ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಸೂಕ್ತ ದಾಖಲೆ ಸಲ್ಲಿಸಿಲ್ಲ ಎಂಬ ನೆಪವೊಡ್ಡಿ, ರಾಷ್ಟ್ರಪತಿ ಸಮ್ಮುಖದಲ್ಲಿಯೂ ತಮ್ಮ ಕಲೆಯನ್ನು ಪ್ರದರ್ಶಿಸಿದ ಪ್ರಶಸ್ತಿ ಪಡೆದ ಹಿರಿಯ ಕಲಾವಿದರಿಗೆ ದಕ್ಕಬೇಕಾದ ಹಕ್ಕನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ.
ಕಲೆ ಯಾರ ಸ್ವತ್ತೂ ಅಲ್ಲ. ಎಲ್ಲರಿಗೂ ಒಲಿಯುವುದೂ ಇಲ್ಲ. ಒಲಿದರೂ ಅಭಿವ್ಯಕ್ತಿಗೆ ಶ್ರದ್ಧೆ, ಪ್ರಯತ್ನ ಬೇಕು. ಈ ಎಲ್ಲವೂ ಇರುವವರು ಹಾರನಹಳ್ಳಿ ಜಾನಪದ ಕಲಾವಿದರಾದ ಜಾನಕಲ್ಲಯ್ಯ ಹಾಗೂ ರಂಗಸ್ವಾಮಿ.
ಜಾನಪದ ಕಲಾಪ್ರಕಾರಗಳಲ್ಲಿ ಕರಡೆ ವಾದ್ಯ ಹಾಸನ, ಮೈಸೂರು, ಮಂಡ್ಯ ಭಾಗಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈ ಕರಡೆ ವಾದ್ಯಕ್ಕೆ ವಾಲಗ ನುಡಿಸುವ ಜಾನಕಲ್ಲಯ್ಯ ಕನ್ನಡ ಚಲನಚಿತ್ರ ಹಾಡುಗಳು, ಹಿಂದಿ, ತೆಲಗು, ತಮಿಳು ಶಾಸ್ತ್ರೀಯ ಸಂಗೀತ ಹಾಡುಗಳನ್ನು ನುಡಿಸಿದರೆ, ರಾಗಕ್ಕೆ ತಕ್ಕಂತೆ ರಂಗಸ್ವಾಮಿ ಕರಡೆ ವಾದ್ಯದಲ್ಲಿ ಸ್ವರ ಹೊರಡಿಸುತ್ತಾರೆ. ನಂದಿ ಧ್ವಜ, ಸೋಮನಕುಣಿತಕ್ಕೂ ಕರಡೆ ವಾದ್ಯ ಪರಿಕರಗಳನ್ನು ನುಡಿಸುತ್ತಾರೆ.
ರಾಷ್ಟ್ರಪತಿ ಗೌರವ: ಚಿಕ್ಕ ವಯಸ್ಸಿನಿಂದಲೇ ಜಾತ್ರಾ ಉತ್ಸವಗಳಲ್ಲಿ ನವದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಂದಿನ ರಾಷ್ಟ್ರಪತಿ ಜೈಲ್ ಸಿಂಗ್ ಹಾಗೂ ಪ್ರಧಾನಿ ರಾಜೀವ್ ಗಾಂಧಿ ಅವರಿಂದ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ನಡೆದ ನ್ಯಾಷನಲ್ ಗೇಮ್ ಜಿಲ್ಲಾ ಉತ್ಸವ, ಹೊಯ್ಸಳ ಉತ್ಸವ, ದಸರಾ ಕಾರ್ಯಕ್ರಮ ಹೀಗೆ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ನೀಡಿದ್ದು, ತಮ್ಮ ವಿದ್ವತ್ ಕಲಾಚಾತುರ್ಯ ತೋರಿದ್ದಾರೆ. ಇವರ ಕಾರ್ಯಕ್ರಮಗಳು ಆಕಾಶವಾಣಿ ಕೇಂದ್ರಗಳಲ್ಲಿಯೂ ಪ್ರಸಾರವಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

