ಹಾಸನ

'ಧರ್ಮಸ್ಥಳ'ಯೋಜನೆ: 25 ಕೋಟಿ ಸಾಲ ನೀಡುವ ಗುರಿ

Published On :

ನುಗ್ಗೇಹಳ್ಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನುಗ್ಗೇಹಳ್ಳಿ ಹೋಬಳಿ ಮಂಜುನಾಥೇಶ್ವರ ಮಹಿಳಾ ಸ್ವಸಹಾಯ ಸಂಘಗಳಿಗೆ 6 ತಿಂಗಳಲ್ಲಿ 25 ಕೋಟಿ ರು. ಸಾಲ ನೀಡುವ ಗುರಿ ಹೊಂದಿದೆ ಎಂದು ಬಜಗೂರು ವಲಯ ಮೇಲ್ವಿಚಾರಕ ಎಸ್. ಶಿವಣ್ಣ ತಿಳಿಸಿದರು. ಅವರು ನುಗ್ಗೇಹಳ್ಳಿಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಸಭೆ ಉದ್ಘಾಟಿಸಿ  ಮಾತನಾಡಿದರು.  ವ್ಯಾಪಾರ, ಹಸು, ಕುರಿ ಸಾಕಾಣಿಕೆಗೆ ಒಬ್ಬರಿಗೆ 45000 ಸಾವಿರ ರು. ಸಾಲ ನೀಡುತ್ತೇವೆ, 3 ವರ್ಷ ಅವಧಿಯಲ್ಲಿ ಮರುಪಾವತಿ ಮಾಡಬೇಕು. ಸದಸ್ಯರು ಕಡ್ಡಾಯವಾಗಿ ಜೀವ ವಿಮೆ ಮಾಡಿಸಿಕೊಳ್ಳಬೇಕು 50 ಗಿಡ ದಾಳಿಂಬೆ ಬೆಳೆಯಲು ಧನ ಸಹಾಯ ಸಿಗುತ್ತದೆ ಎಂದು ತಿಳಿಸಿದರು.
ಬಿ.ಇ ಡಿಪ್ಲೊಮಾ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸಾವಿರ ಐಟಿಐ ಮಾಡುವ ವಿದ್ಯಾರ್ಥಿಗಳಿಗೆ 400  ರು. ಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗುತ್ತದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳು ಉತ್ತಮ ಕೆಲಸ ಮಾಡಬೇಕು. ತಪ್ಪಾಗಿ ನಡದುಕೊಂಡವರನ್ನು ಕೆಲಸದಿಂದ ತೆಗೆಯುತ್ತೇವೆ ಎಂದರು. ನಾಟಿ ಹಸುಗಳ ಸಂಖ್ಯೆ ಹಳ್ಳಿಗಳಲ್ಲಿ ಕಡಿಮೆಯಾಗುತ್ತಿದ್ದು ಮನೆಗೊಂದು ನಾಟಿ ಹಸು ಸಾಕಲು ತಿಳಿಸಿದರು. ಸಮಾರಂಭದಲ್ಲಿ ಚೇತನ ರಂಜಿತ ಬಿ.ಶಕುಂತಲ  ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.