ಹಾಸನ

ಆಟೋ ಮೇಲೆ ಅಸಹ್ಯ ಬರಹ ಬರೆದರೆ ದಂಡ

Published On :

ಹಾಸನ: ಆಟೋಗಳ ಮೇಲೆ ತಮ್ಮ ಇಷ್ಟ ಬಂದ ರೀತಿಯಲ್ಲಿ ಹೆಸರು ಬರೆಸುವ ಹಾಗೂ ಸಾರಿಗೆ ನಿಯಮ ಮುರಿಯುವ ಚಾಲಕರ ಹಾಗೂ ವಾಹನಗಳ ಪರವಾನಗಿ ರದ್ದುಗೊಳಿಸುವ ಕಠಿಣ ಕ್ರಮಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ.
ಹೌದು, ಆಟೋ ತುಂಬ ನೂರಾರು ಹೆಸರು ಹತ್ತಾರು ಸ್ಲೋಗನ್ ಬರೆಸಿ ನೋಡುಗರಿಗೆ ಅಸಹ್ಯ ಹಾಗೂ ಆನಂದ ಎರಡನ್ನು ಉಂಟುಮಾಡುತ್ತಿದ್ದ ಆಟೋ ಚಾಲಕರಿನ್ನು ಆ ರೀತಿ ಬರೆಸಿದರೆ ದಂಡ ಕಟ್ಟಲು ಹಣ ಹೊಂದಿಸಬೇಕಾಗಿರುವುದು ಅನಿವಾರ್ಯವಾಗುತ್ತದೆ.
ಹೊಗೆ ಉಗುಳುವ ಹಾಗೂ ಚಾಲನಾ ಪರವಾನಗಿ ಇಲ್ಲದೆ ಆಟೋ ಓಡಿಸುವುದು ಕಂಡು ಬಂದರೆ, ಶಾಲಾ ಮಕ್ಕಳನ್ನು ಸಾಗಿಸುವ ಆಟೋಗಳು ನಿಯಮಕ್ಕಿಂತ ಹೆಚ್ಚಿನ ಮಕ್ಕಳನ್ನು ತುಂಬಿದರೆ, ವಾಹನದ ಲೈಸನ್ಸ್  ರದ್ದುಪಡಿಸುವಂತಹ ಕಠಿಣ ನಿರ್ಧಾರಕ್ಕೆ ಎಆರ್‌ಟಿಓ ಕಚೇರಿ ಸಿಬ್ಬಂದಿ ಬಂದಿದ್ದು,  ಆಟೋಗಳ ಮೇಲಿನ ಸ್ಲೋಗನ್‌ನಿಂದ ಸಾಮಾಜಿಕ ವ್ಯವಸ್ಥೆಯ ಮೇಲೆ ಬಿರುತ್ತಿರುವ ದುಷ್ಪರಿಣಾಮ ಅರಿತು ಒಂದು ವಾರದಿಂದ ಆಟೋ ಗಾಜುಗಳ ಮೇಲೆ ಬರೆಸಿರುವ ನಾನಾ  ನಮೂನೆಯ ಹೆಸರಗಳನ್ನು ತೆಗೆಸಲಾಗುತ್ತಿದೆ. ಅಲ್ಲದೆ ಸ್ಥಳದಲ್ಲೇ 600 ರು. ದಂಡ ಹಾಕುತ್ತಿದ್ದಾರೆ.
ಶಾಲಾ ಮಕ್ಕಳನ್ನು ಸಾಗಿಸುವ ಆಟೋ ಸವಾರರು ಸಾರಿಗೆ ಇಲಾಖೆ ಸೂಚಿಸುವ ಹಲವು ನಿಯಮ ಕಡ್ಡಾಯವಾಗಿ ಪಾಲಿಸಬೇಕು. ತಪ್ಪಿದಲ್ಲಿ ಚಾಲನಾ ಅಥವಾ ಆಟೋ ಪರವಾನಗಿ ರದ್ದುಗೊಳಿಸುವ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆಯವರು ತಿಳಿಸಿರುವುದರಿಂದ ಪಟ್ಟಣದಲ್ಲಿ ನಿಧಾನಗತಿಯಲ್ಲಿ ಆಟೋ ಚಾಲಕರಲ್ಲಿ ಸುಧಾರಣೆ ಕಂಡು ಬರುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.