ಹಿರೀಸಾವೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಶಾಸಕ ಭರವಸೆ
ಹಿರೀಸಾವೆ (ಚನ್ನರಾಯಪಟ್ಟಣ ತಾ.): ದಿಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿರುವ ಹಿರೀಸಾವೆ ಹೋಬಳಿಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಜಿಪಂ ಅಧ್ಯಕ್ಷೆ ಅಂಬಿಕಾರಾಮಕೃಷ್ಣ ಉದ್ಘಾಟಿಸಿದರು.
ಕ್ರೀಡೆ ಮನುಷ್ಯನನ್ನು ಮಾನಸಿಕ ಹಾಗು ದೈಹಿಕವಾಗಿ ದೃಢಪಡಿಸುತ್ತದೆ. ಆದ್ದರಿಂದ ಮನುಷ್ಯನಿಗೆ ಕ್ರೀಡೆ ಅತ್ಯವಶ್ಯಕ ಎಂದು ಹೇಳಿ, ಹಿರೀಸಾವೆಯಲ್ಲಿ ಕ್ರೀಡಾಂಗಣ ನಿರ್ಮಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಕ್ರೀಡಾ ಧ್ವಜಾರೋಹಣ ನೆರವೇರಿಸಿ, ಹಿರೀಸಾವೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದೊಳಗೆ ಕ್ರೀಡಾಂಗಣ ನಿರ್ಮಿಸುವುದಾಗಿ ಹಾಗೂ ದಿಡಗದಲ್ಲಿ ಮಂದಿನ ಡಿಸೆಂಬರ್ ಒಳಗೆ ಷಟಲ್
ಬ್ಯಾಂಡ್ಮಿಂಟನ್ ಒಳಾಂಗಣ ಕ್ರೀಡಾಂಗಣರ್ನ್ಮಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ದಿಡಗ ಗ್ರಾಮಪಂಚಾಯ್ತಿ ಅಧ್ಯಕ್ಷೆ ಅನುಸೂಯ ಅವರು ಕ್ರೀಡಾಪಟುಗಳಿಗೆ ಶುಭಕೋರಿದರು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಅಣ್ಣೇಗೌಡ ದೈಹಿಕ ಶಿಕ್ಷಕರಿಗೆ ಪ್ರಮಾಣವಚನ ಭೋದಿಸಿದರು ಹಾಗೂ ಕ್ರೀಡೆಯಲ್ಲಿ ಸಕ್ರಿಯವಾಗಿ ಮಕ್ಕಳನ್ನು ತೊಡಗಿಸುವಂತೆ ಪೋಷಕರಲ್ಲಿ ಮನವಿ ಮಾಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಬಿ. ರಘುರಾವ್ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ತಾಪಂ ಮಾಜಿ ಸದಸ್ಯ ಬಿ. ಪುಟ್ಟರಾಜು ಹೋಬಳಿ ದೈಹಿಕ ಶಿಕ್ಷಕರ ಪರವಾಗಿ ಶಾಸಕರಿಗೆ ಸನ್ಮಾನಿಸಿದರು. ತಾಪಂ ಸದಸ್ಯೆ ಭವ್ಯ ಬಾಬು, ಗ್ರಾಪಂ ಸದಸ್ಯ ತ್ಯಾಗರಾಜು, ಜ್ಯೋತಿಷಿ, ಕ್ಲಸ್ಟರ್ ಡಿ.ಬಿ.ನಾಗೇಂದ್ರಕುಮಾರ್, ಶಿಕ್ಷಣ ಸಂಯೋಜಕರು, ಸರ್ಕಾರಿ ನೌಕರರ ಸಂಘದ ಸದಸ್ಯರಾದ ಇನಾಸಪ್ಪ, ಮಲ್ಲೇಗೌಡ, ಮಂಜಪ್ಪ ಇದ್ದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನಿಂಗಪ್ಪ ಕ್ರೀಡಾಕೂಟದ ಜವಾಬ್ದಾರಿ ನಿರ್ವಹಿಸಿದ್ದರು. ದೈಹಿಕಶಿಕ್ಷಕ ವೀರಭದ್ರಪ್ಪ ಸ್ವಾಗತಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ್ ವಂದಿಸಿದರು.
ನಾನಾ ಕ್ರೀಡೆಗಳಲ್ಲಿ ವಿಜೇತ ಮಕ್ಕಳಪಟ್ಟಿ: ಖೋ ಖೋ, ಕಬ್ಬಡ್ಡಿ ಥ್ರೋಬಾಲ್, ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ, ಹಾಗೂ ಆಟೋಟಗಳಲ್ಲಿಯೂ ಹೆಚ್ಚಿನ ಸ್ಥಾನ ಪಡೆದ ಹೊಯ್ಸಳ ವಿದ್ಯಾಸಂಸ್ಥೆ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿ ಕೊಂಡಿತು. ವಾಲಿಬಾಲ್ ಪಂದ್ಯದಲ್ಲಿ ಬಾಲಕರ ವಿಭಾಗದಲ್ಲಿ ಎಚ್.ಪಿ.ಬಿ.ಎಸ್ ಹಿರೀಸಾವೆ ಶಾಲೆ ಪ್ರಥಮಸ್ಥಾನ, ಜೆ.ಪಿ. ವಿದ್ಯಾ ಸಂಸ್ಥೆ ದ್ವಿತೀಯಸ್ಥಾನ ಪಡೆಯಿತು.
ಬಾಲಕಿಯರ ವಿಭಾಗ - ಕಬ್ಬಡಿ ಥ್ರೋಬಾಲ್, ಪಂದ್ಯದಲ್ಲಿ ಹೊಯ್ಸಳ ವಿದ್ಯಾಸಂಸ್ಥೆ ಪ್ರಥಮಸ್ಥಾನ, ಖೋ ಖೋ ಪಂದ್ಯದಲ್ಲಿ ಎಚ್.ಪಿ.ಎಸ್ ಮಾಕನಹಳ್ಳಿ ಪ್ರಥಮಸ್ಥಾನ, ವಾಲಿಬಾಲ್ ಪ್ರಥಮ ಸ್ಥಾನವನ್ನು ಎಚ್.ಪಿ. ಎಸ್ ಬಿಳಿಕೆರೆ ಶಾಲೆ ಪಡೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

