ರಸ್ತೆ ಅಭಿವೃದ್ಧಿಗೆ ರು. 40 ಕೋಟಿ ಆಗತ್ಯ: ಶಾಸಕ
ಕ.ಪ್ರ. ವಾರ್ತೆ ಸಕಲೇಶಪುರ ಆ. 11
ತಾಲೂಕಿನ ಹಾನುಬಾಳ್ ಹೋಬಳಿ ರಸ್ತೆಗಳ ಅಭಿವೃದ್ಧಿಗೆ 40 ಕೋಟಿ ರು. ಅಗತ್ಯವಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದ್ದಾರೆ. ಶನಿವಾರ ಹಾನುಬಾಳ್ ಹೋಬಳಿಯ ಅತಿವೃಷ್ಟಿ ಪೀಡಿತ ನಾನಾ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಹೋಬಳಿಯ ಬಹುತೇಕ ರಸ್ತೆಗಳು ಮಳೆಗೆ ಹಾಳಾಗಿ ಹೋಗಿದ್ದು, ವಾಹನ ಹಾಗೂ ಜನ ಸಂಚಾರ ದುಸ್ಥರವಾಗಿದೆ. ಹೋಬಳಿಯೊಂದರಲೇ ಸುಮಾರು 6 ಸೇತುವೆಗಳು ಹಾನಿಗೊಂಡಿವೆ. ಬತ್ತದ ಗದ್ದೆಗಳು ಹಾಗೂ ಏಲಕ್ಕಿ, ಕಾಫಿ ತೋಟಗಳ ಹಾನಿ ವರದಿ ಲೆಕ್ಕಕ್ಕೆ ಸಿಗದಾಗಿದೆ.
ಆದ್ದರಿಂದ ಈ ಭಾಗದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕನಿಷ್ಠ 40 ಕೋಟಿ ರು. ಅಗತ್ಯವಿದ್ದು, ಮೊದಲ ಹಂತದಲ್ಲೆ ತುತು ಪರಿಹಾರವಾಗಿ ಸರ್ಕಾರ 10 ಕೋಟಿ ರು. ಬಿಡುಗಡೆ ಮಾಡ ಬೇಕು ಎಂದರು.
ಅತಿವೃಷ್ಟಿ ಸಮೀಕ್ಷೆ ಅಂಗವಾಗಿ ಅಗನಿ, ಅವರೇಕಾಡು, ದೂಣಹಳ್ಳಿ, ಬೈಲಹಳ್ಳಿ, ಕುಂಬರಹಳ್ಳಿ, ನೆಲ್ಗಳ್ಳಿ, ಕೂಗರವಳ್ಳಿ, ಚಿಮ್ಮಿನಕೂಲು ಗ್ರಾಮದಲ್ಲಿ ಹಾನಿಗೊಂಡಿರುವ ಸರ್ಕಾರಿ ಸ್ವತ್ತುಗಳು ಹಾಗೂ ಖಾಸಗಿ ಆಸ್ತಿಪಾಸ್ತಿಗಳನ್ನು ವೀಕ್ಷಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

