ಹಾಸನ

ಗುರು ರಾಘವೇಂದ್ರರ ಆರಾಧನೆ 21ರಿಂದ

Published On :

ಮೈಸೂರು: ನಗರದ ಜಯಲಕ್ಷ್ಮೀಪುರಂ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯಿಂದ ಆ. 21 ರಿಂದ 23 ರವರೆಗೆ ರಾಘವೇಂದ್ರ ಗುರು ಸಾರ್ವಭೌಮರ 342ನೇ ಆರಾಧನಾ ಮಹೋತ್ಸವ ನಡೆಯಲಿದೆ. ಪ್ರತಿದಿನ ಬೆಳಗ್ಗೆ 5.30ಕ್ಕೆ ಸುಪ್ರಭಾತ, 7 ರಿಂದ 7.45 ಮಹಾ ಪಂಚಾಮೃತ ಅಭಿಷೇಕ, 8 ರಿಂದ 10 ರವರೆಗೆ ಕನಕಾಭಿಷೇಕ, ಸರ್ವಸೇವೆ, ಪಾದಪೂಜೆ, ಮಧ್ಯಾಹ್ನ 12ಕ್ಕೆ ಮಹಾಮಂಗಳರಾತಿ, 12.30 ಕ್ಕೆ ಪ್ರಸಾದ ವಿನಿಯೋಗ, ಸಂಜೆ 6.30 ರಿಂದ 9 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಆ. 20ರ ಸಂಜೆ 6.30ಕ್ಕೆ ರಾಶಿಪೂಜೆ, ಆ. 23ರ ಬೆಳಗ್ಗೆ 10ಕ್ಕೆ ಪ್ರಮುಖ ಬೀದಿಗಳಲ್ಲಿ ಗುರುರಾಯರ ರಥೋತ್ಸವ ಏರ್ಪಡಿಸಿದೆ. ಆ. 21ರ ಸಂಜೆ 6.30ಕ್ಕೆ ವಿದುಷಿ ಸುಮಾ ಸುಧೀಂದ್ರ ಮತ್ತು ವೃಂದದಿಂದ ವೀಣಾ ವಾದನ, ಆ. 22ರ ಸಂಜೆ 6.30ಕ್ಕೆ ಪಂಡಿತ್ ಓಂಕಾರನಾಥ್ ಹವಾಲ್ದಾರ್ ಮತ್ತು ಸಹೋದರರಿಂದ ಭಕ್ತಿ ಸಂಗೀತ, ಆ. 23ರ ಸಂಜೆ 6.30 ಕ್ಕೆ ವಿದುಷಿ ಐಶ್ವರ್ಯ ವಿದ್ಯಾ ರಘುನಾಥ್ ಮತ್ತು ವೃಂದದವರಿಂದ ಕರ್ನಾಟಕ ಸಂಗೀತ, ಆ. 24ರ ಸಂಜೆ 6 ಕ್ಕೆ ಸತ್ಯಧ್ಯಾನ ಭಜನಾ ಮಂಡಳಿಯಿಂದ ಗುರುಪಧಹಾರ ರೂಪಕ, ಸಂಜೆ 7ಕ್ಕೆ ಲಾಸ್ಯರಂಜನ ನೃತ್ಯಶಾಲೆಯವರಿಂದ ನೃತ್ಯ ಕಾರ್ಯಕ್ರಮ, ಭಕ್ತಿ ಸಿಂಚನ, ನೃತ್ಯನಿರ್ದೇಶನ ವಿದುಷಿ ಜ್ಯೋತಿ ಎನ್. ಹೆಗ್ಡೆ ಅವರಿಂದ ನಡೆಯಲಿದೆ.
ಅಸ್ವಸ್ಥ ಮಹಿಳೆ ಆಸ್ಪತ್ರೆಗೆ ದಾಖಲು
ಮೈಸೂರು: ಎನ್.ಆರ್. ಮೊಹಲ್ಲಾ ಕುರಿಮಂಡಿ ಶಂಕರ್ ನರ್ಸಿಂಗ್ ಹೋಂ ಹಿಂಭಾಗದ ಗುಡಿಸಲಿನಲ್ಲಿ ವಾಸವಾಗಿದ್ದ ಲತಾಮ್ಮ (55) ಎಂಬವರು ಅಸ್ವಸ್ಥಗೊಂಡಿದ್ದು, ಕೆ.ಆರ್. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಹರೆ- 5.3 ಅಡಿ ಎತ್ತರ, ಸಾಧಾರಣ ಶರೀರ, ಎಣ್ಣೆಗೆಂಪು ಮೈಬಣ್ಣ, ಕೋಲು ಮುಖ, ಆಕಾಶನೀಲಿ, ಬಿಳಿ ಮಾಸಲು ಬಣ್ಣದ ನೈಟಿ ಧರಿಸಿದ್ದಾರೆ. ಇವರ ವಾರಸುದಾರರು ಇದ್ದಲ್ಲಿ ದೂ. 0821- 2418312 ಸಂಪರ್ಕಿಸಲು ಎನ್.ಆರ್. ಠಾಣೆ ಪೊಲೀಸರು ಕೋರಿದ್ದಾರೆ.
ಸ್ವಯಂ ಉದ್ಯೋಗ ತರಬೇತಿ
ಮೈಸೂರು: ಗುರುರಾಘವೇಂದ್ರ ಕಂಪ್ಯೂಟರ್ ಟ್ರೈನಿಂಗ್ ಸೆಂಟರ್ ಭಾರತೀಯ ಕಂಪ್ಯೂಟರ್ ತಂತ್ರಜ್ಞಾನ ಕೇಂದ್ರದಿಂದ ಅಂಗವಿಕಲ ಯುವಕ- ಯುವತಿಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಲಿದ್ದು, ಆಸಕ್ತರು ಆ. 17 ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಮೊ. 7760240575 ಸಂಪರ್ಕಿಸಬಹುದು.


ಕುಂದು ಕೊರತೆ ಸಭೆ ಸೆ. 2ರಂದು
ಟಿ. ನರಸೀಪುರ: ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಸೆ. 2ರ ಬೆಳಗ್ಗೆ 11ಕ್ಕೆ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಅಂಗವಿಕಲರ ಕುಂದು ಕೊರತೆ ಸಭೆ ನಡೆಯಲಿದೆ. ತಾಲೂಕಿನ ಅರ್ಹ ಅಂಗವಿಕಲರು ಸಭೆಗೆ ಆಗಮಿಸಿ, ತಮ್ಮ ಕುಂದು ಕೊರತೆ ಪರಿಹರಿಸಕೊಳ್ಳಬೇಕು ಎಂದು ತಹಸೀಲ್ದಾರ್ ಕೋರಿದ್ದಾರೆ.
17ಕ್ಕೆ ಬೆಳ್ಳಿ ಗರುಡೋತ್ಸವ
ಟಿ. ನರಸೀಪುರ: ಪಟ್ಟಣದಲ್ಲಿ ಆ. 17ರ ಬೆಳಗ್ಗೆ 10.30ಕ್ಕೆ ಗುಂಜಾ ನರಸಿಂಹ ಸ್ವಾಮಿಯ ಬೆಳ್ಳಿ ಗರುಡೋತ್ಸವ ನಡೆಯಲಿದೆ. ಗುಂಜಾ ನರಸಿಂಹ ಸ್ವಾಮಿಯ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿರುವ 5ನೇ ವರ್ಷದ ಬೆಳ್ಳಿ ಗರುಡೋತ್ಸವ ಆ. 15ರ ಗುರುವಾರದಿಂದ ದೇವಾಲಯದಲ್ಲಿ ಹೋಮ ಹವನದೊಂದಿಗೆ ಉತ್ಸವವನ್ನು ವಿದ್ಯುಕ್ತವಾಗಿ ಪ್ರಾರಂಭಿಸಿದೆ. ಆ. 16ರ ಶುಕ್ರವಾರ ಪೂಜಾ ಕಾರ್ಯಕ್ರಮ ಜರುಗಲಿವೆ. ಆ. 17ರ ಬೆಳಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ಗರುಡೋತ್ಸವ ನಡೆಯಲಿದೆ. ನಂತರ ಮಧ್ಯಾಹ್ನ 12.30ಕ್ಕೆ ದಾಸೋಹ ಏರ್ಪಡಿಸಿದೆ ಎಂದು ಸೇವಾ ಸಮಿತಿ ತಿಳಿಸಿದೆ.
ಜೆಡಿಎಸ್ ಸಭೆ
ಎಚ್.ಡಿ. ಕೋಟೆ: ವಿಧಾನಪರಿಷತ್ ಉಪಚುನಾವಣೆಯ ಪೂರ್ವಭಾವಿ ಸಭೆಯು ಆ. 16ರಂದು ಮಂಗಳ ಮಂಟಪದಲ್ಲಿ ಶಾಸಕ ಎಸ್. ಚಿಕ್ಕಮಾದು ನೇತೃತ್ವದಲ್ಲಿ ನಡೆಯಲಿದೆ. ಪಪಂ, ಗ್ರಾಪಂ ಸದಸ್ಯರು ಭಾಗವಹಿಸುವಂತೆ ಕಾರ್ಯದರ್ಶಿ ಶಿವಯ್ಯ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.