ಪುಂಡಾನೆ ಸೆರೆಗೆ ಕೋರ್ಟ್ ಅನುಮತಿ: ಲಕ್ಷ್ಮಣ್
ಕನ್ನಡಪ್ರಭ ವಾರ್ತೆ ಹಾಸನ ಆ. 13
ವ್ಯಕ್ತಿಯೊಬ್ಬನನ್ನು ಬಲಿ ತೆಗೆದುಕೊಂಡಿದ್ದ ಮಖ್ನಾ ಆನೆಯನ್ನು ಸೆರೆ ಹಿಡಿಯಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ಡಿಎಫ್ಓ ಲಕ್ಷ್ಮಣ್ ತಿಳಿಸಿದರು.
ಸಕಲೇಶಪುರ ತಾಲೂಕಿನ ಚಿಕ್ಕಕಲ್ಲೂರು ಗ್ರಾಮದ ಲಕ್ಷ್ಮೇಗೌಡ ಎಂಬುವರನ್ನು ಜೂ.9 ರಂದು ಕೊಂಬು ಇಲ್ಲದ ಮಖ್ನಾ ಕಾಡಾನೆ ದಾಳಿ ನಡೆಸಿ ತುಳಿದು ಸಾಯಿಸಿತ್ತು. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆನೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದರು.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ್ ಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕಕಲ್ಲೂರು ಗ್ರಾಮದ ಲಕ್ಷ್ಮೇಗೌಡ ಅವರನ್ನು ಮಖ್ನಾ ಆನೆ ಬಲಿ ತೆಗೆದುಕೊಂಡಿತ್ತು. ಸಾರ್ವಜನಿಕರ ಒತ್ತಾಯದ ಮೇರೆಗೆ ಈ ಆನೆಯನ್ನು ಸೆರೆ ಹಿಡಿಯಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ಮಕ್ನಾ ಆನೆಯನ್ನು ಸೆರೆ ಹಿಡಿಯಲು ಅನುಮತಿ ನೀಡಿದೆ ಎಂದರು.
ಆನೆ ಹಿಡಿಯಲು ಕೆಲವು ನಿರ್ಭಂಧ ವಿಧಿಸಿದ್ದು, ಆನೆಗೆ ಯಾವುದೇ ರೀತಿಯ ಪೆಟ್ಟಾಗದಂತೆ ಸೇರಿ ಕೆಲವು ನಿಬಂದನೆಗಳನ್ನು ಹಾಕಿದೆ. . ಮಳೆ ನಿಂತ ಕೂಡಲೇ ಆನೆ ಸೆರೆ ಹಿಡಿಯುವ ಕಾರ್ಯ ಪ್ರಾರಂಭಿಸಲಾಗುತ್ತದೆ.
ಈ ಆನೆ ಚಿಕ್ಕಕಲ್ಲೂರು, ಕೊತ್ತನೂರು ಸೇರಿದಂತೆ ಇತರೆ ಗ್ರಾಮಗಳ ಸುತ್ತಮುತ್ತ ಸಂಚರಿಸುತ್ತಿದೆ. ಕೊಂಬು ಇಲ್ಲದ ಈ ಗಂಡು ಆನೆಯ ಚಲನವಲನದ ಬಗ್ಗೆ ಈಗಾಗಲೇ ಜಿಪಿಆರ್ಎಸ್ ಮೂಲಕ ಗಮನಿಸಲಾಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಈ ಮಕ್ನಾ ಆನೆಯ ಬಗ್ಗೆ ನಿಗಾವಹಿಸಿರುವುದಾಗಿ ತಿಳಿಸಿದ ಅವರು, ಆಲೂರು ಸುತ್ತಮುತ್ತ ಇದ್ದಂತಹ ಸುಮಾರು 25 ಕಾಡಾನೆಗಳು ಸೋಮವಾರಪೇಟೆ ಕಟ್ಟೇಪುರದಿಂದ ಇಲ್ಲಿಗೆ ಬರುತ್ತಿದ್ದವು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

