'ಬಡತನದಿಂದ ಮುಕ್ತವಾಗುವುದೇ ನಿಜ ದೇಶ ಪ್ರೇಮ'
ಕ.ಪ್ರ.ವಾರ್ತೆ ಹಾಸನ ಆ.15
ನಿಜವಾದ ದೇಶ ಪ್ರೇಮ ಎಂದರೆ ದೇಶದ ಜನ ಬಡತನದಿಂದ ಹೊರಬರುವ, ಎಲ್ಲರಿಗೂ ಉದ್ಯೋಗ, ವಸತಿ, ಶಿಕ್ಷಣ ಹಾಗೂ ಆರೋಗ್ಯ ನೀಡುವ ಆಲೋಚನಾ ಸಾಮರ್ಥ್ಯವನ್ನು ತಂದು ಕೊಡುವುದೇ ಆಗಿದೆ ಎಂದು ಮುಂಜಾನೆ ಮಿತ್ರದ ಅಧ್ಯಕ್ಷ ವೆಂಕಟೇಗೌಡ ತಿಳಿಸಿದರು.
ತಾಲೂಕಿನ ಕಲ್ಲಹಳ್ಳಿ ಪ್ರೌಢಶಾಲಾ ಆವರಣದಲ್ಲಿ ಗುರುವಾರ ಪ್ರೌಢಶಾಲೆ ಹಾಗೂ ಮುಂಜಾನೆ ಮಿತ್ರ ಆಯೋಜಿಸಿದ್ದ 67ನೇ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಎಂದರೆ ಬರೀ ಯಾಂತ್ರಿಕ ಆಚರಣೆಯ ಆದೇಶ ಮಾತ್ರವಾಗಿರದೇ, ದೇಶ ಪ್ರೇಮ ಎನ್ನುವುದು ನಾಲಗೆ ತುದಿಯಲ್ಲಿ ಸದಾ ಇರುವ ಘೋಷಣೆಯಾಗಿದೆ ಎಂದರು.
ಬಿಜಿವಿಎಸ್ ಕಾರ್ಯದರ್ಶಿ ಅಹಮದ್ ಮಾತನಾಡಿ, ಭಾರತದಲ್ಲಿ ಇಂದು ಜಾತೀಯವಾದ, ಕೋಮುವಾದ, ಭ್ರಷ್ಟಾಚಾರ ಹಾಗೂ ಖಾಸಗೀಕರಣದ ಭೂತಗಳು ಬೃಹತ್ ಬೆಳೆದಿವೆ. ಪಾಳೇಗಾರಿ ಮಾದರಿಯಲ್ಲಿರುವ ಪ್ರಜಾಪ್ರಭುತ್ವವನ್ನು ಜನತಾಪ್ರಜಾಪ್ರಭುತ್ವವಾಗಿ ಪರಿವರ್ತಿಸುವ ಜವಾಬ್ದಾರಿ ಇಂದಿನ ಯುವಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮುಂಜಾನೆ ಮಿತ್ರ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಒತ್ತು ನೀಡುವ ಉದ್ದೇಶದಿಂದ ನಗರ ಸಮೀಪದ ಕಲ್ಲಳ್ಳಿ ಶಾಲೆಯಲ್ಲಿ ಹತ್ತನೆ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳನ್ನು ಸನ್ಮಾನಿಸುವ ವಿವರವನ್ನು ಮುಂಜಾನೆ ಮಿತ್ರದ ಕಾರ್ಯದರ್ಶಿ ಸುಧೀರ್ ತಿಳಿಸಿ, ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ಲಕ್ಷ್ಮಿ.ಬಿ, ಎಚ್.ಗುರುಪ್ರಸಾದ್, ಡಿ.ಆರ್.ಸೋಮಶೇಖರರನ್ನು ಸನ್ಮಾನಿಸಲಾಯಿತು.
ಧ್ವಜಾರೋಹಣ ನಡೆಸಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಕಲ್ಲಹಳ್ಳಿ ಪ್ರೌಢಶಾಲೆಯ ಮುಖೋಪಾಧ್ಯಾಯಿನಿ ಮೋಹನಕುಮಾರಿ ಮಾತನಾಡಿದರು. ಮುಂಜಾನೆ ಮಿತ್ರರ ತಂಡದ ಧರ್ಮರಾಜ್, ಕೃಷ್ಣಕುಮಾರ್, ಅರುಣಕುಮಾರ್, ಧನರಾಜ್,ರುಕ್ಮಾಂಗದ, ಹೊಂಬೇಶ್, ಪ್ರಸನ್ನಕುಮಾರ್ ಜಗದೀಶ್ ಇದ್ದರು. ಶಿಕ್ಷಕ ರಾಘವೇಂದ್ರ ನಿರೂಪಿಸಿದರು. ಶಿಕ್ಷಕಿ ಉಮಾಮಣಿ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

