ಕಳ್ಳ ಬಾಲಕನ್ನು ಪೊಲೀಸರಿಗೊಪ್ಪಿಸಿದ ಜನತೆ
ಹಾಸನ: ಕಾರು ಮತ್ತು ಬೈಕ್ ಕಳವು ಮಾಡಲು ಯತ್ನಿಸುತ್ತಿದ್ದ ಬಾಲಕನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುರುವಾರ ನಗರದಲ್ಲಿ ನಡೆದಿದೆ. ತಾಲೂಕಿನ ಮೊಸಳೆ ಹೊಸಳ್ಳಿಯ ಕಳ್ಳೇನಹಳ್ಳಿ ನಿವಾಸಿ ಜಾಕೀರ್ ಎಂಬುವರ ಪುತ್ರ ಜಬ್ಬೀರ್ ಬಂಧಿತ ಆರೋಪಿ. ನಗರದ ಅರಳೇಪೇಟೆ ರಸ್ತೆಯಲ್ಲಿನ ಕಲ್ಯಾಣ ಮಂಟಪಕ್ಕೆ ವಿವಾಹಕ್ಕೆ ಆಗಮಿಸಿದ್ದವರು ತಮ್ಮ ವಾಹನಗಳನ್ನು ರಸ್ತೆ ಬಳಿ ನಿಲ್ಲಿಸಿ ಹೋದಾಗ ಕಳ್ಳ ವಾಹನ ಕಳವು ಮಾಡಲು ಯತ್ನಿಸಿದ. ಮೊದಲು ಎರಡು ಚಕ್ರ ವಾಹನ ಕಳವು ಮಾಡಲು ಪ್ರಯತ್ನಿಸಿ ವಿಫಲರಾಗಿ, ನಂತರ ಅಲ್ಲಿಂದ ತಪ್ಪಿಸಿಕೊಂಡಿದ್ದ. ನಂತರ ವಾಹನದ ಮಾಲೀಕರಿಗೆ ವಿಷಯ ತಿಳಿದು ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದರು. ಸಲ್ಪ ಸಮಯದಲ್ಲಿ ಮತ್ತೊಬ್ಬ ಕಳ್ಳನು ನಾಲ್ಕು ಚಕ್ರದ ವಾಹನದ ಡೋರ್ತೆಗೆಯಲು ನಕಲಿ ಕೀಯಿಂದ ಪ್ರಯತ್ನಿಸುವಾಗ ಸಾರ್ವಜನಿಕರಿಗೆ ಸಿಕ್ಕಿ ಬಿದ್ದಿದ್ದಾನೆ. ಈ ವಾಹನ ಕಳವು ಮಾಡಲು ಬಂದಿದ್ದ ಇಬ್ಬರೂ ಕೂಡ ಬಾಲಕರು ಆಗಿದ್ದು, ವಾಹನ ಕಳವಿನ ದೊಡ್ಡ ಗ್ಯಾಂಗ್ ಇಲ್ಲಿಯೆ ಸುತ್ತಾ ಮುತ್ತಾ ಇರಬಹುದು ಎಂಬ ಸಂಶಯ ಸಾರ್ವಜನಿಕರು ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

