ಹಾಸನ

ಐತಿಹಾಸಿಕ ಬತೇರಿ ಮೇಲೆ ಹಾರಿದ ರಾಷ್ಟ್ರಧ್ವಜ

Published On :

ಅರಕಲಗೂಡು: ಇಲ್ಲಿನ ಐತಿಹಾಸಿಕ ಪಾಳೇಗಾರರ ಕಾಲದ ಕೋಟೆಯ ಬತೇರಿ ಮೇಲೆ ತ್ರಿವರ್ಣಧ್ವಜ ಹಾರಿಸುವ ಮೂಲಕ ಇಲ್ಲಿನ ಯುವಕರ ಪಡೆ ಹೊಸ ಇತಿಹಾಸ ಸೃಷ್ಟಿಸಿತು.
 ದಟ್ಟನೆಯ ಕಾಡುಗಿಡಗಳಿಂದ ತುಂಬಿದ್ದ ಕೋಟೆಯ ಬತೇರಿ ಸುತ್ತ ಸ್ವಚ್ಚಗೂಳಿಸಿದ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯಎನ್.ರವಿಕುಮಾರ್, ಪಿ.ಎನ್.ರಮೇಶ್ ನೇತೃತ್ವದ ತಂಡ ರಾಷ್ಟ್ರಧ್ವಜ ಹಾರಿಸುವ ಏರ್ಪಾಟು ಮಾಡಿದ್ದರು. 3-4 ದಶಕಗಳಿಂದ ಬತೇರಿಯನ್ನೇ ನೋಡದಿದ್ದ ಸಾವಿರಾರು ಮಂದಿ ಬತೇರಿ ನೋಡುವ ಕುತೂಹಲದಿಂದ ತಂಡೋಪ ತಂಡವಾಗಿ ಸ್ಥಳಕ್ಕೆ ಬಂದು ವೀಕ್ಷಣೆ ಮಾಡಿದರು.
 ಧ್ವಜಾರೋಹಣ ದೊಡ್ಡಮ್ಮ ಸೇವಾ ಸಮಿತಿ ಅಧ್ಯಕ್ಷ ಎ.ಎಸ್.ರಾಮಸ್ವಾಮಿ ನೆರವೇರಿಸಿದರು. ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎನ್.ರವಿಕುಮಾರ್, ಎ.ಪಿ.ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯ ಪಿ.ಎನ್.ರಮೇಶ್, ಪಟ್ಟಣದ ಪ್ರಮುಖರುಗಳಾದ ವಕೀಲ ಶಂಕರಯ್ಯ, ಮೈಲಾರಿ, ವಿಸ್ಮಯಶಿವು ಮುಂತಾದವರು ಪಾಲ್ಗೊಂಡಿದ್ದರು.
ಸಂವಿಧಾನ ಗೌರವಿಸಿ: ಶಾಸಕ ಎ.ಮಂಜು
 ಅರಕಲಗೂಡು  ತಾಲೂಕಿನಾದ್ಯಂತ 67ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ತಾಲೂಕು ಆಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎ.ಮಂಜು ಸಮ್ಮುಖ ವಿವಿಧ ಶಾಲೆಗಳ  ವಿದ್ಯಾರ್ಥ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು. ತಹಸೀಲ್ದಾರ್ ಈಶ್ವರಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
 ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಸಮಾರಣಭದಲ್ಲಿ ತಹಸೀಲ್ದಾರ್ ಈಶ್ವರಪ್ಪ ಅವರು ಧ್ವಜಾರೋಹಣ ನೆರವೇರಿಸಿ, ಸಂದೇಶ ಓದಿದರು. ಪ್ರಮುಖ ಭಾಷಣ ಉಪನ್ಯಾಸಕ ಪ್ರೊ. ನಿರ್ವಾಣೇಗೌಡ ಮಾಡಿದರು. ಅಧ್ಯಕ್ಷತೆ ವಹಿಸಿ  ಶಾಸಕ ಎ.ಮಂಜು ಅವರು ಶಾಲೆಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಮತ್ತು ಅವರುಗಳ ತತ್ವಾದರ್ಶಗಳ ಬಗೆಗೆ ಹೇಳುವಂತಾಗಬೇಕು ಎಂದರು.
 ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.ವಿವಿಧ ಶಾಲಾ ಮಕ್ಕಳಿಂದ ಆಕರ್ಷಕ ಕಾವಾಯಿತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದುವು.
 ಜಿಪಂ ಸದಸ್ಯ ವಿ.ಎ.ನಂಜುಂಡಸ್ವಾಮಿ, ಭಾಗ್ಯಮ್ಮ, ತಾಪಂ ಅಧ್ಯಕ್ಷೆ ಕಾಮಾಕ್ಷಮ್ಮ, ಸದಸ್ಯ ನರಸೇಗೌಡ, ವೃತ್ತ ನಿರೀಕ್ಷಕ ಎಸ್.ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರಾಜು, ಸುರೇಶ್ಬಾಬು ಮುಂತಾದವರು ಉಪಸ್ಥಿತರಿದ್ದರು.
ಯುವಕರ ಮನಸೆಳೆದ ಕ್ರೀಡಾಕೂಟ
ಇಲ್ಲಿನ ಸ್ಟಾರ್ ಸ್ಪೋರ್ಟ್ ಕ್ಲಬ್ ವಿದ್ವಾನ್ ಆರ್.ಕೆ.ಪದ್ಮನಾಭ ಅಭಿಮಾನಿಗಳ ಬಳಗ ಮತ್ತು ಭುವನೇಶ್ವರಿ ಮಹಿಳಾ ಸೇವಾ ಕಲಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಗ್ರಾಮೀಣ ಕ್ರೀಡಾಸ್ಫರ್ಧೆ ಹಾಗೂ ಸಾಂಸ್ಕತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕ್ರೀಡಾಕೂಟ ಅಂಗವಾಗಿ ಕೆಸರುಗದ್ದೆ ಓಟ ಮತ್ತು ಹಗ್ಗ ಜಗ್ಗಾಟ, ಕೆಸರು ಗದ್ದೆ  ರಿಲೆ ಸ್ಪರ್ಧೆ ನಡೆದವು. ಕೆಸರುಗದ್ದೆ ಓಟ ಸ್ಪರ್ಧೆ 64 ಜನ, ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ 6 ತಂಡಗಳು, ರಿಲೇ ಓಟದ ಸ್ಪರ್ಧೆಯಲ್ಲಿ 8 ತಂಡಗಳು ಭಾಗವಹಿಸಿದ್ದವು.
 ಈ ಸಂಬಂಧ ನಡೆದ ಸಮಾರಂಭದಲ್ಲಿ ಶಾಸಕ ಎ.ಮಂಜು, ಉದ್ಯಮಿ ಕೃಷ್ಟೇಗೌಡ, ಎಂ.ಆರ್.ರಂಗಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯ ವಾಟಾಳ್ರಮೇಶ್,ಕರವೇ ತಾಲೂಕು ಅಧ್ಯಕ್ಷ ಭಾಸ್ಕರ್ ಇತರರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.