ಗ್ರಂಥಾಲಯ ಇತಿಹಾಸ ಸಂರಕ್ಷಿಸಿಡುವ ಕೇಂದ್ರ
ಕನ್ನಡಪ್ರಭ ವಾರ್ತೆ ಅರಸೀಕೆರೆ ಆ. 16
ಗ್ರಂಥಾಲಯಗಳು ಇತಿಹಾಸದ ದಾಖಲೆಗಳನ್ನು ಸಂರಕ್ಷಿಸಿಡುವ ಕೇಂದ್ರಗಳಾಗಿದ್ದು ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವುದರಿಂದ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ ಎಂದು ಚಿಕ್ಕಮಗಳೂರು ಐಡಿಎಸ್ಜಿ ಸರ್ಕಾರಿ ಕಾಲೇಜಿನ ಹಿರಿಯ ಗ್ರಂಥಪಾಲಕ ಎ ನರೇಂದ್ರ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ವೇದಿಕೆಯಿಂದ ಗ್ರಂಥಪಾಲಕರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗ್ರಂಥಾಲಯ ಮತ್ತು ಗ್ರಂಥಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದರು.
ಗ್ರಂಥಾಲಯಗಳು ದೇವಾಲಯಗಳಿದ್ದಂತೆ, ಅಲ್ಲಿನ ಪುಸ್ತಕಗಳೇ ದೇವರು, ಗ್ರಂಥಪಾಲಕರೇ ಅರ್ಚಕರಿದ್ದಂತೆ, ಓದುಗರೇ ಭಕ್ತರು ಮನುಷ್ಯನ ಬದುಕಿನಲ್ಲಿ ಗೊಂದಲಗಳು ಸೃಷ್ಟಿಯಾದಾಗ ಹೇಗೆ ದೇವರನ್ನು ಬೇಡಲು ಭಕ್ತಿಯಿಂದ ಪ್ರಾರ್ಥಿಸಲು ದೇವಾಲಯಗಳಿಗೆ ಬೇಟಿ ನೀಡುತ್ತೇವೆಯೋ ಹಾಗೆಯೇ ಗ್ರಂಥಾಲಯಗಳನ್ನು ಸದ್ಭಳಕೆ ಮಾಡಿಕೊಂಡು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಜ್ಞಾನಾರ್ಜನೆ ಜತೆಗೆ ಮನಸ್ಸಿಗೆ ನೆಮ್ಮದಿ ದೊರೆದು ನಿತ್ಯ ಜಂಜಾಟದಿಂದ ಹೊರಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ. ಸೈಯದ್ಬಾಷಾ ಅಧ್ಯಕ್ಷತೆ ವಹಿಸಿ ಮಾತನಾಡಿ, ಓದುಗರಿಗೊಂದು ಗ್ರಂಥ, ಗ್ರಂಥಕ್ಕೊಂದು ಓದುಗ ಎಂಬ ವಿಚಾರಧಾರೆಯೊಂದಿಗೆ 1969ರಲ್ಲಿ ರಾಷ್ಟ್ರದಲ್ಲಿ ಗ್ರಂಥಾಲಯಗಳು ಸ್ಥಾಪನೆಗೊಂಡವು. ಗ್ರಂಥಾಲಯಗಳು ಮತ್ತು ಶಿಕ್ಷಣ ಕ್ಷೇತ್ರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ಜಾಜೂರು ಗ್ರಾಪಂ ಸದಸ್ಯ ಸಿದ್ದೇಶ್ ಗ್ರಂಥಪಾಲಕ ಮಂಜುನಾಥ್, ಬೋಧಕರಾದ ದೊರೇಶ್, ವಿಶ್ವನಾಥ್, ಸುಬ್ರಮಣಿ ಮತ್ತು ನಾಗರಾಜ್ ಬೋಧಕೇತರ ಸಿಬ್ಬಂಧಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

