ಅಂತರಂಗದಲ್ಲಿ ಬಿಟ್ಟು ಬೇರೆಡೆ ದೈವತ್ವ ಹುಡುಕಾಟ
ಕ.ಪ್ರ.ವಾರ್ತೆ ಹಾಸನ ಆ.17
ನಮ್ಮಲ್ಲಿರುವ ದೈವತ್ವವನ್ನು ಬಿಟ್ಟು ಬೇರೆಡೆ ಹುಡುಕಾಟ ನಡೆಸಲಾಗುತ್ತಿದೆ. ಅಂತರಂಗದಲ್ಲಿಯೇ ದೈವತ್ವ ಇದ್ದರೂ ಕಾಣಿಸಿಕೊಳ್ಳುತ್ತಿಲ್ಲ ಎಂದು ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಹೇಳಿದರು.
ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಹಾಗೂ ಮಹಾವಿದ್ಯಾಲಯದಿಂದ ನಿರ್ಮಿಸಲಾಗುತ್ತಿರುವ ಧ್ಯಾನ ಮತ್ತು ಯೋಗ ಮಂದಿರ ನಿರ್ಮಾಣಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ನಂತರ ಸಭೆಯಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯನು ದೈವ ಸ್ವರೂಪನೇ ಆಗಿದ್ದಾನೆ. ಮನುಷ್ಯನ ಜೀವನ ಒಂದು ನಾಗಲೋಟದಲ್ಲಿ ಓಡುತ್ತಿರುತ್ತದೆ. ಸದಾಚಾರ ಮತ್ತು ಸನ್ಮಾರ್ಗದಲ್ಲಿ ಯಾರು ಇರುತ್ತಾರೋ ಅವರೆಲ್ಲರೂ ಬ್ರಾಹ್ಮಣರು. ಜ್ಞಾನವನ್ನು ಬೋಧಿಸುವ ಉದಾತ್ತ ಕಾರ್ಯ ಹಾಗೂ ಪ್ರಜ್ಞೆ ಉಪನ್ಯಾಸಕರಲ್ಲಿ ಬರಬೇಕೆಂದರು.
ರಾಮಕೃಷ್ಣ ಪರಮಹಂಸರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು ತತ್ವವನ್ನು ಪಾಲಿಸುವುದಕ್ಕೆ ಯಾವ ಜಾತಿ ಪಂಥ ಬೇಕಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ನಮ್ಮ ಮನಸ್ಸನ್ನು ಪ್ರಶಾಂತಗೊಳಿಸುವಲ್ಲಿ ಧ್ಯಾನ ಮಂದಿರ ಅಗತ್ಯವಿದೆ. ಜೀವನದಲ್ಲಿ ನೆಮ್ಮದಿ ಕಾಣಲಿ ಎಂಬ ಉದ್ದೇಶದಿಂದ ಧ್ಯಾನ ಮಂದಿರವನ್ನು ನಿರ್ಮಿಸಲಾಗುತ್ತಿದ್ದು, ನಮ್ಮ ಮನಸ್ಸಿನ ಶಕ್ತಿಯಿಂದ ನಮ್ಮನ್ನು ನಾವೇ ನಾಶ ಮಾಡಿಕೊಳ್ಳುತ್ತಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದರು. ಮಾನವನ ಶಕ್ತಿ ಯಾವ ಪ್ರಾಣಿಗೂ ಇಲ್ಲ. ವರ್ತಮಾನದ ಬಗ್ಗೆ ಆಲೋಚನೆ ಮಾಡಿ ಜೀವನ ಪಾವನ ಮಾಡಿಕೊಳ್ಳುವ ಸಲುವಾಗಿ ಧ್ಯಾನ ಮಂದಿರ ನಿರ್ಮಿಸಲಾಗುತ್ತಿದೆ ಎಂದರು.ನಾವು ಶುದ್ಧವಾಗಿಲ್ಲದಿದ್ದರೆ ಬೇರೆಯವರನ್ನು ನೋಡಿ ಕಲಿಯುವ ಮೂಲಕ ಆಧ್ಯಾತ್ಮಿಕತೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಬ್ರಹ್ಮಾನಂದ ತೀರ್ಥ ಸ್ವಾಮೀಜಿ, ಬ್ರಾಹ್ಮಣ ಸಂಘದ ಅಧ್ಯಕ್ಷ ಸಿ.ಎಸ್. ಕೃಷ್ಣಸ್ವಾಮಿ, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಪ್ರಾಂಶುಪಾಲ ಎಂ.ವಿ. ಸತ್ಯನಾರಾಯಣ್, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಆರ್. ಶೇಷಗಿರಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

