ಹಾಸನ

'ಶಾಶ್ವತ ನೀರಾವರಿಯಿಂದ ಮಾತ್ರ ಜಾವಗಲ್ ಹೋಬಳಿ ಅಭಿವೃದ್ಧಿ'

Published On :

ಕ.ಪ್ರ.ವಾರ್ತೆ ,  ಜಾವಗಲ್ ,  ಆ.18
ಶಾಶ್ವತ ನೀರಾವರಿ ಸೌಲಭ್ಯದಿಂದ ಮಾತ್ರ ಹೋಬಳಿಯ ಅಭಿವೃದ್ಧಿ ಸಾಧ್ಯವೆಂದು ಜಿಪಂ ಸದಸ್ಯ ಈ.ಎಚ್.  ಲಕ್ಷ್ಮಣ್ ಅಭಿಪ್ರಾಯಪಟ್ಟರು.
ಜಾವಗಲ್ ಗ್ರಾಮ ಪಂಚಾಯ್ತಿ ವಿಶೇಷ ಗ್ರಾಮಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆಗಾಲದಲ್ಲಿ ಜಿಲ್ಲೆಯ ಜಲಾಶಯಗಳಿಂದ ಅರಸೀಕೆರೆ ತಾಲೂಕಿನ ಎಲ್ಲಾ ಕೆರೆಕಟ್ಟೆಗಳಿಗೂ ನೀರು ಒದಗಿಸುವುದು ಅವಶ್ಯವಿದ್ದು ಇದಕ್ಕಾಗಿ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದರು. ಹಾಗೂ ಸಭೆಗೆ ಅಧಿಕಾರಿಗಳ ಗೈರುಹಾಜರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಗ್ರಾಮ ಸ್ವಚ್ಛತೆಗೆ ಗ್ರಾಮಸ್ಥರು ಮುತುವರ್ಜಿ ವಹಿಸಬೇಕೆಂದ ಅವರು, ಕೃಷಿಕರು ಅರಣ್ಯೀಕರಣ ಮತ್ತು ಮೀನುಗಾರಿಕೆಗೆ ಒತ್ತು ನೀಡಿ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳಬೇಕೆಂದರು. ತಾಪಂ ಸದಸ್ಯೆ  ಲಕ್ಷ್ಮೀರವಿಶಂಕರ್ ಮಾತನಾಡಿ, ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗೆ ಸಿಗುವಲ್ಲಿ ಗ್ರಾಮ ಪಂಚಾಯಿತಿ ಗಮನ ಹರಿಸಬೇಕು ಎಂದು ತಿಳಿಸಿದರು.
ತಾಪಂ ಸಹಾಯಕ ನಿರ್ದೇಶಕ ಮತ್ತು ನೋಡೆಲ್ ಅಧಿಕಾರಿ ಕೃಷ್ಣಮೂರ್ತಿ ಅವರು, ಉದ್ಯೋಗ ಖಾತ್ರಿ ಯೋಜನೆಯ ನಾನಾ ಕಾಮಗಾರಿಗಳು, ತೋಟಗಾರಿಕೆ, ಅರಣ್ಯೀಕರಣ, ಮೀನುಗಾರಿಕೆ, ವಸತಿ ಯೋಜನೆ,  ಶೌಚಾಲಯಗಳಿಗೆ ಅರ್ಹರ ಆಯ್ಕೆ ಮತ್ತು ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಉದ್ಯೋಗ ಖಾತ್ರಿ ಕ್ರಿಯಾಯೋಜನೆಗೆ ಗರಿಷ್ಠ ಮೊತ್ತದ ನಿಗದಿ ಇಲ್ಲವೆಂದರು.
ಗ್ರಾಪಂ ಮಾಜಿ ಸದಸ್ಯ  ಜೆ.ಎಸ್. ನರಸಿಂಹಸ್ವಾಮಿ, ಜೆ.ಆರ್. ವಸಂತಕುಮಾರ್, ಚಂದ್ರೇಗೌಡ, ಪಾಪೇಗೌಡ, ಸಿದ್ದೇಗೌಡ, ಚಿಕ್ಕಯ್ಯ, ಚಂದ್ರಶೇಖರ್ ಮಾತನಾಡಿ, ಜಾವಗಲ್‌ನ ಎಲ್ಲಾ ಬಡಾವಣೆಗಳಿಗೂ ಯಗಚಿ ಕುಡಿಯುವ ನೀರಿನ ಸೌಲಭ್ಯ, ಚರಂಡಿಗಳ ಸ್ವಚ್ಛತೆ, ಪೈಪ್‌ಲೈನ್ ದುರಸ್ತಿ ಮಾಡಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಗ್ರಾಪಂ ಗಮನ ನೀಡಬೇಕೆಂದರು.
ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಗಮನ ನೀಡುವುದಾಗಿ ತಿಳಿಸಿದರು. ಉಪಾಧ್ಯಕ್ಷ ರಂಗಸ್ವಾಮಿ ಸದಸ್ಯ ಲಕ್ಷ್ಮೇಗೌಡ, ಜಹೀರ್‌ಅಹಮದ್, ಸಿದ್ದಮ್ಮ, ಮಂಜುಳ, ಮಾಜಿ ಉಪಪ್ರಧಾನ್ ಕರಿಯಪ್ಪ, ಜೆ.ಎಚ್. ಶ್ರೀನಿವಾಸ್, ಚಂದ್ರಶೇಖರ್, ಮಲ್ಲೇಶಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.