ಹಾಸನ

ಖ್ಯಾತ ವೈದ್ಯ ಡಾ.ವೈ.ಡಿ.ನಂಜುಂಜಪ್ಪ ನಿಧನ: ಶ್ರದ್ಧಾಂಜಲಿ ಸಭೆ

Published On :

ಅರಸೀಕೆರೆ: ಪಟ್ಟಣದ ಖ್ಯಾತ ವೈದ್ಯ ಹಾಗೂ ಯಳನಡು ವಿದ್ಯಾ ಸಂಸ್ಥೆ ಸ್ಥಾಪಕ ಡಾ.ವೈ.ಡಿ.ನಂಜುಂಡಪ್ಪ(79) ಹೃದಯಾಘಾತದಿಂದ ಭಾನುವಾರ ರಾತ್ರಿ ವಿಧಿವಶರಾದರು. ಜೇನುಕಲ್ ಫಾರ್ಮಸಿ ಆಸ್ಪತ್ರೆ ಸ್ಥಾಪಿಸಿ ಬಡವರಿಗೆ ಗ್ರಾಮಾಂತರ ಪ್ರದೇಶದವರಿಗೆ ಅಚ್ಚುಮೆಚ್ಚಿನ ವೈದ್ಯರಾಗಿದ್ದ ಇವರು ಯಳನಡು ವಿದ್ಯಾಸಂಸ್ಥೆಯನ್ನು ಸ್ಥಾಪಿಸಲು ಕಾರಣರಾದರಲ್ಲದೆ ವಿವಿಧ ವಿದ್ಯಾಸಂಸ್ಥೆಗಳನ್ನು ಆರಂಭಿಸಿ ಅದರ ಅಭಿವೃದ್ಧಿಗೆ ಶ್ರಮಿಸಿದ್ದರು. ಅಲ್ಲದೇ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.
 ಅನಾರೋಗ್ಯದ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಇವರಿಗೆ ಪತ್ನಿ, ಇಬ್ಬರು ಗಂಡು, ಒಬ್ಬ ಹೆಣ್ಣುಮಗಳು ಇದ್ದಾರೆ.
 ನಂಜುಂಡಪ್ಪ ನಿಧನ ಪ್ರಯುಕ್ತ ಯಳನಡು ಸಂಸ್ಥೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.  ಬಸವರಾಜೇಂದ್ರ ಪ್ರೌಢಶಾಲೆಯ ಮುಂಭಾಗ ಶ್ರದ್ಧಾಂಜಲಿ ಸಭೆ ನಡೆಯಿತು.  ಯಳನಡು ಜಗದ್ಗುರು ಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಮಾಜಿ ಶಾಸಕ ಎಎಸ್.ಬಸವರಾಜು, ಮಾಜಿ ಜಿ.ಪಂ.ಅಧ್ಯಕ್ಷ ಜಿ.ಎಸ್.ಗುರುಸಿದ್ದಪ್ಪ, ಪರಶಿವಮೂರ್ತಿ, ದೇಶಾಣಿ ಮಾದೇಗೌಡ, ಪ್ರಕಾಶ್ ಇತರರು ಮಾತನಾಡಿದರು. ದಿವಂಗತರು ಪಟ್ಟಣದಲ್ಲಿ ವಿವೇಕಾನಂದ ಬಿಎಡ್.ಕಾಲೇಜು, ಸೇರಿದಂತೆ 11 ಪ್ರೌಢ ಶಾಲೆಗಳ ಸ್ಥಾಪನೆಗೆ ಕಾರಣರಾಗಿದ್ದಾರೆ. ಮಾಜಿ ಶಾಸಕ ಎ.ಎಸ್.ಬಸವರಾಜ್, ಡಾ.ಲೋಕೇಶ್, ವಕೀಲರಾದ  ಎನ್.ಡಿ.ಪ್ರಸಾದ್.ಹಾಗು ಬಿ.ಎನ್.ರವಿ. ಸೇರಿದಂತೆ ಸಂಸ್ಥೆಯ ಬೋಧಕವರ್ಗ ಸಂತಾಪ ವ್ಯಕ್ತಪಡಿಸಿದೆ. ಅಂತ್ಯ ಸಂಸ್ಕಾರ ತಾಲೂಕಿನ ಬಾಣಾವರ ಹೋಬಳಿ ಶ್ಯಾನೆಗೆರೆಯ ಅವರ ಜಮೀನಿನಲ್ಲಿ ಸೋಮವಾರ ಸಂಜೆ ನೆರವೇರಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.