ಹಾಸನ

'ಸ್ವಾರ್ಥ ರಾಜಕೀಯ:ಹಳ್ಳಿಗಳ ಅಭಿವೃದ್ಧಿಗೆ ತೊಡಕು'

Published On :

ಬೇಲೂರು: ಕೆಲ ರಾಜಕಾರಣಿಗಳ ಸ್ವಾರ್ಥದಿಂದ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಟಿ.ಡಿ.ತಮ್ಮಣ್ಣಗೌಡ ಅಭಿಪ್ರಾಯ ಪಟ್ಟರು.
 ಪಟ್ಟಣದ  ಚನ್ನಕೇಶವಸ್ವಾಮಿ ರಂಗಮಂದಿರದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 ಸ್ವಾತಂತ್ರ್ಯ ಪೂರ್ವದಲ್ಲಿ ಹಳ್ಳಿಗಳ ಸ್ಥಿತಿ ಹೇಗಿತ್ತೂ ಅದು ಇಂದಿಗೂ ಹಾಗೆ ಮುಂದುವರೆದಿದೆ. ರೈತ ಸ್ವಾವಲಂಬಿಯಾಗಿ ಬದುಕಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವತ್ತ ಸರ್ಕಾರ ಚಿಂತನೆ ನಡೆಸಬೇಕಾಗಿದೆ ಎಂದರು.
  ದೇಶದ ಆರ್ಥಿಕ ಮಟ್ಟವನ್ನು ಕೈಗಾರಿಕೆಯಿಂದ ಅಳತೆ ಮಾಡುವುದನ್ನು ಇಂದಿನ ರಾಜಕಾರಣಿಗಳು ಮೊದಲು ಬಿಡಬೇಕು. ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅಲೋಚನೆ ಮಾಡಬೇಕು ಎಂದು ತಿಳಿಸಿದರು.
 ಪ್ರಗತಿ ಪರ ಸಂಘಟನೆ ಅಧ್ಯಕ್ಷ ಕೆ.ಸುದರ್ಶನ್ ಮಾತನಾಡಿ, ಭವ್ಯ ಭಾರತದ ಸ್ವಾತಂತ್ರಕ್ಕೆ ಕನ್ನಡ ನಾಡಿನ ಕೊಡುಗೆ ಅಪಾರವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಉತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಗೆ ಸದಸ್ಯತ್ವ ಅಭಿಯಾನ ಕೈಗೊಳ್ಳಬೇಕು, ಹಾಗೂ ಸಭೆ ಸಮಾರಂಭದಲ್ಲಿ ಹೂ ಮಾಲೆಗಳನ್ನು ಬಿಟ್ಟು ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಗಣ್ಯರಿಗೆ ನೀಡಬೇಕು ಎಂದು ಸಲಹೆ ನೀಡಿದರು.
 ತಹಸೀಲ್ದಾರ್ ಅಣ್ಣೇಗೌಡ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಬಂದು 67 ವರ್ಷ ಕಳೆದರೂ ನಮ್ಮ ಹಕ್ಕು ಭಾದ್ಯತೆಗಳಿಗೆ ಹೋರಾಟ ಮಾಡುವ ದುಸ್ಥಿತಿ ಬಂದಿದೆ ಎಂದರು.
 ತಾಲೂಕು ಕಸಾಪ ಉಪಾಧ್ಯಕ್ಷ ಮಾ.ನ.ಮಂಜೇಗೌಡ, ತಾಪಂ ಅಧ್ಯಕ್ಷೆ ಸುಮಿತ್ರರುದ್ರಯ್ಯ, ಸದಸ್ಯ ಪರ್ವತಯ್ಯ ಮಾತನಾಡಿದರು. ಸಾಹಿತ್ಯ ಪರಿಷತ್ ಪದಾಧಿಕಾರಿಗಳಾದ ಪತ್ರಕರ್ತ ರಾಘವೇಂದ್ರಹೊಳ್ಳ, ಅರುಣಕುಮಾರ್, ಉಪನ್ಯಾಸಕ ಆರ್.ಎಸ್.ಮಹೇಶ್, ಬಿರಟೆಮನೆ ಸುರೇಶ್, ಶಿಕ್ಷಕ ಅನಂದ್, ಸಾಹಿತಿ ಕುಮಾರಸ್ವಾಮಿ ಇನ್ನು ಮುಂತಾದವರು ಹಾಜರಿದ್ದರು.
 ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಅಯ್ಕೆಯಾದ ಶಿಕ್ಷಕ ಅನಂದ, ಕೃಷ್ಣೇಗೌಡ ಮತ್ತು ಬಿರಟೆಮನೆ ಸುರೇಶ್ ಇವರನ್ನು ಅಭಿನಂಧಿಸಲಾಯಿತು. ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.