ಹಾಸನ

ಹಾಚಗೋಡನಹಳ್ಳಿ ಶಿವಣ್ಣಗೆ ರಂಗ ಕೌಸ್ತುಭ ಪ್ರದಾನ

Published On :

ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಡಾ. ರಂಗಪ್ಪದಾಸ್ ಅವರ ನಿರ್ದೇಶನದಲ್ಲಿ ಇತ್ತೀಚೆಗೆ ಪ್ರಚಂಡ ರಾವಣ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹಾಸನ ತಾಲೂಕು ರಂಗ ಸಂಗೀತ್ ಪರಿಷತ್ ಕಲಾವಿದರು ಜಿಲ್ಲೆಯ ಹಿರಿಯ ರಂಗಭೂಮಿ ಕಲಾವಿದರಾದ ಹಾಚಗೋಡನಹಳ್ಳಿ ಶಿವಣ್ಣರವರಿಗೆ ರಂಗಕೌಸ್ತುಭ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಈ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಹಾಸನ ಜಿಲ್ಲಾ ರಂಗ ಸಂಗೀತ ಪರಿಷತ್ ಕಾರ್ಯದರ್ಶಿ ಯಲಗುಂದ ಶಾಂತಕುಮಾರ್, ಜಿಲ್ಲೆಯಲ್ಲಿ ಕಲಾವಿದರಿಗೆ ರಂಗತಾಲೀಮಿಗೆ ಕೊಠಡಿಗಳ ಅವಶ್ಯಕತೆ ಹೆಚ್ಚಾಗಿದೆ. ಇದಕ್ಕಾಗಿ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಮೂರು ರಂಗತಾಲೀಮಿನ ಕೊಠಡಿಗಳನ್ನು ನಿರ್ಮಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳವರಲ್ಲಿ ಸಂಘದ ಕಲಾವಿದರೆಲ್ಲಾ ಸೇರಿ ಮನವಿ ಮಾಡುವುದಾಗಿ ತಿಳಿಸಿದರು.
ಸ್ವಾತಂತ್ರ್ಯ ಹೋರಾಟಗಾರ  ಹೆಚ್.ಎಂ.ಶಿವಣ್ಣ  ಪ್ರಶಸ್ತಿ ಪ್ರದಾನ ಮಾಡಿದರು. ರಂಗಭೂಮಿ ಕಲಾವಿದರಾದ ಸಿ.ಎಂ. ಶ್ರೀಕಂಠಪ್ಪ, ಶಶಿಕಾಂತ್, ಡಿ.ವಿ,ಮೋಹನ್, ವೈ.ಎಸ್.ಶಾಂತಕುಮಾರ್, ಸಾಹಿತಿ ಗೊರೂರು ಅನಂತರಾಜು, ಪ್ರದೀಪ್, ಕೆ.ಕುಮಾರ್,ಕಲ್ಲಯ್ಯ, ರಂಗ ನಿರ್ದೇಶಕ ಡಾ.ರಂಗಪ್ಪದಾಸ್, ಪಾಲಾಕ್ಷಾಚಾರ್,ಎಂ.ಮಹದೇವ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.