ಸಾರಿಗೆ ಅಧಿಕಾರಿಗಳ ಧೋರಣೆಗೆ ಜಯ ಕರ್ನಾಟಕ ಖಂಡನೆ
ಕ.ಪ್ರ.ವಾರ್ತೆ , ಬೇಲೂರು , ಆ.21
ಕಳೆದ ತಿಂಗಳು ಬೇಲೂರಿನ ವಿಷ್ಣುಸಮುದ್ರ ಕೆರೆಗೆ ಬಸ್ ಬಿದ್ದು ದೊಡ್ಡ ದುರಂತ ಸಂಭವಿಸಿದ್ದರೂ ಇನ್ನೂ ಎಚ್ಚೆತ್ತುಕೊಳ್ಳದ ಕೆಎಸ್ಆರ್ಟಿಸಿ ಅಧಿಕಾರಿಗಳ ಧೋರಣೆಯನ್ನು ಜಯ ಕರ್ನಾಟಕ ಸಂಘಟನೆಯ ತಾಲೂಕು ಯುವ ಘಟಕದ ಅಧ್ಯಕ್ಷ ಬಿ.ಬಿ.ಶಿವರಾಜ್ ಖಂಡಿಸಿದ್ದಾರೆ.
ಕಳೆದ ತಿಂಗಳು ದುರಂತ ಸಂಭವಿಸಿದ ಸಂದರ್ಭದಲ್ಲಿ ಜನರ ಕಣ್ಣೊರೆಸುವುದಕ್ಕೆಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಮೈಸೂರಿನಿಂದ 6 ಬಸ್ಗಳನ್ನು ತರಿಸಿದ್ದರು. ಆದರೆ ಆ ಬಸ್ಗಳು ಬೇಲೂರು ಮತ್ತು ಸಕಲೇಶಪುರ ರಸ್ತೆಯಲ್ಲಿ ಹೋಗಿ ಬರುವಾಗ ಕೆಲವೇ ದಿನಗಳಲ್ಲಿ ರಿಪೇರಿಗೆ ಬಂದಿರುವುದು ವಿಪರ್ಯಾಸ ಎಂದಿದ್ದಾರೆ. ಕಾರಣ ಈ ಬಸ್ಗಳು ಈ ರಸ್ತೆಯಲ್ಲಿ ಸಂಚರಿಸಲು ಯೋಗ್ಯವಿಲ್ಲದಿದ್ದರೂ ಜನರ ಕಣ್ಣೊರೆಸುವುದಕ್ಕಾಗಿ ಬಸ್ಗಳನ್ನು ತಂದಿದ್ದಾರೆ ಎಂಬುದು ತಡವಾಗಿ ಬೆಳಕಿಗೆ ಬರುತ್ತಿದೆ ಎಂದು ದೂರಿದ್ದಾರೆ.
ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಬಸ್ನಿಂದ ಇಳಿದು ರಸ್ತೆ ಸಾರಿಗೆ ಸಂಸ್ಥೆಯವರಿಗೆ ಹಿಡಿ ಶಾಪ ಹಾಕುತಿದ್ದಾರೆ. ಗ್ರಾಮಾಂತರ ಪ್ರದೇಶಗಳಿಗೆ ಹೋಗುತ್ತಿರುವ ಬಸ್ಗಳು ಸುಸ್ಥಿತಿಯಲ್ಲಿ ಇಲ್ಲದಿದ್ದರೂ ಅಂತಹ ಬಸ್ಗಳನ್ನು ಕಳುಹಿಸುವುದರಿಂದ ಸಾಕಷ್ಟು ಸಾರ್ವಜನಿಕರು ತೊಂದರೆ ಅನುಭವಿಸುವಂತ್ತಾಗಿದೆ. ಲ್ದಾಣಗಳಲ್ಲಿ ಈಗ ಬಿಟ್ಟಿರುವ ಬಸ್ಗಳಲ್ಲಿ ಕೆಲವು ಗಂಟೆಗಟ್ಟಲೆ ಕೆಟ್ಟು ನಿಲ್ಲುತ್ತಿವೆ .ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಆದ್ದರಿಂದ ಗ್ರಾಮಾಂತರ ಪ್ರದೇಶಗಳಿಗೆ ಸಾಕಷ್ಟು ಸುಸ್ಥಿತಿಯಲ್ಲಿರುವ ಬಸ್ಗಳನ್ನು ಹಾಕುವುದರ ಮೂಲಕ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕು. ಇಲ್ಲದಿದ್ದಲ್ಲಿ ಡಿಪೋಗಳ ಮುಂದೆ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜಯ ಕರ್ನಾಟಕ ಸಂಘಟನೆಯ ಯುವ ಉಪಾಧ್ಯಕ್ಷ ಗೌತಮ್, ನಗರಾಧ್ಯಕ್ಷ ಗಿರೀಶ್, ಜಗದೀಶ್, ಕೃಷ್ಣ, ಧರ್ಮೇಶ್, ಆಟೋ ಕುಮಾರ್ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

