ಸಾಹಿತ್ಯಗಳಿಗೆಲ್ಲ ಮೂಲ ಬೇರು ಜನಪದ
ಕ.ಪ್ರ.ವಾರ್ತೆ , ಹೊಳೆನರಸೀಪುರ , ಆ.21
ಎಲ್ಲ ಸಾಹಿತ್ಯ ಪ್ರಕಾರಗಳಿಗೂ ಮೂಲ ಬೇರು ಜನಪದ ಸಾಹಿತ್ಯವಾಗಿದ್ದು, ಅನಕ್ಷರಸ್ಥರಿಂದ ಹಿಡಿದು ಎಲ್ಲ ವರ್ಗದ ಜನರ ಜೀವನಾಡಿಯಾಗಿ ಜನಪದ ಸಾಹಿತ್ಯ ಬೆಳೆದುಬಂದಿದೆ ಎಂದು ಇಲ್ಲಿನ ಆದರ್ಶ ವಿದ್ಯಾಲಯದ ಪ್ರಾಂಶುಪಾಲ ಎಸ್.ಆರ್.ಲೋಕೇಶ್ ನುಡಿದರು.
ರಾಜ್ಯ ಜಾನಪದ ಪರಿಷತ್ತಿನ ತಾಲೂಕು ಘಟಕದ ವತಿಯಿಂದ ಮಂಗಳವಾರ ಆದರ್ಶ ವಿದ್ಯಾಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲೆಗೊಂದು ಜನಪದ ಗೀತೆ ಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾನಪದ ಗೀತೆ ಹಾಗೂ ನೃತ್ಯ ಕಲೆಯನ್ನು ಮುಂದಿನ ತಲೆಮಾರಿಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಯುವ ವಕೀಲರಾದ ಕೆ.ಆರ್.ಜಯಪ್ರಕಾಶ್ ಮಾತನಾಡಿ, 6ನೇ ಶತಮಾನದಿಂದ ಆರಂಭಗೊಂಡ ಜನಪದ ಕಲಾ ಸಂಸ್ಕೃತಿಯಲ್ಲದೇ, ರಾಗಿ ಬೀಸುವ ಪದ, ಸೋಬಾನೆ ಪದ, ಗೀಗೀ ಪದ ಮೊದಲಾದ ಜಾನಪದ ಗ್ರಾಮೀಣ ಸೊಗಡಿನ ಕಲೆಗಳು ಇಂದು ಮರೆಯಾಗುವ ಹಂತ ತಲುಪುತ್ತಿದ್ದು, ಇವುಗಳನ್ನು ಉಳಿಸುವ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಾನಪದ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಬಾ.ರಾ.ಸುಬ್ಬರಾಯ ಮಾತನಾಡಿದರು. ಜನಪದ ಗೀತ ಗಾಯನ ಸ್ಪರ್ಧೆಯಲ್ಲಿ ಶಾಲೆಯ ಯಶಸ್ಗೌಡ-ಪ್ರಥಮ, ಸುಮಂತ್ ದ್ವಿತೀಯ ಹಾಗೂ ನಿಹಾರಿಕಾ-ತೃತೀಯ ಸ್ಥಾನ ಗಳಿಸಿದರು. ಕಾವ್ಯಶ್ರೀ ಕೃಷ್ಣ ಅವರು ಜನಪದ ಗೀತೆಗಳ ವಿವರಣೆಯೊಂದಿಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಪರಿಷತ್ತಿನ ಖಜಾಂಚಿ ಜಿ.ಪಿ.ಮಂಜುನಾಥ ಗುಪ್ತ, ಎಚ್.ಆರ್.ವೀರಬಸಪ್ಪ, ಗುಂಜೇವು ಅಣ್ಣಾಜಪ್ಪ, ನಾಗಲಾಪುರ ಕುಮಾರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

