ಚೀಕನಹಳ್ಳಿ ಶಾಲೆಗೆ ಸಮಗ್ರ ಪ್ರಶಸ್ತಿ
ಬೇಲೂರು: ಪಟ್ಟಣದಲ್ಲಿ ನಡೆದ ಅಂತರ್ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಚೀಕನಹಳ್ಳಿ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ತಾಲೂಕಿನ ಗೆಂಡೇಹಳ್ಳಿ, ತೊಳಲು, ಐರವಳ್ಳಿ, ಕೋಗೋಡು ಅಂತರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಚೀಕನಹಳ್ಳಿ ಶಾಲೆಯ ಬಾಲಕರ ವಿಭಾಗದಲ್ಲಿ 100 ಮೀಟರ್ ಓಟ ಪ್ರಥಮ ಹಾಗೂ ದ್ವಿತೀಯ, 400 ಮೀಟರ್ ಓಟ ಪ್ರಥಮ, 600 ಮೀ ಪ್ರಥಮ, 400 ್ಢ 100 ರಿಲೇ ಪ್ರಥಮ, ಗುಂಡು ಮತ್ತು ತಟ್ಟೆ ಎಸೆತ ಪ್ರಥಮ, ಎತ್ತರ ಜಿಗಿತ ತೃತಿಯ, ಉದ್ದ ಜಿಗಿತ ಪ್ರಥಮ, ಖೋಖೋ ಪ್ರಥಮ ಹಾಗೂ 7 ನೇ ತರಗತಿ ವಿದ್ಯಾರ್ಥಿ ಮಂಜುನಾಥ್ ಬಾಲಕರ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಗಳಿಸಿದ್ದಾನೆ.ಬಾಲಕಿಯರ ವಿಭಾಗದಲ್ಲಿ 100 ಮೀಟರ್ ಓಟದಲ್ಲಿ ದ್ವಿತೀಯ, 200 ಮೀಟರ್ ತೃತೀಯ, 400 ಮೀಟರ್ ಪ್ರಥಮ, 600 ಮೀಟರ್ ಪ್ರಥಮ, 600 ಮೀಟರ್ ದ್ವಿತೀಯ, ರಿಲೆ ಪ್ರಥಮ, ಗುಂಡು ಎಸೆತ ಪ್ರಥಮ, ತಟ್ಟೆ ಎಸೆತ ಪ್ರಥಮ, ದ್ವಿತಿಯ, ಎತ್ತರ ಜಿಗಿತ ದ್ವಿತಿಯ, ಖೋಖೋ ಪ್ರಥಮ, ಕಬಡ್ಡಿ ಪ್ರಥಮ ಹಾಗೂ 7 ನೇ ತರಗತಿ ಪೂರ್ಣಿಮ ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ.
ಮಾಜಿ ಸೈನಿಕರ ಮಕ್ಕಳಿಂದ ಶಿಷ್ಯವೇತನಕ್ಕೆ ಅರ್ಜಿ
ಹಾಸನ: ಪ್ರಸಕ್ತ ಸಾಲಿಗಾಗಿ ಮಾಜಿ ಸೈನಿಕರ ಮಕ್ಕಳಿಂದ ಶಿಷ್ಯವೇತನ ಹಾಗೂ ಪುಸ್ತಕ ಅನುದಾನದ ಮಂಜೂರಾತಿಗಾಗಿ ಅರ್ಜಿ ಅಹ್ವಾನಿಸಲಾಗಿದೆ. 1ನೇ ತರಗತಿಯಿಂದ ಅಂತಿಮ ಪದವಿ ಮತ್ತು ಡಿಪ್ಲೋಮ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಾಜಿ ಸೈನಿಕರ ಮಕ್ಕಳು ಈ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಈ ಕಾರ್ಯಾಲಯದ ಕಾರ್ಯಾ ವ್ಯಾಪ್ತಿಯ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬರುವ ಮಾಜಿ ಸೈನಿಕರು, ಮಾಜಿ ಸೈನಿಕರ ಅವಲಂಬಿತರು ಉಪ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ವಾಸವಿ ನಿಲಯ, ಶಂಕರೀಪುರಂ, 1ನೇ ಕ್ರಾಸ್, ಬಿ.ಎಂ ರಸ್ತೆ, ಹಾಸನ ಇವರಿಂದ ಅರ್ಜಿ ಶುಲ್ಕ ರಹಿತವಾಗಿ ಪಡೆಯಬಹುದಾಗಿದೆ. ಅರ್ಜಿಸಲ್ಲಿಸಲು ಸೆ.30 ಕೊನೆ ದಿನವಾಗಿದೆ. ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.
ರಾಷ್ಟ್ರ ಮಟ್ಟದ ಸ್ಪರ್ಧೆಗೆ ಚಿಣ್ಣರ ಆಯ್ಕೆ
ಹಾಸನ: ಮುಂಬೈನಲ್ಲಿ ಆ.31 ಮತ್ತು ಸೆ.1 ರಂದು ನಡೆಯಲಿರುವ ರಾಷ್ಟ್ರಮಟ್ಟದ ಅಬಾಕಸ್ ಹಾಗೂ ಮೆಂಟಲ್ ಅರ್ಥಮೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಹಾಸನದ 8 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಹಾಸನ ಜಯನಗರದಲ್ಲಿರುವ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಸೆಂಟರ್ನಿಂದ ತರುಣ್ಸಾಗರ್, ಶ್ರೀರಾಂ ಹಾರನಹಳ್ಳಿ, ಬಿ.ಮನ್ವಿತ್, ಆರ್. ಭುವನೇಶ್ ಹಾಗೂ ಐಡಿಯಲ್ ಪ್ಲೇ ಅಬಾಕಸ್ನ ಎಸ್.ಜಿ.ಆರ್. ಸೆಂಟರ್ನಿಂದ ಲಕ್ಷ್ಮೀ, ಪ್ರಜ್ವಲ್, ವಿಸ್ಮಯ ಲೋಕೇಶ್, ಚಂದನ್ ಆಯ್ಕೆಯಾಗಿದ್ದಾರೆ. ಇವರು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲೂ ವಿಜೇತರಾಗಲಿ ಎಂದು ಅಬಾಕಸ್ ಸೆಂಟರ್ ಮುಖ್ಯಸ್ಥರು ಶುಭ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

