ಹಾಸನ

ಬ್ಯಾಡ್ಮಿಂಟನ್ ತರಬೇತಿದಾರರನೇಮಕಕ್ಕೆ ಆಹ್ವಾನ

Published On :

ಹಾಸನ: ಪ್ರಸ್ತುತ ಹಾಸನ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಸಿದ್ದಪಡಿಸಿರುವ ವುಡನ್ ಬ್ಯಾಡ್ಮಿಂಟನ್ ಅಂಕಣದಲ್ಲಿ ಕ್ರೀಡಾಪಟುಗಳಿಗೆ ಬೆಳಗ್ಗೆ ಮತ್ತು ಸಂಜೆ  ತರಬೇತಿಯನ್ನು ನೀಡಲು ಆಸಕ್ತ, ಅನುಭವ ಇರುವ ಅರ್ಹ ತರಬೇತುದಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.     
ಕೋಚಿಂಗ್ ಸರ್ಟಿಫಿಕೇಟ್ ಇನ್ ಬ್ಯಾಡ್ಮಿಂಟನ್, ಎಂ.ಪಿ.ಎಡ್ (ಬ್ಯಾಡ್ಮಿಂಟನ್) ವಿದ್ಯಾರ್ಹತೆ ಹೊಂದಿರಬೇಕು. ಗೌರವ ಸಂಭಾವನೆ  ಮಾಹೆಯಾನ 10 ಸಾವಿರ ರು. ನೀಡಲಾಗುವುದು.
ಅರ್ಜಿಗಳನ್ನು ಬಿಳಿ ಹಾಳೆಯಲ್ಲಿ ಭರ್ತಿ ಮಾಡಿ ಆ.30ರ ಸಂಜೆ 5 ರೊಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಸಾಲಗಮೆ ರಸ್ತೆ, ಹಾಸನ-573201 ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಅರ್ಜಿ ಲಕೋಟೆಯ ಮೇಲೆ ಬ್ಯಾಡ್ಮಿಂಟನ್ ತರಬೇತಿದಾರರ ಹುದ್ದೆಗೆ ಅರ್ಜಿ ಎಂದು ನಮೂದಿಸಿ  ಲಕೋಟೆಯನ್ನು ಅಂಟಿಸಿ ಸಲ್ಲಿಸತಕ್ಕದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.