ಹೇಮಾವತಿ ಡ್ಯಾಂ: 4488 ಕ್ಯುಸೆಕ್ ಒಳಹರಿವು
ಹಾಸನ: ಹೇಮಾವತಿ ಜಲಾಶಯಕ್ಕೆ 4488 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 4250 ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.81 ಅಡಿಯಾಗಿದ್ದು, 36.919 ಟಿಎಂಸಿ ನೀರು ಸಂಗ್ರಹವಾಗಿದೆ. ಯಗಚಿ ಜಲಾಶಯ: ನೀರಿನ ಮಟ್ಟ 3164.726 ಅಡಿ, ಒಳ ಹರಿವು 200 ಕ್ಯುಸೆಕ್, ಹೊರ ಹರಿವು ನದಿಗೆ ಕ್ಯುಸೆಕ್, ನಾಲೆಗೆ 175 ಕ್ಯುಸೆಕ್, ಒಟ್ಟು 3.600 ಟಿಎಂಸಿ ನೀರು ಸಂಗ್ರಹವಾಗಿದೆ. ವಾಟೆ ಹೊಳೆ: 3165.68 ಅಡಿ, ಒಳ ಹರಿವು 90 ಕ್ಯುಸೆಕ್, ಹೊರ ಹರಿವು 90 ಕ್ಯುಸೆಕ್, ಒಟ್ಟು 1.304 ಟಿಎಂಸಿ ನೀರು ಸಂಗ್ರಹವಾಗಿದೆ. ತಾಲೂಕುವಾರು ಮಳೆ ವಿವರ: ಆಲೂರು 5, ಹಾಸನ 2.4, ಸಕಲೇಶಪುರ1.8 ಮಿ.ಮೀಟರ್ ಮಳೆಯಾಗಿದೆ.
ಹೋಬಳಿವಾರು ಮಳೆ ವಿವರ: ಆಲೂರು 5 ಬೇಲೂರು ತಾಲೂಕಿನ ಬಿಕ್ಕೊಡು 3, ಚನ್ನರಾಯಪಟ್ಟಣ ತಾಲೂಕಿನ ಉದಯಪುರ 0.8, ಹಿರಿಸಾವೆ 2.8, ಹಾಸನ 2.4, ಶಾಂತಿಗ್ರಾಮ 18, ಸಕಲೇಶಪುರ 1.8, ಬಾಳ್ಳುಪೇಟೆ 3,ಮರನಹಳ್ಳಿ 0.1, ಹಾನುಬಾಳು 5.2 ಮಿ.ಮೀ. ಮಳೆಯಾಗಿದೆ.
ನಾನಾ ಸಂಘಗಳ ಉದ್ಘಾಟನೆ
ಹಾಸನ: ಪ್ರತಿಯೊಬ್ಬ ವ್ಯಕ್ತಿಯು ನಾಯಕನೇ ಆಗಿದ್ದರೂ ಒಬ್ಬ ವ್ಯಕ್ತಿಯನ್ನು ನಾಯಕನನ್ನಾಗಿ ಮಾಡಿ ಅವನ ಸಾರಥ್ಯದಲ್ಲಿ ಮುಂದೆ ಸಾಗುತ್ತಾನೆ. ಅದರಲ್ಲಿ ಒಗ್ಗಟ್ಟನ್ನು ಕಾಣಬಹುದು ಎಂದು ನಗರದ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಐ.ಎಂ ಮೋಹನ್ ತಿಳಿಸಿದರು. ನಗರದ ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜಿನ ಲಯೋಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿ ಪ್ರತಿನಿಧಿ ಸಂಘ ಹಾಗೂ ಕಾಲೇಜಿನ ನಾನಾ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಯಾವ ರೀತಿ ದೇಶಿಯ ಹಾಗೂ ಜಾಗತಿಕ ಮಟ್ಟದಲ್ಲಿ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ವಿವರಿಸಿದಲ್ಲದೆ ರುಪಾಯಿ ಅಪಮೌಲ್ಯ ಭಾರತದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮತ್ತು ಬಂಡವಾಳ ಮಾರುಕಟ್ಟೆಯ ಸ್ಥಿತಿಗತಿ ಗಳನ್ನು ಸವಿಸ್ತಾರವಾಗಿ ವಿವರಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರತಿಮಾ ಪ್ರಭು, ಉಪನ್ಯಾಸಕ ವಿಜಯ ಕುಮಾರ್, ಒಮರ್ ಝುಬೇರ್ ಮತ್ತು ಕೆ.ಎಸ್. ವೀಣಾ ಉಪಸ್ಥಿತರಿದ್ದರು.ರೆ.ಫಾ. ಐವನ್ ಮೆಂಡೋನ್ಸಾ ಎಸ್.ಜೆ. ಪ್ರಮಾಣ ವಚನ ಬೋಧಿಸಿದರು. ಸಹೇರಾ ನಿರೂಪಿಸಿದರು.
ಮಂಜುಳಾ ಅವಿರೋಧ ಆಯ್ಕೆ
ಸಕಲೇಶಪುರ: ತಾಲೂಕು ಪಂಚಾಯ್ತಿಗೆ ಇನ್ನುಳಿದ 8 ತಿಂಗಳ ಅವಧಿಗೆ ನೂತನ ಅಧ್ಯಕ್ಷೆಯಾ ಬೆಳಗೋಡು ಕ್ಷೇತ್ರದ ಮಂಜುಳಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಪಂ ಸಭಾಂಗಣದಲ್ಲಿ ಉಪವಿಭಾಗಧಿಕಾರಿ ಶ್ರೀವಿದ್ಯಾ ಚುನಾವಣಾಧಿಕಾರಿಯಾಗಿ ನಡೆಸಿಕೊಟ್ಟ ಚುನಾವಣೆಯ ವಿಧಿವಿಧಾನದ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಂಜುಳ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರೆಂದು ಘೋಷಿಸಲಾಯಿತು. ನಂತರ ಅಧ್ಯಕ್ಷರು ಯಾವ ಪಕ್ಷದಿಂದ ಆಯ್ಕೆಯಾಗಿದ್ದಾರೆಂಬ ಗೊಂದಲ ಮೂಡಿದ್ದರಿಂದ ಶಾಸಕ ಎಚ್.ಕೆ. ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ನಡುವೆ ವಾಗ್ವಾದ ನಡೆದು ಗೊಂದಲ ಮಾರ್ಪಟ್ಟಿತ್ತು. ಮಧ್ಯೆ ಪ್ರವೇಶಿಸಿದ ಪೊಲೀಸರು ಅಧ್ಯಕ್ಷೆಯನ್ನು ಪೊಲೀಸ್ ಬೆಂಗಾವಲಿನೊಂದಿಗೆ ಸ್ವಕ್ಷೇತ್ರಕ್ಕೆ ಕಳುಹಿಸಿಕೊಟ್ಟರು.
ಬಾಲಕಿ ಆತ್ಮಹತ್ಯೆ
ಸಕಲೇಶಪುರ: ವಿದ್ಯಾರ್ಥಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕ್ಯಾನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಲೋಲಾಕ್ಷಿ ಎಂಬುವವರ ಪುತ್ರಿ ಕೆ.ಸಿ. ಸ್ಫೂರ್ತಿ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಸೆಂಟ್ ಜೋಸೆಫ್ ಶಾಲೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಸ್ಫೂರ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

