ಸೆ. 4 ರಿಂದ ಆರೋಗ್ಯ ನೈರ್ಮಲ್ಯ, ಪ್ರಸೂತಿಶಾಸ್ತ್ರ ಬಗ್ಗೆ ಅರಿವು ಕಾರ್ಯಕ್ರಮ
ಹಾಸನ: ಚನ್ನರಾಯಪಟ್ಟಣ ತಾ. ಹನುಮಂತಪುರ ಗ್ರಾಮದಲ್ಲಿ ಸೆ.4ರಿಂದ 18ರವಗೆಗೆ ಆರೋಗ್ಯ, ನೈರ್ಮಲ್ಯ, ಪ್ರಸೂತಿಶಾಸ್ತ್ರ ಹಾಗೂ ಮಕ್ಕಳ ಶಿಕ್ಷಣ ಕುರಿತು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಬೇವು ಫೌಂಡೇಶನ್ ಸಂಸ್ಥೆಯ ಅಧ್ಯಕ್ಷ ಶ್ರೀನಿಧಿ ದೇಸಿಕಾಮಣಿ ತಿಳಿಸಿದ್ದಾರೆ.
ಸಂಸ್ಥೆಯಿಂದ ಆರೋಗ್ಯ, ನೈರ್ಮಲ್ಯ, ಪ್ರಸೂತಿಶಾಸ್ತ್ರ, ಪೌಷ್ಠಿಕತೆ, ಗ್ರಾಮೀಣ ಕರ್ನಾಟಕವನ್ನು ಕಮ್ಮಟಗಳು, ಪ್ರಾಯೋಗಿಕ ತರಬೇತಿ ಮತ್ತು ಪರಿಹಾರ ಅನುಷ್ಠಾನದಲ್ಲಿ ಶಿಕ್ಷಣ ಮತ್ತು ಸಿದ್ದಾಂತ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವಂತಹ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.
ಗ್ರಾಮೀಣ ಜನರಿಗೆ ಪ್ರಮುಖ ಮಾಹಿತಿ ಒದಗಿಸುವ ದೃಷ್ಟಿಯಿಂದ ಬೇವು ಸಂಸ್ಥೆಯನ್ನು ಆರಂಭಿಸಲಾಗಿದ್ದು, ಸಂಸ್ಥೆಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಹನುಮಂತಪುರ ಗ್ರಾಮದಲ್ಲಿ ಎರಡು ವಾರಗಳ ಕಾಲ ವಾಸ್ತವ್ಯ ಮಾಡಲಾಗುವುದು.
ಗ್ರಾಮೀಣ ಜನರಿಗೆ ಜಾಗೃತಿ ಮತ್ತು ಉತ್ತಮ ಆರೋಗ್ಯ, ರೋಗ ತಡೆಗಟ್ಟುವಿಕೆ ಮತ್ತು ಸಮುದಾಯದಲ್ಲಿ ಆರೋಗ್ಯದ ಪ್ರಾಮುಖ್ಯತೆ ಕುರಿತು ಮನವರಿಕೆ, ಎಲ್ಲಾ ವರ್ಗದ ಜನರಿಗೂ ಸಮಾನ ಶಿಕ್ಷಣ ನೀಡುವುದು ಹಾಗೂ ಗ್ರಾಮೀಣ ವಾಸಿಗಳು ಯೋಗ್ಯ ಅಥವಾ ಸುಲಭವಾಗಿ ಆರೋಗ್ಯ ಪಡೆಯಲು ಸಾಧ್ಯವಿಲ್ಲದ ಕಡೆ ಆರೋಗ್ಯ ಶಿಬಿರ ನಡೆಸುತ್ತಿರುವುದಾಗಿ ಹೇಳಿದರು.
ನಾನಾ ಗ್ರಾಮಗಳಲ್ಲಿ ಸಂಸ್ಥೆಯಿಂದ ವಾಸ್ತವ್ಯ ಹೂಡಿ ಹಳ್ಳಿಯ ಹೆಸರು ಪ್ರದೇಶ ಗುರುತಿಸುವ ನಕ್ಷೆಗಳ ಅಳವಡಿಕೆ ಹಾಗೂ ಸಾಧ್ಯವಾದ ಕಡೆಗಳಲ್ಲಿ ಆಕರ್ಷಕ ಸಾಲು ತೋಟಗಳನ್ನು ನಿರ್ಮಾಣ ಮಾಡುವಂತಹ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಮೈಸೂರು, ತುಮಕೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ ನಂತರ ಯೋಜನೆ ಸಿದ್ದಪಡಿಸಿದೆ ಎಂದ ಅವರು, ಅಮೇರಿಕಾದ ಇಲಿನಾಯ್ಸ್ ವಿವಿ ವಿದ್ಯಾರ್ಥಿಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಸಂಸ್ಥೆಯೊಂದಿಗೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಾಗುತ್ತದೆ ಎಂದರು.
ಹನುಮಂತಪುರ ಗ್ರಾಮ ವಾಸ್ತವ್ಯ ನಂತರ ಎರಡನೇ ಹಂತವಾಗಿ ಅಡಗುರು, ಸಾತೆನಹಳ್ಳಿ, ಗೋಳಿಹೊನ್ನೇನಹಳ್ಳಿ ಹಾಗೂ ಹೆಬ್ಬಾಳ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಗುವುದು. ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುವರು ದೂರವಾಣಿ 9008711770 ಸಂಪರ್ಕಿಸಬಹುದು. ಯಮುನಾ ಶ್ರೀನಿಧಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

