ಇಂದು, ನಾಳೆ ಕನ್ನಂಬಾಡಿಯಮ್ಮ ಜಾತ್ರೆ
ಹಾಸನ: ನಗರದ ಗಾಣಿಗರ ಬೀದಿಯಲ್ಲಿರುವ ಕನ್ನಂಬಾಡಿಯಮ್ಮ ಮತ್ತು ಕೆಂಚಮ್ಮ ಜಾತ್ರಾ ಮಹೋತ್ಸವ ಆ.30 ಮತ್ತು 31 ರಂದು ನಡೆಯಲಿದೆ.
ಆ.30 ರಂದು ಬೆಳಗ್ಗೆ 7-30ಕ್ಕೆ ದೇವಾಲಯದಲ್ಲಿ ದೇವರಿಗೆ ಅಭಿಷೇಕ, ಮಹಾ ಪೂಜೆ, ಕುಂಕುಮಾರ್ಚನೆ, ಮಹಾಮಂಗಳಾರಾತಿ ಸೇರಿದಂತೆ ಧಾರ್ಮಿಕ ಕಾರ್ಯಗಳು ನೆರವೇರಲಿದೆ.
ಶನಿವಾರ ಬೆಳಗ್ಗೆ 10-30ಕ್ಕೆ ಶಿವಜ್ಯೋತಿ ಕಲ್ಯಾಣ ಮಂಟಪದಲ್ಲಿ ಸುಗಮ ಸಂಗೀತ ಇರುತ್ತದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.70 ಕ್ಕಿಂತ ಅಧಿಕ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.
ಗಾಣಿಗ ಜನಾಂಗದ ಮುಖಂಡ ಎನ್. ಶ್ರೀನಿವಾಸ್ ಅವರಿಗೆ ಗಾಣಿಗ ವರಪುತ್ರ ಎಂಬ ಬಿರುದ್ದು ನೀಡಿ ಸನ್ಮಾನಿಸಲಾಗುವದು.
ಶಾಸಕ ಹೆಚ್.ಎಸ್.ಪ್ರಕಾಶ್, ನಗರಸಭೆ ಆಯುಕ್ತ ನಾಗಭೂಷಣ್, ನಗರಸಭೆ ಸದಸ್ಯರಾದ 19ನೇ ವಾರ್ಡ್ನ ರಮೇಶ್ ಬಾಬು, 15ನೇ ವಾರ್ಡ್ನ ಹೆಚ್.ಆರ್. ಮಹೇಶ್, 16ನೇ ವಾರ್ಡ್ನ ಹೆಚ್.ಎಲ್. ವಿಜಯಕುಮಾರ್, 9ನೇ ವಾರ್ಡ್ನ ಹೆಚ್.ಎಸ್. ಅನಿಲ್ಕುಮಾರ್ ಹಾಗೂ ಸಮಾಜ ಸೇವೆ ಸೇವೆ ಸಲ್ಲಿಸಿದ ಮತ್ತು ದೆಹಲಿಯಲ್ಲಿ ರಾಷ್ಟ್ರೀಯ ರತ್ನ ಪ್ರಶಸ್ತಿ ಪಡೆದ ಹೆಚ್.ಎಸ್. ಹರ್ಷವರ್ಧನ್ ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಕನ್ನಂಬಾಡಿಯಮ್ಮ, ಕೆಂಚಮ್ಮ ಟ್ರಸ್ಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ವಿಮೆ ಸೌಲಭ್ಯ ಸ್ಥಗಿತ
ಹಾಸನ: ಮಾಜಿ ಸೈನಿಕರು ಹಾಗೂ ಅವರ ಪತ್ನಿಯರಿಗೆ ಈ ಹಿಂದೆ ಚಾಲ್ತಿಯಲ್ಲಿದ್ದ ಆರ್ಮಿ ಗ್ರೂಫ್ ಇನ್ಸೂರೆನ್ಸ್ಅನ್ನು ಮಾಜಿ ಸೈನಿಕರ ಅಂಶದಾಯಿ ಆರೋಗ್ಯ ಯೋಜನೆ ಜಾರಿಗೆ ಬಂದ ನಂತರ ಸ್ಥಗಿತಗೊಳಿಸಲಾಗಿದೆ. ಹಳೆಯ ಯೋಜನೆ ಸದಸ್ಯತ್ವ ಪಡೆದ ಎಲ್ಲಾ ಮಾಜಿ ಸೈನಿಕರು ಹಾಗೂ ಅವರ ಪತ್ನಿಯರು ನೀಡಿದ್ದ ಸದಸ್ಯತ್ವದ ಶುಲ್ಕವನ್ನು ಮರಳಿ ಪಡೆಯದಿದ್ದಲ್ಲಿ ಅದನ್ನು ಈ ಕೆಳ ಕಾಣಿಸಿದ ವಿವರಗಳನ್ನು ಒಳಗೊಂಡ ಅರ್ಜಿಯನ್ನು ನೇರವಾಗಿ ವ್ಯವಸ್ಥಾಪಕ ನಿರ್ದೇಶಕರು, ಆರ್ಮಿ ಗ್ರೂಫ್ ಇನ್ಸೂರೆನ್ಸ್ ಫಂಡ್, ಎ.ಜಿ.ಐ. ಭವನ, ಅಂಚೆ ಪೆಟ್ಟಿಗೆ 14, ಅಂಚೆ, ವಸಂತ ವಿಹಾರ, ನವದೆಹಲಿ - 110 057 ಹಾಸನ-ದೂ-250465 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
ಸಣ್ಣೇಗೌಡ ಶ್ರದ್ಧಾಂಜಲಿ
ಹಾಸನ: ಜಿಲ್ಲೆಯ ಸಾರಸ್ವತ ಲೋಕದ ರಂಗಕರ್ಮಿ ಕೆ. ಸಣ್ಣೇಗೌಡರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂತಾಪ ಸೂಚಿಸಿದೆ. ಸಾಹಿತ್ಯ ಮತ್ತು ಸಾಂಸ್ಕತಿಕ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್. ಜನಾರ್ದನ್ ಸಂತಾಪ ಸೂಚಿಸಿದ್ದಾರೆ.
ಇಂದು ಶ್ರದ್ಧಾಂಜಲಿ:ಆ.30 ರಂದು ಸಂಜೆ 5.30ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸಣ್ಣೇಗೌಡ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದ್ದು, ಸ್ನೇಹಿತರು, ಅಭಿಮಾನಿಗಳು ಪಾಲ್ಗೊಳ್ಳಬೇಕೆಂದು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

