ನಮ್ಮೂರ ಸಂಘಟನೆಯಿಂದ ಗಿಡ ನೆಡುವ ಕಾರ್ಯಕ್ರಮ
ಕ.ಪ್ರ.ವಾರ್ತೆ , ಹಾಸನ , ಆ. 30
ನಮ್ಮೂರ ಸೇವೆ ಸಂಘಟನೆ ಇತ್ತೀಚೆಗೆ ನಗರದ ವೈದ್ಯಕೀಯ ಕಾಲೇಜು ಆವರಣ ಹಾಗೂ ಸರ್ಕಾರಿ ಆಸ್ಪತ್ರೆಯ ಹಾಸ್ಟೆಲ್ ಆವರಣದಲ್ಲಿ ಗಿಡ ನೆಡುವ ಮೂಲಕ 300ನೇ ವಾರವನ್ನು ಪೂರೈಸಿತು. ವೈದ್ಯಕೀಯ ಕಾಲೇಜು ನಿರ್ದೇಶಕ ಡಾ. ಎನ್. ರಾಚೇಗೌಡ ಗಿಡ ನೆಡುವ ಮುಖೇನ ಕಾರ್ಯಕ್ರಮ ಉದ್ಘಾಟಿಸಿದರು.
ಕಾಲೇಜಿನ ಅನಾಟಮಿ ವಿಭಾಗದ ಡಾ.ಓಂಪ್ರಕಾಶ್, ಅನೇಸ್ತೇಸಿಯಾ ವಿಭಾಗದ ಡಾ. ಚಂದ್ರಕುಮಾರ್, ವೈದ್ಯಕೀಯ ಅಧೀಕ್ಷಕ ಡಾ. ಎಸ್. ಶಂಕರ್, ವೈದ್ಯಾಧಿಕಾರಿಗಳಾದ ಡಾ. ಕೃಷ್ಣಮೂರ್ತಿ, ಮತ್ತು ಡಾ. ಡಿ.ವಿಶ್ವನಾಥ್, ಡಾ. ಕಾಂತಯ್ಯ, ಡಾ. ಶಿವಕುಮಾರ್ ಉದಾಸಿ ಮಠ್, ಡಾ. ಲಕ್ಷ್ಮೀಶ್, ಡಾ. ನವೀನ್ಕುಮಾರ್, ಡಾ. ಕಿರಣ್, ಡಾ. ಸುಧನ್ವ, ಡಾ.ನ ಶ್ರೀಧರ್, ಡಾ. ರಾಮ್ನಾಥ್, ಡಾ.ಸುನಿತಾ, ಡಾ. ಮಹಾಲಕ್ಷ್ಮಿ, ನಟರಾಜ್, ಆರ್ಥಿಕ ಅಧಿಕಾರಿ ಕುಮಾರಸ್ವಾಮಿ, ಆಡಳಿತಾಧಿಕಾರಿ ವಿಜಯಕುಮಾರ್ ಎಂ.ಎಸ್.ಡಬ್ಲ್ಯೂ ಹಾಗೂ ಸಿಬ್ಬಂದಿ ವರ್ಗದ ಮಹೇಶ್ ಬಿ.ಎನ್. ರಘುನಾಥ್ ಪಿ.ಟಿ. ತೀಥೇಶ್, ಶಶಿಕುಮಾರ್, ಗುರುಪ್ರಸಾದ್, ಸಿದ್ದೇಶ್, ರೂಪೇಶ್, ಗಿರೀಶ್, ಅನಂತರಾಮ್, ಸಿದ್ದರಾಜು, ವೆಂಕಟಾಚಲ, ಸುಂದರ್, ರವಿ, ನಟರಾಜಸುನೀಲ್, ಯೋಗೇಶ್, ತಮ್ಮಯ್ಯಣ್ಣ, ಶ್ರೀನಿವಾಸ್ ಮುಂತಾದವರು ಗಿಡಗಳನ್ನು ನೆಟ್ಟು ಪೋಶಿಸುವ ಪ್ರತಿಜ್ಞೆ ಮಾಡಿದರು.
ಸಂಘಟನೆ 300ನೇ ವಾರದವರೆಗೆ ಕೈಗೊಂಡಿರುವ ಪರಿಸರ ಕಾರ್ಯವನ್ನು ನಿರ್ದೇಶಕ ಡಾ. ಎನ್. ರಾಚೇಗೌಡ ಪ್ರಶಂಶಿಸಿದರು. ಡಾ. ಓಂಪ್ರಕಾಶ್ ಸಹಕಾರ ನೀಡಿದರು. ಸಂಘಟನೆ ಕನಿಷ್ಠ 300 ಗಿಡಗಳನ್ನು ಕೊಡುವಂತೆ ಮನವಿ ಮಾಡಿದರೆ ನಿರ್ಲಕ್ಷ್ಯ ತೋರಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ಬಗ್ಗೆ ಸಂಘಟನೆ ಅಸಂತೃಪ್ತಿ ವ್ಯಕ್ತಪಡಿಸಿ, ಅರಣ್ಯ ಇಲಾಖೆ ಅಸಡ್ಡೆಯಿಂದ ಸಂಘಸಂಸ್ಥೆಗಳು ಕೆಲಸ ಮಾಡುವ ಮನಸ್ಸಿದ್ದರೂ ಪ್ರಯೋಜನ ವಾಗುತ್ತಿಲ್ಲ ಎಂದು ಸಂಚಾಲಕ ರಾಜೀವ್ಗೌಡ ಬೇಸರದಿಂದ ತಿಳಿಸಿದರು. ಸಂಘಟನೆ ಮುಂದೆಯೂ ಪರಿಸರದ ಕಾರ್ಯ ನಿರಂತರ ಮುಂದುವರಿಸಲಿದ್ದು, ಆಸಕ್ತರು ಕೈಜೋಡಿಸಬೇಕಾಗಿ ಕೋರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

