ಹಾಸನ

ಅದ್ಧೂರಿ ಆಂಡಾಳ್ ಗೋದಾಲಕ್ಷ್ಮಿ ಮಹೋತ್ಸವ

Published On :

ಹೊಳೆನರಸೀಪುರ: ಪಟ್ಟಣದ ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿನ ಶ್ರೀ ಆಂಡಾಳ್ ಗೋದಾಮಹಾಲಕ್ಷ್ಮಿ ಆಲಯದ ಜೀಣೋದ್ಧಾರ ಮಹೋತ್ಸವ ಕಾರ್ಯಕ್ರಮ ಭಾರಿ ಅದ್ಧೂರಿಯಿಂದ  ಇತ್ತೀಚೆಗೆ ನಡೆಯಿತು. ಬೆಳಿಗ್ಗೆ ವೈಖಾಸನ ಆಗಮ ವಿದ್ವಾನ್ ಡಾ. ಶ್ರೀಸತ್ಯನಾರಾಯಣ್ ಅವರ ನೇತೃತ್ವದಲ್ಲಿ, ಪೊ. ಭರತ್ ನಾರಾಯಣ್ ಅವರ ಮಾರ್ಗದರ್ಶನದಲ್ಲಿ, ಶಠಗೋಪರಾಮಾನು ಜೀಯರ್ ಸ್ವಾಮಿಗಳ ಸಾನಿದ್ಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀಆಂಡಾಳ್ ಗೋದಾಮಹಾಲಕ್ಷ್ಮಿ ಆಲಯದ ಜೀರ್ಣೋದ್ಧಾರ ಮತ್ತು ಮಹಾಸಂಪ್ರೋಕ್ಷಣ ಕಾರ್ಯಕ್ರಮ ಆರಂಭಗೊಂಡಿತು.
ಬೆಳಗ್ಗೆ ದೇವಾತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಕುಂಭಾರಾಧನೆ, ನಿತ್ಯ ಹೋಮಗಳು, ಪ್ರಧಾನ ಸರ್ವದೈವತ್ವ ಹೋಮಗಳು ಆರಂಭಗೊಂಡಿವು. ಪೂರ್ವಕ ಸದ್ಮಪ್ರದಕ್ಷಿಣೆ, ಆಷ್ಟಾಚಾತ್ವಾರಿಂಶಿತಿ ಜೀವಕಳಾವಾಹನೆ, ಬ್ರಹ್ಮಘೋಷ, ರಾಷ್ಟ್ರೀಶೀವಾರ್ಧದ ನಡೆಯಿತು.
 ಇದೇ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಶಠಗೋಪರಾಮನುಜೀಯರ್ ಉಪನ್ಯಾಸ ನೀಡಿದರು. ಮಧ್ಯಾಹ್ನ ಎರಡು ಗಂಟೆಗೆ ಪೂರ್ಣಾಹುತಿ ನಂತರ ತೀರ್ಥಪ್ರಸಾದ ವಿನಿಯೋಗ ನಡೆಯಿತು.
ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಹಾಜರಿದ್ದು ದೇವರ ಕೃಪೆಗೆ ಒಳಗಾದರು.

ಇಂದು ಆರೋಗ್ಯ ತಪಾಸಣೆ ಶಿಬಿರ
ರಾಮನಾಥಪುರ:
ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟಾ, ನಾರಾಯಾಣ ಹಣದಯಾಲಯ ಹಾಗೂ ಭಾರತ್ಕ್ಯಾನ್ಸರ್  ಆಸ್ಪತ್ರೆ , ರೋಟರಿ ಕ್ಲಬ್ ಆಶ್ರಯದಲ್ಲಿ ಡಿ. 16ರಂದು ಅರಕಲಗೂಡಿನ ಸಾರ್ವಜನಿಕ ಆಸ್ಪತ್ರೆಯಲ್ಲಿ  ವಾಜಪೇಯಿ ಆರೋಗ್ಯ ಶ್ರೀ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ನುರಿತ ವೈದ್ಯರು ಆಗಮಿಸುತ್ತಿದ್ದು ಗಂಭೀರ ಕಾಯಿಲೆಗಳಾದ ಹೃದಯ ರೋಗ, ಕಿಡ್ನಿಯಲ್ಲಿ ಕಲ್ಲು, ಪಾಲಿಟ್ರಾಮ, ಹಾಗೂ ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಉಚಿತ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸಾ ಸೌಲಭ್ಯವಿದೆ.ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಡಾ.ಸ್ವಾಮಿಗೌಡ ಮೊ.ನಂ. 9448256481, ಅರಕಲಗೂಡು ಆರೋಗ್ಯ ಮಿತ್ರ ಉಮೇಶ್ ಮೊ.ನಂ.7259993457, ಪುಟ್ಟಸ್ವಾಮಿ ಮೊ.ನಂ. 7259003458 ಸಂಪರ್ಕಿಸಿ, ತಮ್ಮ ಹೆಸರು ವಿಳಾಸ ನೊಂದಾಣಿ ಮಾಡಿಸಿಕೊಳ್ಳುವಂತೆ ಕೊಣನೂರು ಆರೋಗ್ಯ ಮಿತ್ರ ಪುಟ್ಟಸ್ವಾಮಿ ಮಾಧ್ಯಮಕ್ಕೆ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.