ಹಾಸನ

ಅಕ್ಕಿ ಗಿರಣಿ ಮಾಲೀಕರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ಹಾಸನ ಡಿ. 17  
ಅನ್ನಭಾಗ್ಯ ಯೋಜನೆಗಾಗಿ ಲೆವಿ ಸಂಗ್ರಹದ ಪ್ರಮಾಣವನ್ನು ಹೆಚ್ಚಿಸಿರುವ ರಾಜ್ಯಸರ್ಕಾರ ಅವೈಜ್‌ಞಾನಿಕ ನೀತಿ ಖಂಡಿಸಿ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರು ಸಂಘದ ಆಶ್ರಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಸಹಾಯಕರಿಗೆ ಮನವಿ ನೀಡಿದರು.
ಅಕ್ಕಿ ಒದಗಿಸಲು ಸಾಧ್ಯವಾಗುತ್ತಿಲ್ಲ: ರಾಜ್ಯ ಸರ್ಕಾರ 2013-14ನೇ ಸಾಲಿನಲ್ಲಿ ಲೆವಿ ಅಕ್ಕಿ ಗುರಿಯನ್ನು ನಿಗದಿ ಪಡಿಸಿದ್ದು, ಅದು ಹತ್ತು ಪಟ್ಟು ಹೆಚ್ಚಾಗಿ ಇದೆ. ಜೊತೆಗೆ ಅಕ್ಕಿ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ಸರ್ಕಾರ ನಿಗದಿ ಪಡಿಸುವ ಅಕ್ಕಿಯನ್ನು ಸಾಧ್ಯವಿಲ್ಲ. ಸರ್ಕಾರಿ ಅವೈಜ್ಞಾನಿಕ ನೀತಿಯನ್ನು ಜಾರಿಗೊಳಿಸಿರುವುದರಿಂದ ಸರ್ಕಾರದ ಮಟ್ಟಕ್ಕೆ ಅಕ್ಕಿ ಒದಗಿಸಲು ಅಕ್ಕಿ ಗಿರಣಿ ಮಾಲೀಕರಿಂದ ಸಾಧ್ಯವಾಗುತ್ತಿಲ್ಲ ಎಂದರು.
ರಾಜ್ಯದಲ್ಲಿ ಸುಮಾರು 13 ಲಕ್ಷ ಟನ್ ಅಕ್ಕಿಯನ್ನು ಒದಗಿಸುವಂತೆ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿತು. ಆದರೆ ಅಕ್ಕಿ ಗಿರಣಿ ಮಾಲೀಕರು ಪ್ರತಿಭಟನೆ ನಡೆಸಿದ ಪರಿಣಾಮ 5 ಲಕ್ಷ ಟನ್ನ್‌ಷ್ಟು ಅಕ್ಕಿಯನ್ನು ಒದಗಿಸಬೇಕು ಎಂದು ಆದೇಶಿಸಿದೆ. ಆದರೆ ಅಕ್ಕಿ ಗಿರಣಿ ಮಾಲೀಕರು ಉತ್ಪಾದಿಸುವಂತಹ ಶೇಕಡ ಅಕ್ಕಿ ಪೈಕಿ ಶೇ.33ರಷ್ಟು ಅಕ್ಕಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ಜೊತೆಗೆ ರೈತರಿಂದ ನೇರವಾಗಿ ಗಿರಣಿ ಮಾಲೀಕರು ಭತ್ತವನ್ನು ಖರೀದಿ ಮಾಡಲು ಸಾಧ್ಯವಿಲ್ಲದ ಕಾರಣ ಸರ್ಕಾರಕ್ಕೆ ಅಕ್ಕಿಯನ್ನು ಒದಗಿಸಲು ಸಾಧ್ಯವಿಲ್ಲ.
ನಿಗದಿತ ದರ ಸರಿಯಿಲ್ಲ: ಈ ಹಿಂದೆ 1.5 ಲಕ್ಷ ಟನ್ ಅಕ್ಕಿಯನ್ನು ಅಕ್ಕಿ ಉತ್ಪಾದಕರು ಸರ್ಕಾರಕ್ಕೆ ಒದಗಿಸುತ್ತಿದ್ದರು. ಆದರೆ ಈಗ 5 ಲಕ್ಷ ಟನ್ ಅಕ್ಕಿಯನ್ನು ಒದಿಗಸುವಂತೆ ಆದೇಶಿಸಿರುವುದು ಸರಿಯಲ್ಲ. ಜೊತೆಗೆ ಸರ್ಕಾರ ರೈತರಿದೆ ರು. 1600 ದರವನ್ನು ನೀಡಿ ಖರೀದಿಸುತ್ತಾರೆ. ಜೊತೆಗೆ ಸರ್ಕಾರ ಅಕ್ಕಿ ಗಿರಣಿ ಮಾಲೀಕರಿಂದ ರು. 2160 ದರವನ್ನು ನೀಡಿ ಖರೀದಿಸಲು ತೀರ್ಮಾನಕೈಗೊಂಡಿದೆ. ಆದರೆ ಲೆವಿ ಗುಣಮಟ್ಟದ ಅಕ್ಕಿಯನ್ನು ಉತ್ಪಾದಿಸಲು ಸರ್ಕಾರ ನಿಗದಿಪಡಿಸುವಂತಹ ದರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ನಿಲುವು ಕೈಬಿಡಬೇಕು: ಜಿಲ್ಲೆಯಲ್ಲಿ ಸುಮಾರು 160ಕ್ಕೂ ಹೆಚ್ಚು ಅಕ್ಕಿ ಗಿರಣಿಗಳಿದ್ದು, ಈ ಪೈಕಿ ಎಲ್ಲಾ ಗಿರಣಿಗಳು ಒಂದೊಂದು ರೀತಿಯಲ್ಲಿ ಅಕ್ಕಿಯನ್ನು ಉತ್ಪಾದಿಸುತ್ತವೆ. ಆದರೆ ಸರ್ಕಾರ ನಿಗದಿ ಪಡಿಸುವಂತಹ ಅಕ್ಕಿಯ ಪ್ರಮಾಣ ಹೆಚ್ಚಾಗಿರುವುದರಿಂದ ಒಂದೊಂದು ಗಿರಣಿಗಳ ಮೇಲೆ ಶೇ. 10ರಷ್ಟು ಹೆಚ್ಚಿನ ಪ್ರಮಾಣದ ಅಕ್ಕಿಯನ್ನು ಸರ್ಕಾರಕ್ಕೆ ಒದಗಿಸಬೇಕಾಗುತ್ತದೆ. ಇದು ಕಷ್ಟಸಾಧ್ಯವಾಗಿರುವುದನ್ನು ಸರ್ಕಾರ ಕೈಗೊಂಡಿರುವಂತಹ ತನ್ನ ನಿಲುವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ದೌರ್ಜನ್ಯ ಎಸಗಿದಂತೆ: ಸರ್ಕಾರಿ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿಯನ್ನು ನೀಡಲೇಬೇಕು ಎಂದು ಅಕ್ಕಿ ಗಿರಣಿ ಮೇಲೆ ಒತ್ತಡ ಹಾಕುವುದು ದೌರ್ಜನ್ಯ ಎಸಗಿದಂತಾಗುತ್ತದೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿಯಲ್ಲಿ ಅಕ್ಕಿಯನ್ನು ಉತ್ಪಾದನೆಯಾಗುತ್ತದೆ. 5 ಲಕ್ಷ ಟನ್ ಅಕ್ಕಿಯನ್ನು ಒದಿಗಸುವಂತೆ ಆದೇಶ ಮಾಡಿ ಅಕ್ಕಿ ಗಿರಣಿ ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಹಿಂದೆ 1.5 ಲಕ್ಷ ಟನ್ ಅಕ್ಕಿಯನ್ನು ಸರ್ಕಾರಕ್ಕೆ ಪೂರೈಸಲಾಗುತ್ತಿತ್ತು.
ಪ್ರಸ್ತುತ 5 ಲಕ್ಷ ಟನ್ ಅಕ್ಕಿಯನ್ನು ಪೂರೈಸಲು ಅಕ್ಕಿ ಗಿರಣಿ ಮಾಲೀಕರು ಸಾಧ್ಯವಿಲ್ಲ. ಈ ಹಿಂದೆ ಯಾವ ರೀತಿಯಲ್ಲಿ ಗಿರಣಿ ಮಾಲೀಕರು ಅಕ್ಕಿಯನ್ನು ಪೂರೈಸುತ್ತಿದ್ದೇವೋ ಅದ ರೀತಿಯಲ್ಲಿ ಈಗಲು ಸರ್ಕಾರಕ್ಕೆ ಅಕ್ಕಿನ್ನು ಪೂರೈಸಲು ಸಿದ್ದವಿದ್ದೇವೆ. ಆದ್ದರಿಂದ ಯಾವುದೇ ಕಾರಣ ಸರ್ಕಾರ ಅಕ್ಕಿ ಗಿರಣಿ ಮಾಲೀಕರ ಮೇಲೆ ಒತ್ತಡವನ್ನು ಹಾಕಬಾರದು ಎಂದು ಒತ್ತಾಯಿಸಿದರು.
ಕೂಡಲೇ ಸರ್ಕಾರ ತನ್ನ ಅವೈಜ್ಞಾನಿಕ ನೀತಿಯನ್ನು ಬದಲಿಸಿಕೊಂಡು ಅಕ್ಕಿ ಗಿರಣಿ ಮಾಲೀಕರಿಗೆ ಅನುಕೂಲ ಮಾಡಿಕೊಡುವಂತೆ ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ಅಕ್ಕಿ ಗಿರಣಿ ಮಾಲೀಕರಾದ ಜಗದೀಶ್, ವಸಂತ್ ಕುಮಾರ್, ಬಿ.ಎಸ್. ರಾಜೇಗೌಡ, ಗಿರೀಶ್, ಎಚ್.ಎಸ್.ಮಂಜುನಾಥ್, ಕೆ.ಸುರೇಂದ್ರ, ಎಚ್.ಎಸ್. ರಾಜೇಶ್, ಪ್ರಶಾಂತ್, ಎಂ.ಎಸ್. ಶಶಿಕುಮಾರ್, ಕಾಂತರಾಜು, ಎಚ್.ಕೆ. ಅಶೋಕ್ ಕುಮಾರ್, ಎಚ್.ಜೆ. ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.