ಇಂದು ನಿವೇಶನ ವಿತರಣೆ
ಹಾಸನ: ತಾಲ್ಲೂಕಿನ ಸತ್ಯವಂಗಲ ಗ್ರಾಮದ ಸ.ನಂ.244 (ಹೊಸ ಸರ್ವೆ.ನಂ.254)ರಲ್ಲಿ 4-20 ಎಕರೆ ಪ್ರದೇಶವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ವ್ಯಕ್ತಿಗಳಿಗೆ ನಿವೇಶನ ಮಂಜೂರು ಪ್ರಕ್ರಿಯೆ ಜರುಗಿಸುವ ಬಗ್ಗೆ ವಿಚಾರಣೆಯನ್ನು ಡಿ. 18ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಚಾರಿ ವಿಜ್ಞಾನ ವಸ್ತುಪ್ರದರ್ಶನ
ಕ.ಪ್ರ.ವಾರ್ತೆ ಜಾವಗಲ್ ಡಿ. 17
ವಿಜ್ಞಾನದ ಬಗ್ಗೆ ಹಾಗೂ ಬಾಹ್ಯಾಕಾಶಕ್ಕೆ ಸಂಬಂಧಪಟ್ಟಂತೆ ಗ್ರಾಮೀಣ ಮಕ್ಕಳಿಗೆ ಅರಿವು ಮೂಡಿಸುವುದೇ ವಿಜ್ಞಾನ ವಸ್ತು ಪ್ರದರ್ಶನದ ಉದ್ದೇಶ ಎಂದು ಸಂಚಾರಿ ವಿಜ್ಞಾನ ಪ್ರದರ್ಶನ ಮುಖ್ಯಸ್ಥ ಹರೀಶ್ ಕುಮಾರ್ ತಿಳಿಸಿದರು.
ಜಾವಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಶ್ವೇಶ್ವರಯ್ಯ ಕೈಗಾರಿಕಾ ತರಬೇತಿ ಕೇಂದ್ರ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಸಂಚಾರಿ ವಿಜ್ಞಾನ ಪ್ರದರ್ಶನದ ಬಗ್ಗೆ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಉಪಪ್ರಾಂಶುಪಾಲ ಯೋಗೀಶ್, ವಿಜ್ಞಾನ ಪ್ರದರ್ಶನದ ಮುಖ್ಯಸ್ಥರಾದ ಜಾನ್ಪೀಟರ್, ಸನೀಶ್ ಇದ್ದರು.
ಮಾರ್ಗದರ್ಶನ ಕಾರ್ಯಕ್ರಮ
ಹಾಸನ: ಸಿಗ್ಫಾ ಸೆಲ್ಯೂಷನ್ಸ್ ವತಿಯಿಂದ ಡಿ. 22ರಿಂದ ನಗರದ ಸಂಸ್ಕೃತ ಭವನದಲ್ಲಿ ಯಶಸ್ವಿ ಪೋಷಕರಾಗುವುದು ಹೇಗೆ ಮತ್ತು ಪರೀಕ್ಷೆಗಳಲ್ಲಿ ಜಯಶಾಲಿಯಾಗುವುದು ಹೇಗೆ ಎಂಬ ವಿಷಯಗಳ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೋಂದಾಯಿಸಲು ಅಮರ್ಮನಾಥ್ ಅವರ ಮೊ. 7353685241 ಸಂಪರ್ಕಿಸಲು ಕೋರಲಾಗಿದೆ.
ಅಕ್ರಮ ಮೋಟಾರ್ ತೆರವುಗೊಳಿಸಲು ಆಗ್ರಹ
ಹಾಸನ: ಬೋರ್ವೆಲ್ಗಳಿಗೆ ಅಕ್ರಮವಾಗಿ ಮೋಟರ್ ಹಾಕಿಕೊಂಡಿರುವುದನ್ನು ನಿಲ್ಲಿಸಿ, ನೀರಿನ ಹಾಹಾಕಾರ ತಪ್ಪಿಸುವಂತೆ ಆಗ್ರಹಿಸಿ ಸಮಾಜಸೇವಕ ಕೆ.ಎಸ್. ತೀರ್ಥಪ್ಪ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಏಕಾಂಕಿ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಆವರಮದಲ್ಲಿ ಖಾಲಿ ಕೊಡ ಹಿಡಿದು ಏಕಾಂಗಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮನವಿ ನೀಡಿದರು. ಬೇಲೂರು ತಾಲ್ಲೂಕಿನ ಬಿಕ್ಕೋಡ್ ಹೋಬಳಿ ಕೆಸಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅವ್ಯವಹಾರ ನಡೆದಿದೆ. ವಳಲು ಗ್ರಾಮದಲ್ಲಿ ಬೋರ್ವೆಲ್ ಕೆಟ್ಟು ಹೋಗಿದ್ದು, ಕೆಲವರು ಸಾರ್ವಜನಿಕ ಬೋರ್ವೆಲಲ್ಗೆ ಅಕ್ರಮವಾಗಿ ಮೋಟರ್ ಅಳವಡಿಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರ ಬೋರ್ವೆಲ್ ಕೆಟ್ಟು ಹೋಗುತ್ತಿವೆ ಎಂದು ಆರೋಪಿಸಿದರು. ತಾಲೂಕಿನ ಹೆದ್ದವಳ್ಳಿ, ಸಿಂಗುವಳ್ಳಿ, ಗುಮ್ಮನಹಳ್ಳಿ, ಕೆಸಗೋಡು ಗ್ರಾಮಗಳಲ್ಲಿ ಸಾರ್ವಜನಿಕ ಬೋರ್ವೆಲ್ಗಳು ಇದ್ದು, ಅದನ್ನು ದುರಸ್ಥಿಗೊಳಿಸುವಂತೆ ಒತ್ತಾಯಿಸಿದರು.
ಅಪಘಾತದಲ್ಲಿ ನಾಲ್ವರಿಗೆ ಮಾರಣಾಂತಿಕ ಗಾಯ
ಸಕಲೇಶಪುರ: ಆಟೋ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ನಾಲ್ವರು ಮರಣಾಂತಿಕವಾಗಿ ಗಾಯಗೊಂಡ ಘಟನೆ ಮಂಗಳವಾರ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಗಾಯಗೊಂಡವರನ್ನು ದೋಣಿಗಾಲ್ ಗ್ರಾಮದ ನಾಗರಾಜ್, ನಿಂಗಯ್ಯ, ಆಟೋಚಾಲಕ ನಿಸಾರ್ ಹಾಗೂ ಬೈಕ್ ಸವಾರ ಉಜಿರೆ ಪಟ್ಟಣದ ಪ್ರತೀಕ್ ಎನ್ನಲಾಗಿದೆ. ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಸಾಗಿಸಲಾಗಿದೆ. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

