ಹಾಸನ

ಗುಂಪು ಗಲಭೆ ಪ್ರಕರಣ: 16 ಮಂದಿಗೆ ಜಾಮೀನು

Published On :

ಬೇಲೂರು: ಅರೇಹಳ್ಳಿಯಲ್ಲಿ ಶೋಭಾಯಾತ್ರೆ ವೇಳೆ ಸೋಮವಾರ ನಡೆದ ಗುಂಪು ಗಲಭೆಗೆ ಸಂಬಂಧಿಸಿದಂತೆ 16 ಮಂದಿ ಮೇಲೆ ದೂರು ದಾಖಲಾಗಿದ್ದು, 16 ಮಂದಿಗೂ ನ್ಯಾಯಾಲಯ ಜಾಮೀನುನೀಡಿದೆ.     
ಧಾರ್ಮಿಕ ಭಾವನೆಗೆ ದಕ್ಕೆ ಉಂಟು ಮಾಡಲಾಗಿದೆ ಎಂದು  298 ಸೆಕ್ಷನ್ ಹಾಗೂ 144 ಸೆಕ್ಷನ್ ಅಡಿ ಜಿ. ಪಂ ಸದಸ್ಯ ಅಮಿತ್ ಶೆಟ್ಟಿ, ಗ್ರಾಪಂ ಅಧ್ಯಕ್ಷ ನಾಗೇಶ್ ಶೆಟ್ಟಿ, ದಿನೇಶ್ಶೆಟ್ಟಿ, ಚಂದ್ರಶೇಖರ ಶೆಟ್ಟಿ, ನಿಕಿತ್, ಸುನಿಲ್, ಅರುಣ್, ಕರ್ಣ, ಶ್ರೀಕಾಂತ್, ಸತೀಶ್, ಗಣೇಶ್, ಲೋಕೇಶ್, ನಾಗೇಶ್, ಶಶಿಕುಮಾರ್, ಸಂದೇಶ್, ಶಿವು ಎಂಬ 16 ಆರೋಪಿಗಳ ಪಟ್ಟಿ ಸಿದ್ದ ಮಾಡಿದ್ದು ಇವರಲ್ಲಿ 12 ಮಂದಿಯನ್ನು  ಸೋಮವಾರ ರಾತ್ರಿ ಬಂಧಿಸಿ ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು 16 ಮಂದಿಗೂ ಜಾಮೀನು ದೊರಕಿದೆ ಎಂದು ಪೋಲಿಸರು ತಿಳಿಸಿದ್ದಾರೆ.    
ದತ್ತಪೀಠಕ್ಕೆ ಹೊರಟಿದ್ದ ದತ್ತಮಾಲಾದಾರಿಗಳು ಅರೇಹಳ್ಳಿಯಲ್ಲಿ ಶೋಭಾಯಾತ್ರೆಯನ್ನು ನಡೆಸುವ ಸಂದರ್ಭದಲ್ಲಿ ಅನ್ಯ ಕೋಮಿನ ವಿರುದ್ಧ ಘೋಷಣೆ ಕೂಗಲಾಗುತ್ತಿದೆ ಎಂಬ ಕಾರಣದಿಂದ 2 ಕೋಮಿನ ನಡುವೆ ಮಾತಿನ ಚಕಮಕಿ ನಡೆದು ಕಲ್ಲು ತೂರಾಟ ನಡೆದಿತ್ತು.  
ಈ ಬಗ್ಗೆ ಅರೇಹಳ್ಳಿ ಸಕಲೇಶಪುರ ರಸ್ತೆಯಲ್ಲಿ ವಾಸವಾಗಿರುವ ಅಸ್ಪಕ್ ಅಹಮದ್ ಎಂಬವರು ಠಾಣೆಗೂ ದೂರು ನೀಡಿದ್ದು, ಮುಖ್ಯರಸ್ತೆಯ ಎಕ್ರಾ ಮಸೀದಿ ಬಳಿ  ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಘೋಷಣೆಯನ್ನು ಮೈಕಿನಲ್ಲಿ ಕೂಗಿ ಹೇಳಿದ್ದಲ್ಲದೆ ಇನ್ನಿತಚರ ಪದಗಳನ್ನು ಬಳಸಿ ನೋವನ್ನುಂಟು ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.