ಜೂಜಾಡುತ್ತಿದ್ದ 11 ಜನರ ಬಂಧನ: ನಗದು ವಶ
ಹಾಸನ: ಅಕ್ರಮವಾಗಿ ಜೂಜಾಡುತ್ತಿದ್ದ 11 ಮಂದಿಯನ್ನು ಬಂಧಿಸಿದ್ದು, 4,600 ರು.ಗಳನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ ನಡೆದಿದೆ.
ಚನ್ನರಾಯಪಟ್ಟಣ ತಾಲ್ಲೂಕಿ ದಂಡಿಗನಹಳ್ಳಿ ಹೋಬಳಿ, ಆನೆಕೆರೆ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಹತ್ತಿರ ಅಂದರ್ ಬಾಹರ್ ಜೂಜಾಟಾಡುತ್ತಿದ್ದಾಗ ಗ್ರಾಮಾಂತರ ಠಾಣೆಯ ಪಿಎಸ್ಐ ಪಿ. ಸುರೇಶ್ ಅವರು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಜೂಜಾಡುತ್ತಿದ್ದ ರವಿ (23), ಕೃಷ್ಣಶೆಟ್ಟಿ (43), ನಾಗಣ್ಣ (60), ಚಂದ್ರಶೇಖರ (60), ಕುಮಾರ (52), ಆನಂದ (52), ರಮೇಶ್ (32), ಕುಮಾರಸ್ವಾಮಿ (45), ರವಿ (45), ಕುಮಾರ (30) ಮತ್ತು ಕೃಷ್ಣೇಗೌಡ (60) ಎಂಬುವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು ರು. 4,600 ನಗದನ್ನು ವಶಪಡಿಸಿಕೊಂಡಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯರು ಸೇರಿ ನಾಲ್ವರು ನಾಪತ್ತೆ
ಹಾಸನ: ಹಾಸನದ ಮಟನ್ ಮಾರ್ಕೆಟ್ ಹಿಂಭಾಗ ಪೀರ್ ಬೀಡಿ ಮನೆ ವಾಸಿ ರಂಗೇಗೌಡ ರವರ ಪುತ್ರಿ ಹಂಸ (17) ಹಾಸನದ ವಾಣಿವಿಲಾಸ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ.
ಚಹರೆ: 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತಾನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಮತ್ತು ಹಳದಿ ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ. ತಂದೆ ರಂಗೇಗೌಡ ರವರು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿ, ನಿಂಬಿಹಳ್ಳಿ ಗ್ರಾಮದ ವಾಸಿ ಅನಂತೇಗೌಡ ರವರ ಪತ್ನಿ ಪುಪ್ಪಲತಾ(40) ರವರು ಮನೆಯಿಂದ ಹೊರೆಗೆ ಹೋದವರು ಇದುವರೆವಿಗೂ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಚಹರೆಣ 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಪತಿ ಅನಂತೇಗೌಡ ರವರು ಕೊಟ್ಟ ಹಿರೀಸಾವೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕಣರದಲ್ಲಿ ಅರಸೀಕೆರೆ ತಾಲ್ಲೂಕಿನ ಜಾವಗಲಲ್ಹೋಬಳಿ ಎಸ್.ದಿಗ್ಗೇನಹಳ್ಳಿ ಗ್ರಾಮದ ಶಂಕರನಾಯಕ ರವರ ಪುತ್ರಿ ಜ್ಯೋತಿಬಾಯಿ(19) ಮನೆಯಿಂದ ಹೊರಗೆ ಹೋದವಳು ವಾಪಸ್ಮ್ನೆಗೆ ಬಾರದೆ ಕಾಣೆಯಾಗಿದ್ದಾರೆ.
ಚಹರೆ: 5.4 ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಬಣ್ಣ, ಕನ್ನಡ ಲಂಬಾಣಿ ಬಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಹೂವಿನ ಚೂಡಿದಾರ ಧರಿಸಿದ್ದಾರೆ. ತಂದೆ ಶಂಕರನಾಯಕ ರವರು ಜಾವಗಲ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಸಕಲೇಶಪುರ ತಾಲ್ಲೂಕಿನ ಕುಡುಗರವಳ್ಳಿ ಗ್ರಾಮದ ವೆಂಕಟೇಶಗೌಡ ರವರ ಪುತ್ರಿ ಶೃತಿ (21) ಮನೆಯಿಂದ ಹೊರಗೆ ಹೋದವಳು ವಾಪಸ್ಮ್ನೆಗೆ ಬಾರದೆ ಕಾಣೆಯಾಗಿದ್ದಾರೆ.
ಚಹರೆ: 5 ಅಡಿ ಎತ್ತರ, ಮನೆಯಿಂದ ಹೋಗುವಾಗ ಬಿಳಿ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ತಂದೆ ವೆಂಕಟೇಶಗೌಡ ಅವರು ಸಕಲೇಶಪುರ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಮನೆಗಳ ಮೇಲೆ ಕಲ್ಲು ತೂರಾಟ
ನುಗ್ಗೇಹಳ್ಳಿ: ಇಲ್ಲಿಗೆ ಸಮೀಪದ ಕಾಮನಾಯಕನಹಳ್ಳಿಯಲ್ಲಿ ಇತ್ತೀಚೆಗೆ ಪಾನಮತ್ತರಾಗಿ ಗ್ರಾಮದ ಕೆಲವು ದುಷ್ಕರ್ಮಿಗಳು ಮಹಾಲಿಂಗೇಗೌಡ ಮತ್ತು ಯೋಗಶಂಕರೇಗೌಡ ಎಂಬುವರ ಮನೆಗಳಯ ಮೇಲೆ ರಾಜಕೀಯ ದ್ವೇಷದಿಂದ ಕಲ್ಲು ತೂರಾಟ ನಡೆಸಿ ಮನೆಯ ಹೆಂಚು ಒಡೆದು ಹಾಕಿರುವ ಘಟನೆ ನಡೆದಿದೆ. ಮಹಾಲಿಂಗೇಗೌಡ, ಸುಲಕ್ಕ, ಯೋಗ ಶಂಕರೇಗೌಡ, ಯಶೋಧಮ್ಮ ಮತ್ತು ಅವರ ಭಾವಮೈದುನ ಕಿಟ್ಟಣ್ಣ ಮಕ್ಕಳಾದ ಮಧು, ಪಾರ್ಥ ಅವರನ್ನು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಊರಿನಿಂದ ಓಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ನುಗ್ಗೇಹಳ್ಳಿ ಪೊಲೀಸ್ ಠಾಣೆಗೆ ಮಹಾಲಿಂಗೇಗೌಡ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

