ಹಾಸನ

ಭೂಸ್ವಾಧೀನ: ದಲಿತ ಕುಟುಂಬಗಳ ಪ್ರತಿಭಟನೆ

Published On :

ಹೊಳೆನರಸೀಪುರ: ತಾಲೂಕಿನ ಚಿಟ್ಟನಹಳ್ಳಿ ಗ್ರಾಮಕ್ಕೆ ಸೇರಿದ ದಲಿತರ ಅನುಭವದಲ್ಲಿದ್ದ ಭೂಮಿಯನ್ನು ಮಾಜಿ ಸಚಿವ ಹಾಗೂ ಶಾಸಕ ರೇವಣ್ಣ ವಶಪಡಿಸಿಕೊಂಡು ನಮ್ಮನ್ನು ಬೀದಿ ಪಾಲು ಮಾಡುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿ ಪ್ರತಿಭಟನೆ ನಡೆಸಿದರು.
ಸುದ್ದಿಗಾರರ ತಂಡವನ್ನು ಭಾನುವಾರ ಗ್ರಾಮಕ್ಕೆ ಕರೆದೊಯ್ದ ದಲಿತ ಮುಖಂಡರು ತಮ್ಮ ಬವಣೆ
ತೋಡಿಕೊಂಡು, ಚಿಟ್ಟನಹಳ್ಳಿ ಸರ್ವೆ ನಂ 56 ರಲ್ಲಿ 39 ಎಕರೆ ಭೂಮಿಯಿದ್ದು ಇದನ್ನು ಸುಮಾರು 60 ವರ್ಷಗಳಿಂದಲೂ ದಲಿತ ಕುಟುಂಬಗಳು ಸಾಗುವಳಿ ಮಾಡುತ್ತಾ ಬಂದಿವೆ.
ಆದರೆ ಇದೀಗ ಶಾಸಕ ರೇವಣ್ಣ ಅಭಿವೃದ್ಧಿಯ ನೆಪವೊಡ್ಡಿ ಈ ಭೂಮಿಯಲ್ಲಿ ವಾಜಪೇಯಿ ವಸತಿ ಯೋಜನೆಗಳ ಮನೆ ನಿರ್ಮಾಣಕ್ಕೆ ಮುಂದಾಗಿರುವುದು ದಲಿತರನ್ನು ಒಕ್ಕಲೆಬ್ಬಿಸುವ ಕುತಂತ್ರವಾಗಿದೆ ಎಂದು ದಲಿತ ವಕೀಲ ಅಶೋಕ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ಎಸ್.ಎಚ್.ಮೋಹನಕುಮಾರ್ ದಲಿತ ಕುಟುಂಬಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾಹಿತಿ ನೀಡಿದರು.
ಪ್ರಸ್ತುತ 39 ಎಕರೆ ಭೂಮಿಯಲ್ಲಿ ಹದಿನಾಲ್ಕು ಎಕರೆ ಭೂಮಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದ್ದಾರೆ. ಇದಕ್ಕೆ ತಹಸೀಲ್ದಾರ್ ಅವರು ಈ ಪ್ರದೇಶ ವಾಜಪೇಯಿ ವಸತಿ ಯೋಜನೆಗೆ ಯೋಗ್ಯವಾಗಿದೆ ಎಂದು ನೀಡಿರುವ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೂರಿದರು.
ಗ್ರಾಮದ ದಲಿತ ಮುಖಂಡ ಚಂದ್ರಶೇಖರ್, ಬಿ.ಗಂಗಾಧರಮೂರ್ತಿ, ರಾಜಯ್ಯ, ಜವರಯ್ಯ, ಅಂದಾನಯ್ಯ, ಹುಚ್ಚಮ್ಮ ಅವರು ಮಾತನಾಡಿ ದಲಿತರಾದ ನಮಗೆ ಇರುವುದೆ ಈ ತುಂಡು ಭೂಮಿ. ಕಳೆದ 50 ವರ್ಷಗಳಿಂದಲು ರಾಗಿ ಮತ್ತಿತರ ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದೆವು, ಆದರೆ ಈ ಜಮೀನಿನ ಮೇಲೆ ಶಾಸಕರ ಕೆಂಗಣ್ಣು ಬಿದ್ದಿರುವುದರಿಂದ ಈಗ ನಮ್ಮ ಕುಟುಂಬ ಶಾಶ್ವತವಾಗಿ ಬೀದಿ ಪಾಲಾಗ ಬೇಕಾಗುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಈ ಬಗ್ಗೆ ತಾಲೂಕು ಆಡಳಿತದ ವಿರುದ್ದ ಉಗ್ರ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.