ಹಾಸನ

ಹಾಸನ ನಗರಸಭೆ: 93 ನಾಮಪತ್ರ ಸಲ್ಲಿಕೆ

Published On :

ಹಾಸನ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು  ಫೆ 23 ಕಡೆಯ ದಿನವಾಗಿದ್ದು,  ನಾಮಪತ್ರ ಸಲ್ಲಿಸುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಶನಿವಾರ  ಇನ್ನಷ್ಟು ಬಿರುಸಿನಿಂದ ಉಮೇದುವಾರಿಕೆ ಸಲ್ಲಿಕೆಯಾಗುವ ನಿರೀಕ್ಷೆಯಿದೆ.
ಶುಕ್ರವಾರ ಹಾಸನ ನಗರಸಭಾ ವ್ಯಾಪ್ತಿಯಲ್ಲಿ ವಾರ್ಡ್‌ವಾರು  ಒಟ್ಟು  93 ನಾಮಪತ್ರ ಸಲ್ಲಿಕೆಯಾಗಿವೆ.
ವಾರ್ಡ್ ನಂ.1 ರಿಂದ 7ರವರೆಗೆ  ಇಂದು ಒಟ್ಟು 13 ನಾಮಪತ್ರಗಳು ಸಲ್ಲಿಕೆಯಾಗಿವೆ. ವಾರ್ಡ್  ನಂ.1ಕ್ಕೆ 4 ಮಂದಿ(5ನಾಮಪತ್ರ), ವಾರ್ಡ್ ನಂ.2ಕ್ಕೆ ಒಬ್ಬರು, ವಾರ್ಡ್ ನಂ.3ರಲ್ಲಿ ಒಬ್ಬರು, ವಾರ್ಡ್  ನಂ.4ರಲ್ಲಿ 5 ಮಂದಿ, ವಾರ್ಡ್  ನಂ.7ರಲ್ಲಿ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ, ಜಿಪಂ ಡಿ.ಆರ್.ಡಿ.ಎ ಕೋಶದ ಯೋಜನಾ ನಿರ್ದೇಶಕ  ಕೆ.ಎಂ.ಜಗದೀಶ್ ತಿಳಿಸಿದ್ದಾರೆ.   
ವಾರ್ಡ್  ನಂ 8ರಿಂದ 14ರಲ್ಲಿ ಇಂದು ಒಟ್ಟು 16 ಮಂದಿ 20 ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾದಿಕಾರಿಯಾಗಿರುವ ವಿಶೇಷ ಭೂ ಸ್ವಾಧೀನಾಧಿಕಾರಿ, ನೂರುದ್ದೀನ್ ಶರೀಫ್, ತಿಳಿಸಿದ್ದಾರೆ.
ವಾರ್ಡ್  ನಂ 15ರಿಂದ 21ರವರೆಗೆ ಇಂದು ಒಟ್ಟು 23 ಅರ್ಜಿಗಳು ಸಲ್ಲಿಕೆಯಾಗಿವೆ. ವಾರ್ಡ್  ನಂ.15ರಲ್ಲಿ - 5, 16ರಲ್ಲಿ-4, 18ರಲ್ಲಿ-2, 19ರಲ್ಲಿ - 5, 20ರಲ್ಲಿ  - 6 ಮತ್ತು 21ರಲ್ಲಿ -1 ನಾಮಪತ್ರ ಸಲ್ಲಿಕೆಯಾಗಿದೆ ಎಂದು ಚುನಾವಣಾಧಿಕಾರಿ, ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ವಾರ್ಡ್ ನಂ. 22ರಿಂದ 28ರವರೆಗೆ ಇಂದು 18 ನಾಮಪತ್ರ ಸಲ್ಲಿಕೆಯಾಗಿವೆ. ವಾಡರ್ ನಂ. 23ರಿಂದ -1, ವಾರ್ಡ್ ನಂ.26ರಿಂದ 1, ವಾರ್ಡ್ ನಂ. 27ರಿಂದ ಇಬ್ಬರು (4 ನಾಮಪತ್ರ), 28ರಿಂದ ಇಬ್ಬರು(3 ನಾಮಪತ್ರ) ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿಯಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವಣದ್ಧಿ ಇಲಾಖೆ ಉಪ ನಿರ್ದೇಶಕ  ಚಿದಾನಂದ್ ಅವರು ಮಾಹಿತಿ ನೀಡಿದ್ದಾರೆ.
ವಾರ್ಡ್ ನಂ 29ರಿಂದ 35ರವರೆಗೆ ಇಂದು 19 ನಾಮಪತ್ರಗಳು ಸಲ್ಲಿಕೆಯಾಗಿವೆ. ವಾರ್ಡ್ ನಂ 29ರಲ್ಲಿ-4, 31ರಲ್ಲಿ- 3, 32ರಿಂದ-4, 33ರಿಂದ-2, 34ರಿಂದ-2, 35ರಿಂದ-4, ನಾಮಪತ್ರಗಳು ಸಲ್ಲಿಕೆಯಾಗಿವೆ. ಎಂದು ಚುನಾವಣಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಚ್.ವಿ. ನಾಗರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.