ಹಾಸನ

ಬಾಣಾವರ ಸರ್ಕಾರಿ ಕಾಲೇಜಲ್ಲಿ ಮಾತೃ ಭಾಷಾ ದಿನಾಚರಣೆ

Published On :

ಬಾಣಾವರ (ಅರಸೀಕೆರೆ ತಾ.): ತಾಯಿಯ ಹಾಲು ಮಕ್ಕಳ ಬೆಳವಣಿಗೆಗೆ ಅಗತ್ಯವಾದ್ದು ಎಂಬ ಸತ್ಯವನ್ನು ಒಪ್ಪಿಕೊಂಡಂತೆ ಮಾತೃಭಾಷೆ ಕೂಡಾ ನಮಗೆ ಮುಖ್ಯವಾದದ್ದು ಒಪ್ಪಿಕೊಳ್ಳಲೇಬೇಕು. ಭಾಷೆಯೆಂದರೆ ಅಳಿವು ಉಳಿವು ಕೂಡಾ ಆಗಿರುತ್ತದೆ ಎಂದು ಮೈಸೂರಿನ ಡಿ. ಬನುಮಯ್ಯ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸುರೇಶ್ ಹೇಳಿದರು.
ಬಾಣಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಾತೃಭಾಷಾ ದಿನಾಚರಣೆ ಸಮಾರಂಭದಲ್ಲಿ  ಮಾತನಾಡಿದ ಅವರು, ನಮಗೆ ತಾಯಿ ಭೂಮಿ ಮತ್ತು ಭಾಷೆ ಬಹಳ ಮುಖ್ಯವಾದವು. ನಾವು ಯಾವುದೇ ಋಣ ತೀರಿಸಿದರೂ ಮಾತೃಋಣ ತೀರಿಸಲೇ ಬೇಕು. ಅದರಂತೆ ಮಾತೃ ಭಾಷೆಯೂ ಅಷ್ಟೆ ಮುಖ್ಯ ಎಂದು ಹೇಳಿದರು.
ಮನೆಯೇ ಮೊದಲ ಪಾಠಶಾಲೆ, ಜನನಿ ಮೂದಲ ಗುರು ಎಂಬ ವಾಕ್ಯದಂತೆ ಇಂದಿನ ಸ್ಥಿತಿ.
 ತಾಯಿಯ ಪ್ರೀತಿ ಮಾಯವಾಗಿ ಆ ಪ್ರೀತಿಯನ್ನು ಮನೆಯ ಆಯಾಗಳಿಂದ ಪಡೆಯುವಂತಹ ಸ್ಥಿತಿ ಮಕ್ಕಳಿಗೆ ಬಂದಿದೆ. ರಕ್ತಗತವಾಗಿ ಬಂದ ಮಾತೃಭಾಷೆಯಿಂದ ಮಕ್ಕಳ ಬೌದ್ಧಿಕ ಬೆಳವಣಿಗೆ ತಾಯಿಯಿಂದ ಸಿಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ಎಸ್. ನಾಗರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಲು ನಮ್ಮ ಭಾಷೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಭಾಷೆಯ ಉಳಿವಿಗಾಗಿ ಸಹಕಾರಿಯಾಗಬೇಕೆಂದು ತಿಳಿಸಿದರು.
ಪ್ರಾಧ್ಯಾಪಕ ಡಿ.ಎಲ್. ಹರೀಶ್, ಎಚ್.ಕೆ. ಪ್ರಸಾದ್, ಮಾದಪ್ಪ, ಸ್ಮಿತಾ ಇತರರು ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಅನ್ನಪೂರ್ಣ ನಿರೂಪಿಸಿದರು. ಡಿ.ಎಂ. ಸವಿತ ಪ್ರಾರ್ಥಿಸಿದರು. ಗ್ರಂಥಪಾಲಕ ಆರ್. ಕುಮಾರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಶೈಲೇಂದ್ರಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.