'ಬೀದಿ ನಾಟಕಗಳಿಂದ ಜನ ಸಾಮಾನ್ಯರಲ್ಲಿ ಸಾಮಾಜಿಕ ಅರಿವು'
ಜಾವಗಲ್: ಬೀದಿ ನಾಟಕ ಪ್ರದರ್ಶನದಿಂದ ಜನಸಾಮಾನ್ಯರಲ್ಲಿ ಸಾಮಾಜಿಕ ಅರಿವು ಮೂಡಿಸಬಹುದೆಂದು ಹರಿಹರದ ತುಂಗಭದ್ರಾ ಕಲಾ ತಂಡದ ಮುಖ್ಯಸ್ಥ ಯಲ್ಲಪ್ಪ ತಿಳಿಸಿದರು. ಜಾವಗಲ್ನಲ್ಲಿ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ, ಬೆಂಗಳೂರು ಸಂಗೀತ ಮತ್ತು ನಾಟಕ ವಿಭಾಗ ಹಾಸನ, ನೆಹರು ಯುವ ಕೇಂದ್ರ ಮತ್ತು ಜಾವಗಲ್ನ ಬನಶಂಕರಿ ಮಹಿಳಾ ಸಾಂಸ್ಕೃತಿಕ ಸಮಾಜದ ಆಶ್ರಯದಲ್ಲಿ ಜಾಗೃತಿ ಎಂಬ ಬೀದಿ ನಾಟಕ ಪ್ರದರ್ಶಿಸಿ ಜನಸಾಮಾನ್ಯರಲ್ಲಿ ಆರೋಗ್ಯ, ಶೌಚಾಲಯ ಸ್ವಚ್ಛತೆ ಮುಂತಾದವುಗಳ ಬಗ್ಗೆ ಅರಿವು ಮೂಡಿಸಿ ಜನರನ್ನು ಎಚ್ಚರ ಗೊಳಿಸುವುದೇ ಬೀದಿ ನಾಟಕಗಳ ಮುಖ್ಯ ಉದ್ದೇಶ ಎಂದು ಹೇಳಿದರು. ತಾಯಿ ಮತ್ತು ಮಗುವಿನ ಆರೋಗ್ಯ ಸಾಂಕ್ರಾಮಿಕ ರೋಗಗಳು ಗ್ರಾಮೀಣ ನೈರ್ಮಲ್ಯ, ಸ್ವಚ್ಛತೆ, ಶೌಚಾಲಯ ಬಳಕೆ ಮತ್ತು ಮಾಹಿತಿ ಹಕ್ಕು ಕಾಯಿದೆ ಕುರಿತಾದ ಜಾಗೃತಿ ನಾಟಕ ಪ್ರದರ್ಶಿಸಿದರು. ಅರಸೀಕೆರೆ ಮತ್ತು ಹಾಸನ ತಾಲೂಕುಗಳ ತಲಾ 10 ಆಯ್ದ ಗ್ರಾಮಗಳಲ್ಲಿ ಫೆ. 18ರಿಂದ 27ರವರೆಗೆ 10 ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯಲ್ಲಪ್ಪ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

