189 ನಾಮಪತ್ರ ತಿರಸ್ಕೃತ
ಹಾಸನ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ 1172 ನಾಮಪತ್ರ ಪರಿಶೀಲನೆ ನಂತರ ಜಿಲ್ಲೆಯಲ್ಲಿ ಒಟ್ಟು 189 ನಾಮಪತ್ರ ತಿರಸ್ಕೃತವಾಗಿದ್ದು, ಉಳಿದ 983 ಅಭ್ಯರ್ಥಿಗಳ ನಾಮಪತ್ರದಲ್ಲಿ ಕೆಲವರು ಒಂದೇ ಹೆಸರಿನಲ್ಲಿ ಎರಡೆರಡು ನಾಮಪತ್ರ ಸಲ್ಲಿಸಿದ್ದರ ಪೈಕಿ 43 ನಾಮ ಪತ್ರ ವಜಾ ಗೊಳಿಸಿ, ಅಂತಿಮ ವಾಗಿ 940 ನಾಮಪತ್ರ ಕ್ರಮಬದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ತಿಳಿಸಿದ್ದಾರೆ.
ಹಾಸನ ನಗರಸಭೆಯ 35 ವಾರ್ಡ್ಗಳ ಪೈಕಿ 301 ಅಭ್ಯರ್ಥಿಗಳಲ್ಲಿ 29 ನಾಮಪತ್ರ ತಿರಸ್ಕೃತವಾಗಿದ್ದು, 272 ನಾಮಪತ್ರ ಕ್ರಮಬದ್ಧವಾಗಿದೆ. ಅರಸೀಕೆರೆ ಪುರಸಭೆಯ 27 ವಾರ್ಡ್ ಪೈಕಿ 135 ಅಭ್ಯರ್ಥಿಗಳಲ್ಲಿ 11 ನಾಮಪತ್ರ ತಿರಸ್ಕೃತವಾಗಿದ್ದು, 124 ನಾಮಪತ್ರ ಕ್ರಮಬದ್ಧವಾಗಿದೆ. ಚನ್ನರಾಯಪಟ್ಟಣ ಪುರಸಭೆಯ 23 ವಾರ್ಡ್ ಪೈಕಿ 131 ಅಭ್ಯರ್ಥಿಗಳಲ್ಲಿ 21 ನಾಮಪತ್ರ ತಿರಸ್ಕೃತವಾಗಿದ್ದು, 110 ನಾಮಪತ್ರ ಕ್ರಮಬದ್ಧವಾಗಿದೆ. ಹೊಳೆನರಸೀಪುರ ಪುರಸಭೆಯ 23 ವಾರ್ಡ್ ಪೈಕಿ 130 ಅಭ್ಯರ್ಥಿಗಳಲ್ಲಿ 23 ನಾಮಪತ್ರ ತಿರಸ್ಕೃತವಾಗಿದ್ದು, 107 ನಾಮಪತ್ರ ಕ್ರಮಬದ್ಧವಾಗಿದೆ. ಸಕಲೇಶಪುರ ಪುರಸಭೆಯ 23 ವಾರ್ಡ್ಗಳ ಪೈಕಿ 162 ಅಭ್ಯರ್ಥಿಗಳಲ್ಲಿ 9 ನಾಮಪತ್ರ ತಿರಸ್ಕೃತವಾಗಿದ್ದು, 153 ನಾಮಪತ್ರ ಕ್ರಮಬದ್ಧವಾಗಿದೆ. ಬೇಲೂರು ಪುರಸಭೆಯ 23 ವಾರ್ಡ್ಪೈಕಿ 158 ಅಭ್ಯರ್ಥಿಗಳಲ್ಲಿ 61 ನಾಮಪತ್ರ ತಿರಸ್ಕೃತವಾಗಿದ್ದು, 97 ನಾಮಪತ್ರ ಕ್ರಮಬದ್ಧವಾಗಿದೆ. ಅರಕಲಗೂಡು ಪಪಂ 15 ವಾರ್ಡ್ ಪೈಕಿ 108 ಅಭ್ಯರ್ಥಿಗಳಲ್ಲಿ 33 ನಾಮಪತ್ರ ತಿರಸ್ಕೃತವಾಗಿದ್ದು, 75 ನಾಮಪತ್ರ ಕ್ರಮಬದ್ಧವಾಗಿದೆ. ಆಲೂರು ಪಪಂ 11 ವಾರ್ಡ್ಗಳ ಪೈಕಿ 47 ಅಭ್ಯರ್ಥಿಗಳಲ್ಲಿ 2 ನಾಮಪತ್ರ ತಿರಸ್ಕೃತವಾಗಿದ್ದು, 45 ನಾಮಪತ್ರ ಕ್ರಮಬದ್ಧವಾಗಿದೆ.
ಸಮಾಜಕ್ಕೆ ಹಿತಕರವಾದ ವಿಷಯ ವರದಿಯಾಗಲಿ
ಬೇಲೂರು: ಮಾಧ್ಯಮಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದಾಗ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯ ಎಂದು ಹಿರಿಯ ವ್ಯವಹಾರಿಕ ನ್ಯಾಯಾಧೀಶ ಕೆ.ಆರ್.ನಾಗರಾಜ್ ಅಭಿಪ್ರಾಯಪಟ್ಟರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಬೇಲೂರು ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳ ಜೊತೆ ಕಾನೂನು ವಿಷಯ ಮತ್ತು ಸ್ಥಳೀಯ ಸಂಸ್ಥೆಗಳ ಪ್ರಶ್ನೋತ್ತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಂದರ್ಭದಲ್ಲಿ ಪತ್ರಿಕೆಗಳು ಸಮಾಜಕ್ಕೆ ಅವಶ್ಯಕವಾಗಿರುವ ವರದಿ ಮಾಡದೆ ಬೇಡದ ವಿಷಯಗಳನ್ನು ಪ್ರಚಾರ ಪಡಿಸುತ್ತಿರುವುದು ಸಾಮಾಜಿಕವಾಗಿ ಹಿತಕರವಲ್ಲ. ಪತ್ರಿಕೆಗಳು ಭಾಷೆಗೆ ಪ್ರಾಮುಖ್ಯತೆ ನೀಡುತ್ತಿಲ್ಲ, ಮಾಧ್ಯಮಗಳು ಇದರಿಂದ ಘನತೆ ಕಳೆದುಕೊಳ್ಳುವಂತಾಗಿದೆ ಕಳವಳ ವ್ಯಕ್ತಪಡಿಸಿದರು.
ಸಮಾಜದಲ್ಲಿ ಪತ್ರಿಕಾ ಮಾಧ್ಯಮ 4ನೇ ಅಂಗ ಎಂದು ಕರೆಯಲಾಗುತ್ತಿದೆ. ಅದರೆ ಪತ್ರಿಕಾ ಧರ್ಮ ಹಾಗೂ ಪತ್ರಕರ್ತರ ಜವಾಬ್ದಾರಿ ಬಹಳ ಸೂಕ್ಷ್ಮವಾಗಿದ್ದು ಪರಿಣಾಮಕಾರಿ ವರದಿ ನೀಡಿದಾಗ ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇಂದು ಕೆಲವರು ಸ್ವಾರ್ಥಕ್ಕಾಗಿ ಪತ್ರಿಕೆ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
ಸಮಾಜದ ಒಳಿತಿಗೆ ಪತ್ರಿಕೆ ಬಿಂಬಿಸಬೇಕೇ ವಿನಾ ತನ್ನದೇ ಆದ ಕಟ್ಟುಪಾಡಿನಲ್ಲಿ ಪತ್ರಿಕೆ ನಡೆಸಬಾರದು ಎಂದು ಸಲಹೆ ನೀಡಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಅನಂತು ಮಾತನಾಡಿ, ಕಾನೂನು ಗೌರವಿಸಿದರೆ ಸಮಾಜದಲ್ಲಿ ರಕ್ಷಣೆ, ಗೌರವ ಸಿಗುವುದಲ್ಲದೆ ಪ್ರತಿಯೊಬ್ಬರು ಕಾನೂನಿನ ಬಗ್ಗೆ ತಿಳಿಯುವುದು ಅವಶ್ಯಕ ಎಂದರು.
ಕಿರಿಯ ವ್ಯವಹಾರಿಕ ನ್ಯಾಯಾಧೀಶ ವಿ. ಪ್ರಕಾಶ್ ವಕೀಲರ ಸಂಘದ ಕಾರ್ಯದರ್ಶಿ ಬಿ.ವಿ.ರವಿ, ವಕೀಲ ಎಸ್.ಡಿ.ರಾಜೇಗೌಡ, ನಟರಾಜ್, ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಬಿ.ಮೋಹನ್ ಕುಮಾರ್ ಇನ್ನೂ ಮೊದಲಾದವರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

