ಹಾಸನ

ಅರಸೀಕೆರೆ: 27 ವಾರ್ಡ್‌ಗಳಿಂದ 101 ಅಭ್ಯರ್ಥಿಗಳು ಕಣದಲ್ಲಿ

Published On :

ಅರಸೀಕೆರೆ: ಇಲ್ಲಿನ ಪುರಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದ ಬುಧವಾರ 17 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆಯುವ ಮೂಲಕ ಕಣದಿಂದ ಹಿಂದೆ ಸರಿದಿದ್ದಾರೆ.
ಅಚ್ಚರಿ ಎಂದರೇ ಕಾಂಗ್ರೆಸ್ ಅಭ್ಯರ್ಥಿಯೇ ನಾಮಪತ್ರ ಹಿಂತೆಗೆಕೊಂಡಿದ್ದಾರೆ. ಕಾಂಗ್ರೆಸ್ ಬಿ ಫಾರಂ ಪಡೆದು ಅಧಿಕೃತ ಅಭ್ಯರ್ಥಿಯಾಗಿದ್ದ 21ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ನಾಗರಾಜು ಹಾಗೂ ಕೆಜೆಪಿ ಅಭ್ಯರ್ಥಿ ಈರಯ್ಯ ಹಾಗೂ 2ನೇ ವಾರ್ಡ್‌ನ ಕೆಜೆಪಿ ಅಭ್ಯರ್ಥಿ ಆನಂದ್ ಪೈ ನಾಮಪತ್ರ ಹಿಂಪಡೆಯುವ ಮೂಲಕ ತಮ್ಮ ಪಕ್ಷಗಳಿಗೆ ಇರಿಸುಮುರಿಸು ಉಂಟು ಮಾಡಿದ್ದಾರೆ. ಪುರಸಭೆಯ ಎಲ್ಲಾ 27 ವಾರ್ಡ್‌ಗಳಲ್ಲಿ ಜೆಡಿಎಸ್ ಸ್ಪರ್ಧೆಗಿಳಿಸಿದ್ದರೆ ಕಾಂಗ್ರೆಸ್ 26 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿದ್ದು, ಕೆಜೆಪಿ 21 ಕಣಕ್ಕಿಳಿದಿದೆ. ಬಿಜೆಪಿ 13 ಸ್ಥಾನಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಕ್ಷೇತರ 12, ಬಿಎಸ್‌ಆರ್ 1 ಹಾಗೂ ಎಸ್‌ಡಿಪಿಐ ಒಂದು ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದೆ.
ಬುಧವಾರ ನಾಮ ಪತ್ರ ಹಿಂಪಡೆದವರು - 1ನೇ ವಾರ್ಡ್‌ನ ಪಕ್ಷೇತರ - ಯೋಗೀಶ್, ರವಿಕುಮಾರ್, 5ನೇ ವಾರ್ಡ್ ನ ಇನಾಯಿತ್‌ಪಾಷ, 6ನೇ ವಾರ್ಡ್‌ನ ಮಂಗಳ ಡಿ.ಎಸ್, 11ನೇ ವಾರ್ಡ್ ನ ವಿ.ಕೆ.ಎಂ.ಗೌಡ, 17ನೇ ವಾರ್ಡ್‌ನ ನಿತಿಶ್ ಎಂ.ಎಸ್,  ಶಿವರಾಜ್, 18ನೇ ವಾರ್ಡ್‌ನ ವೈ.ಕೆ.ದೇವರಾಜ್, 21ನೇ ವಾರ್ಡ್ ನ ಕೆ.ಜಿ.ರುದ್ರಸ್ವಾಮಿ, ಆನಂದ್ ಕೌಶಿಕ್, 22 ನೇ ವಾರ್ಡ್ ನ ಸುಬ್ರಮಣ್ಯ ಬಾಬು, 23ನೇ ವಾರ್ಡ್‌ನ ಎಸ್ ಡಿಪಿಐ ಅಭ್ಯರ್ಥಿ ಸೈಯದ್ ಜಬಿವುಲ್ಲಾ, 27ನೇ ವಾರ್ಡ್‌ನ ಹರೀಶ್, ಬಸವರಾಜು, ನಾಮಪತ್ರ ಹಿಂಪಡೆದವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.