ಹಾಸನ

'ಸ್ವಾರ್ಥ ಮನೋಭಾವ ಬಿಟ್ಟು ಕರ್ತವ್ಯ ನಿರ್ವಹಿಸಿ'

Published On :

ಹಾಸನ: ಪ್ರತಿಯೊಬ್ಬರೂ ಸ್ವಾರ್ಥ ಮನೋಭಾವ ಬಿಟ್ಟು ಕೆಲಸ ಮಾಡುವಂತೆ ಶಾಸಕ ಎಚ್.ಎಸ್. ಪ್ರಕಾಶ್ ಕರೆ ನೀಡಿದರು.
ನಗರದ ಎಂ.ಜಿ. ರಸ್ತೆ, ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದ ಬಳಿ ಇರುವ ಕಾಳಿಕಾಂಬ ದೇವಾಲಯದ ನಿವೇಶನದಲ್ಲಿ ಬಹುಪ್ರಾಚೀನ ಕುಲದೇವತಾ ಕಾಳಿಕಾಂಬ ಕರ್ಮಠೇಶ್ವರ ದೇವಾಲಯದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮೂರನೆ ದಿವಸದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅವರವರ ವೃತ್ತ್ತಿಯಲ್ಲಿ ಪ್ರಾಮಾಣಿಕವಾಗಿ ಸಮಾಜದ ಒಳಿತಿಗಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.
ಪ್ರತಿ ಜನಾಂಗದಲ್ಲಿಯೂ ಅವರದೆ ಆದ ಶ್ರೇಷ್ಠತೆಯನ್ನು ಕಾಣಬಹುದು. ಸಮಾಜದಲ್ಲಿ ಯಾರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಅಂತವರನ್ನು ಗುರುತಿಸಿ ವಿದ್ಯಾಭ್ಯಾಸ ನೀಡುವಂತೆ ಕಿವಿಮಾತು ಹೇಳಿದರು. ವಿದ್ಯೆಗಿಂತ ಶ್ರೀಮಂತಿಕೆ ಯಾವುದು ಇಲ್ಲ ಎಂದು ಹೇಳಿದರು.
ಪ್ರತಿಭಾವಂತ ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನ ನೀಡಿ ಗೌರವಿಸಿದರು. ತಾ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಜಿ.ಆರ್. ತಿಮ್ಮಾಚಾರ್, ಎಸ್.ಆರ್.ಎಸ್. ಜ್ಯುಯಲರ್ ಮಾಲೀಕ  ಆರ್. ರಾಜಗೋಪಾಲ ಶ್ರೇಷ್ಠಿ ವಿಶ್ವರೂಪ ವಿವಿದೋದ್ಧೇಶ ಪತ್ತಿನ ಸೌಹಾರ್ದ ಸಹಕಾರ ಅಧ್ಯಕ್ಷ ಎಚ್.ಎಸ್. ಶಿವಶಂಕರ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.