ಸಾರಿಗೆ ಬಸ್ - ಟಿಪ್ಪರ್ ಡಿಕ್ಕಿ: ಇಬ್ಬರು ಸಾವು
ಆಲೂರು: ನಿಂತಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, 13 ಮಂದಿ ಗಾಯಗೊಂಡಿರುವ ಘಟನೆ ತಾಲೂಕಿನ ಮಗ್ಗೆ- ಆಲೂರು ರಸ್ತೆಯ ಹೊನ್ನೇನಳ್ಳಿ ಕ್ರಾಸ್ ಬಳಿ ಗುರುವಾರ ನಡೆದಿದೆ.
ಘಟನೆಯಿಂದ ಉದ್ರಿಕ್ತಗೊಂಡ ಜನರು ಪಟ್ಟಣದ ಆಸ್ಪತ್ರೆಯ ಮುಂಭಾಗ ರಸ್ತೆ ತಡೆ ನಡೆಸಿದರು. ಬಸ್ ಕಂಡಕ್ಟರ್ ಅಶೋಕ, ಕಲ್ಲಾರೆ ಗ್ರಾಮದ ರಂಗೇಗೌಡರ ಪುತ್ರ, ವಿದ್ಯಾನಿಕೇತನ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿ ದರ್ಶನ್ (18) ಮೃತಪಟ್ಟ ದುರ್ದೈವಿ.
ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಕಣಿವೆ ಬಸವನಹಳ್ಳಿ ಗೋಪಿ ಎಂಬುವರ ಪುತ್ರನಾದ 8ನೇ ತರಗತಿಯ ವಿದ್ಯಾರ್ಥಿ ವಿಕಾಸ್ (13) ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡ ವಳಗೇರಹಳ್ಳಿಯ ರಮೇಶ (18), ಇಂದ್ರೇಶ (18), ಕುಂದೂರಿನ ರಂಗೇಗೌಡ (70), ಬಾಳಿಗನಹಳ್ಳಿಯ ಪ್ರಕಾಶ (50), ಮಣಿಗನಹಳ್ಳಿಯ ಶಾಂತ (35), ಹೆಮ್ಮಿಗೆ ಗ್ರಾಮದ ಮೊಗಣ್ಣಗೌಡ (42), ಸಿಂಧುವಳ್ಳಿಯ ಮಲ್ಲೇಗೌಡ (70), ಹಂಚೂರು ಗ್ರಾಮ ಕಾಲೋನಿಯ ರಂಗಮ್ಮ (60), ಹೇಮಂತಕುಮಾರ್ (17) ಎಂಬುವರನ್ನು ಆಲೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದೂರಿನ ಗೋವಿಂದೇಗೌಡ (30), ಹನುಮನಹಳ್ಳಿಯ ಗೌರಮ್ಮ (68) ಅವರನ್ನು ಹಾಸನದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆಗೆ ಕಾರಣನಾದ ಹೆಮ್ಮಿಗೆ ಗ್ರಾಮದ ಚಾಲಕ ಸುರೇಶ ಪರಾರಿಯಾಗಿದ್ದು, ಈತನನ್ನು ಅಮಾನತುಪಡಿಸಲಾಗಿದೆ.
ಘಟನೆ ವಿವರ: ಹಾಸನದಿಂದ ಮಗ್ಗೆ ಗ್ರಾಮಕ್ಕೆ ಹೋಗುತ್ತಿದ್ದ ರಾಜ್ಯ ಸಾರಿಗೆ ಬಸ್ ರಸ್ತೆ ಬದಿಯಲ್ಲಿ ನಿಂತಿದ್ದ ಟಿಪ್ಪರ್‌ನ ಹಿಂಭಾಗದ ತುದಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬಸ್ಸಿನ ಎಡಭಾಗ ಸಂಪೂರ್ಣ ಜಖಂಗೊಂಡು ಎಡಬದಿಯಲ್ಲಿ ಕುಳಿತಿದ್ದ ಕಂಡಕ್ಟರ್ ಅಶೋಕ್ ಹಾಗೂ ವಿದ್ಯಾನಿಕೇತನ ಕಾಲೇಜಿನ ಡಿಪ್ಲೋಮ ವಿದ್ಯಾರ್ಥಿ ದರ್ಶನ್ (18) ಸ್ಥಳದಲ್ಲೇ ಮೃತ ಪಟ್ಟರೆ ತೀವ್ರವಾಗಿ ಗಾಯಗೊಂಡಿದ್ದ ಕಣಿವೆ ಬಸವನಳ್ಳಿ ಗ್ರಾಮದ ಗೋಪಿ ಎಂಬುವವರ ಮಗ 8ನೇ ತರಗತಿ ವಿದ್ಯಾರ್ಥಿ ವಿಕಾಸ್ ತೀವ್ರವಾಗಿ ಗಾಯ ಗೊಂಡಿದ್ದು, ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.
ಘಟನೆಯ ನಂತರ ಪಟ್ಟಣದ ಆಸ್ಪತ್ರೆಯ ಮುಂಭಾಗ ಮೃತರ ಸಂಬಂಧಿಗಳು ಹಾಗೂ ಸಾರ್ವಜನಿಕರು ಕೆಲಕಾಲ ಸಾರಿಗೆ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದ ಪರಿಣಾಮ ಬಸ್‌ಗಳು ಬೈಪಾಸ್ ರಸ್ತೆಯಲ್ಲಿ ಸಂಚರಿಸಿದವು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಪಟ್ಟಣದ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎಚ್.ಕೆ.ಕುಮಾರ ಸ್ವಾಮಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು ಹಾಗೂ ಮೃತರ ಕುಟುಂಬಗಳಿಗೆ ಇಲಾಖೆ ವತಿಯಿಂದ ನೀಡುವ ಎರಡುವರೆ ಲಕ್ಷ ಪರಿಹಾರ ಮೊತ್ತದಲ್ಲಿ 15 ಸಾವಿರ ಹಾಗೂ ಗಾಯಾಳುಗಳಿಗೆ ತಲಾ 5 ಸಾವಿರ ನೀಡಿದರು.
ಕೆಎಸ್‌ಆರ್‌ಟಿಸಿಯ ಡಿ.ಸಿ.ಸಂತೋಷ್ ಬಾಕಿ ಮೊತ್ತ ಶೀಘ್ರವೇ ನೀಡಲಾಗುವುದು ಹಾಗೂ ಈ ಕ್ಷಣದಿಂದಲೇ ಬಸ್ ಚಾಲಕನನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.
ತಾಲೂಕು ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಟಿ.ಹೆಚ್‌ಒ ಡಾ. ತಿಮ್ಮಯ್ಯ, ಸರ್ಜನ್ ತಿಮ್ಮರಾಜ್,ನಾಕಲಗೂಡು ನಟರಾಜ್ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

