ಫೆ. 17 ವಣಗೂರು, ಉಚ್ಚಂಗಿ ಗ್ರಾಪಂಗಳಿಗೆ ಚುನಾವಣೆ

Updated on: 

ಹಾಸನ: ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಅವಧಿ ಮುಗಿಯಲಿರುವ ಜಿಲ್ಲೆಯ ಸಕಲೇಶಪುರ ತಾಲೂಕಿನ ವಣಗೂರು ಮತ್ತು ಉಚ್ಚಂಗಿ ಗ್ರಾಮ ಪಂಚಾಯ್ತಿಗಳ ಸ್ಥಾನಗಳಿಗೆ  ಫೆ.17 ರಂದು ಚುನಾವಣೆ ನಡೆಯಲಿದೆ.
 ಜ.28 ರಂದು ಅಧಿಸೂಚನೆ ಹೊರಡಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ಫೆ.4 ಕೊನೆ ದಿನ. ನಾಮಪತ್ರಗಳನ್ನು ಪರಿಶೀಲಿಸಲು ಫೆ.5 ಕಡೇ ದಿನ. ಉಮೇದಾರಿಕೆ ಹಿಂತೆಗೆದುಕೊಳ್ಳಲು  ಫೆ.7 ಕೊನೆ ದಿನ. ಫೆ.17 ರಂದು ಮತದಾನ ನಡೆಯಲಿದೆ. ಮರು ಮತದಾನ ಅವಶ್ಯಕವಿದ್ದರೆ ಫೆ. 19 ರಂದು ನಡೆಸಲಾಗುವುದು.
ಫೆ. 20 ರಂದು ಮತಗಳ ಎಣಿಕಾ ಕಾರ್ಯ ನಡೆಯಲಿದೆ.  ಚುನಾವಣೆ ನಡೆಸಲು ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಚುನಾವಣೆ ನಡೆಯುವ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ  ಜ.28 ರಿಂದ ಫೆ. 22ರವರೆಗೆ  ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಅದನ್ನು ಜಾರಿಗೆ ತರಲು ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಆರಕ್ಷಕ ವೃತ್ತ ನಿರೀಕ್ಷಕರನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ.
 ಫೆ.17 ರಂದು  ಮತದಾನ ನಡೆಯುವ ಸ್ಥಳಗಳಲ್ಲಿ ಸಂತೆ ಜಾತ್ರೆಗಳನ್ನು ರದ್ದುಪಡಿಸಲಾಗುವುದು, ಹಾಗೂ ಮತದಾನ ಪೂರ್ವ ಹಾಗೂ ಎಣಿಕೆ ದಿನದಂದು ಮದ್ಯಪಾನ ನಿಷೇಧ ಜಾರಿಗೆ ತರಲಾಗುವುದು.
ಈ ಎರಡೂ ಗ್ರಾಮ ಪಂಚಾಯ್ತಿಗಳಲ್ಲಿ ತಲಾ 11 ಸದಸ್ಯರ ಸ್ಥಾನಗಳಿದ್ದು, ಮೀಸಲಾತಿ ಅಧಿಸೂಚನೆಯನ್ನು ಕೋಷ್ಟಕ  ಮತ್ತು  ರಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com