ಹಾಸನ

ದೈವಕೃಪೆ, ಗುರು ಆಶೀರ್ವಾದದಿಂದ ಮನಃಶ್ಯಾಂತಿ ಪ್ರಾಪ್ತಿ: ಸ್ವಾಮೀಜಿ

Published On :

ಅರಸೀಕೆರೆ: ವೈಜ್ಞಾನಿಕವಾಗಿ ಮನುಷ್ಯ ಏನೆಲ್ಲಾ ಕಂಡುಹಿಡಿದು ಸೌಲಭ್ಯಗಳನ್ನು ಪಡೆಯುತ್ತಿದ್ದರೂ ಮನಸ್ಸಿಗೆ ನೆಮ್ಮದಿ, ಶಾಂತಿ ಕಾಣಲು ಸಾಧ್ಯವಾಗುತ್ತಿಲ್ಲ ಎಂದು ತಿಪಟೂರು ತಾಲೂಕು ಕೆರಗೋಡಿ ರಂಗಾಪುರ ಸುಕ್ಷೇತ್ರದ ಶ್ರೀ ಪರದೇಶಿ ಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಮಿನಿವಿಧಾನಸೌಧದ ಸಮೀಪದಲ್ಲಿರುವ ಶ್ರೀ ಕೆಂಗಲ್ ಬಸವೇಶ್ವರ ಸ್ವಾಮಿ ದೇವಾಲಯದ 14ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ವಿದ್ಯೆ, ಸಂಪತ್ತು, ಎಲ್ಲವು ಇದ್ದರೂ ದೇವರ ಕೃಪೆ ಗುರುವಿನ ಆಶೀರ್ವಾದವಿಲ್ಲದೆ ಶಾಂತಿ ನೆಮ್ಮದಿ ಕಾಣಲು ಸಾಧ್ಯವಿಲ್ಲ ಎಂದರು.
ಬಸವಣ್ಣ, ಬುದ್ಧರಂತಹ ಮಹಾನ್ ಪುರುಷರು ಹುಟ್ಟಿದ ಪುಣ್ಯಭೂಮಿಯಲ್ಲಿ ಜನಿಸಿದ ನಾವುಗಳು ದೇವರು, ಧರ್ಮ ಮರೆತು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದು ಸರಿಯಲ್ಲ. ಮಣ್ಣಿನ ಋಣ ತೀರಿಸುವ ಭಾರ ತಮ್ಮಗಳೆಲ್ಲರ ಕರ್ತವ್ಯವಾಗಿದ್ದು ಭಗವಂತನ ಕೃಪೆಯಿಲ್ಲದೆ ಯಾವುದೇ ಕಾರ್ಯವೂ ನಡೆಯುವುದಿಲ್ಲ. ಇರುವ ಅಲ್ಪ ಕಾಲವಾದರೂ ದಾನ, ಪರೋಪಕಾರ, ಧರ್ಮ ಹಾಗೂ ಭಗವಂತನ ಕಡೆ ಚಿಂತಿಸುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಆಶೀರ್ವಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಮಾತನಾಡಿದರು. ಪ್ರತಿಭಾ ಪ.ಪೂ ಕಾಲೇಜಿನ ಉಪನ್ಯಾಸಕ ಎಸ್.ಎಂ.ಜಯದೇವ್ ಮಾತನಾಡಿ, ನಾಡಿನ ಮಠಮಾನ್ಯಗಳು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಆಪಾರ. ಸುತ್ತೂರು, ಸಿದ್ಧಗಂಗ, ಆದಿಚುಂಚನಗಿರಿ, ಕೆರಗೋಡಿ ರಂಗಾಪುರ ಮಠದ ಶ್ರೀಗಳು ಲಕ್ಷಾಂತರ ಮಕ್ಕಳಿಗೆ ಅನ್ನದಾನ, ಜ್ಞಾನದಾಸೋಹ ಮೂಲಕ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಬಣ್ಣಿಸಿದರು.
ಪುರಸಭಾಧ್ಯಕ್ಷ ಜಿ.ಟಿ.ಗಣೇಶ್, ಪುರಸಭಾ ಸದಸ್ಯೆ ಲಕ್ಷ್ಮಿಬಾಯಿಸ್ವಾಮಿನಾಯ್ಕ ವೇದಿಕೆಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.