ಬೈಕ್ಗಳ ಮುಖಾಮುಖಿ ಸ್ಥಳದಲ್ಲೇ ಇಬ್ಬರ ಸಾವು
ಸಕಲೇಶಪುರ: ಬೈಕ್ಗಳ ನಡುವೆ ಡಿಕ್ಕಿಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಅರಸುನಗರದ ಬಿ.ಎಂ. ರಸ್ತೆಯಲ್ಲಿ ಭಾನುವಾರ ಸಂಭವಿಸಿದೆ.
ಬಂಟ್ವಾಳ ತಾಲೂಕಿನ ಮಂಡಂ ಕಾಪು ಅಂಚೆಯ ಗಾನದಕೋಡಿ ಗ್ರಾಮದ ಗುರುಪ್ರಸಾದ ಶೆಟ್ಟಿ (31) ಹಾಗೂ ಬೆಳಗೋಡು ಹೋಬಳಿಯ ಬಾಗೇ ಗಕ್ರಾಮದ ಶೇಷಪ್ಪ (31) ಮೃತಪಟ್ಟವರು.
ಗುರುಪ್ರಸಾದ್ಶೆಟ್ಟಿ ಅವರು ಸಕಲೇಶಪುರದಲ್ಲಿ ಟಿಂಬರ್ ಕೆಲಸ ಮಾಡಿಸುತ್ತಿದ್ದು, ಭಾನುವಾರ ಮಧ್ಯಾಹ್ನ ತಮ್ಮ ಹಿರೋಹೊಂಡಾ ಬೈಕಿನಲ್ಲಿ ಸಕಲೇಶಪುರದಿಂದ ಪಾಳ್ಯಕ್ಕೆ ಹೋಗುತ್ತಿದ್ದರು. ಅರಸುನಗರ ಬಿ.ಎಂ ರಸ್ತೆಯಲ್ಲಿ ಬೈಕನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಎದುರಿನಿಂದ ಪುನೀತ್ ಕುಮಾರ್ ಎಂಬವರು ಶೇಷಪ್ಪ ರವರನ್ನು ಕೂರಿಸಿಕೊಂಡು ಬರುತ್ತಿದ್ದ ಪಲ್ಸರ್ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ.
ಇಬ್ಬರಿಗೂ ತೀವ್ರ ಸ್ವರೂಪದ ಗಾಯಗಳಾಗಿ ಗುರುಪ್ರಸಾದ್ ಶೆಟ್ಟಿ ಮತ್ತು ಶೇಷಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜುಕೋರರ ಸೆರೆ
ಅರಕಲಗೂಡು: ತಾಲೂಕಿನ ಕಸಬಾ ಹೋಬಳಿಯ ಪ್ರತ್ಯೇಕ ಕಡೆಗಳಲ್ಲಿ ಅಂದರ್ ಬಾಹರ್ ಆಡುತ್ತಿದ್ದ 13 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಭಾನುವಾರ ನಡೆದಿದೆ.ಕಸಬಾ ಹೋಬಳಿ ಯಗಟಿ ಗ್ರಾಮದ ಪಾಳು ಬಿದ್ದಿರುವ ಸರ್ಕಾರಿ ಆಸ್ಪತ್ರೆ ಹತ್ತಿರ ಜೂಜಾಡುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ದೊಡ್ಡಮಗ್ಗೆ ಹೋಬಳಿ ಯಗಟಿ ಗ್ರಾಮದವರಾದ ದೇವರಾಜು(45), ಚಲುವರಾಜು(28), ರಾಜು (36), ರಂಗಸ್ವಾಮಿ(40), ಧರಣೀಶ (25), ಮಂಜುನಾಥ(22),ಕಿಕ್ಕೇರಮ್ಮನ ಕೊತ್ತಲು ಬೀದಿಯ ವಾಸಿ ಕನಕ (24) ಬಂಧಿತ ಆರೋಪಿಗಳು.
ಮತ್ತೊಂದು ಪ್ರಕರಣದಲ್ಲಿ ದೇವರಹಳ್ಳಿ ಗ್ರಾಮದಲ್ಲಿ ಜೂಜಾಡುತ್ತಿದ್ದ 6 ಮಂದಿಯನ್ನು ಬಂಧಿಸಿದ್ದಾರೆ.ಗ್ರಾಮದವರಾದ ಸ್ವಾಮಿ(32), ಶಿವಣ್ಣ (35), ಶಿವರಾಜ (32), ಮಹೇಶ (31), ಸ್ವಾಮಿ(42) ಕುಮಾರ (30) ಎಂಬವರೇ ಬಂಧಿತ ಆರೋಪಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

