ಹಾಸನ

ರಸ್ತೆ ಅಭಿವೃದ್ಧಿಗೆ 1.50 ಕೋಟಿ ಮಂಜೂರು

Published On :

ಜಾವಗಲ್: ಕೆರೆಕೋಡಿಹಳ್ಳಿ-ಲಿಂಗ್ಲಾಪುರ-ಬಂದೂರು ರಸ್ತೆ ಅಭಿವೃದ್ಧಿಗೆ 1.50 ಕೋಟಿ ಮಂಜೂರು ಮಾಡಲಾಗಿದೆ ಎಂದು ಶಾಸಕ ರುದ್ರೇಶಗೌಡ ತಿಳಿಸಿದರು.
ಜಾವಗಲ್ ಸಮೀಪದ ಕೆರೆಕೋಡಿ ಹಳ್ಳಿ-ಧನಂಜಯಪುರ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣನವರ 182ನೇ ಸಂಸ್ಮರಣಾ ಮಹೋತ್ಸವವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಜಾವಗಲ್ ಮುಖ್ಯ ರಸ್ತೆಯಿಂದ ಕೆರೆಕೋಡಿಹಳ್ಳಿ -ಲಿಂಗ್ಲಾಪುರ -ಬಂದೂರು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸ ಲಾಗುವುದೆಂದರು.
ಸಂಗೊಳ್ಳಿರಾಯಣ್ಣ ಅಪ್ರತಿಮ ದೇಶಭಕ್ತ ಹಾಗೂ ಸ್ವಾಮಿ ನಿಷ್ಠೆಗೆ ಹೆಸರಾಗಿದ್ದ ಮಹಾನ್ ಚೇತನ. ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕೆಂದರು.
ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ ಮಾತನಾಡಿ ಕುರುಬ ಜನಾಂಗವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಜಾಗೃತವಾಗಬೇಕು. ಯುವಜನತೆ ಸಂಗೊಳ್ಳಿರಾಯಣ್ಣನ ದಿಟ್ಟತನ ಬೆಳೆಸಿಕೊಳ್ಳಬೇಕೆಂದರು.
ಜಿಪಂ ಸದಸ್ಯ ಲಕ್ಷ್ಮಣ್, ಸಮುದಾಯ ಭವನಕ್ಕೆ ನೆರವು ನೀಡುವುದಾಗಿ ಭರವಸೆ ಯಿತ್ತರು.
ಹಾಸನ ಜಿಲ್ಲಾ ಕುರುಬ ಸಮಾಜದ ಕಾರ್ಯಾಧ್ಯಕ್ಷ ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಬೆಳವಾಡಿ ರವೀಂದ್ರ, ಬೇಲೂರು ತಾ. ಸಂಗೊಳ್ಳಿರಾಯಣ್ಣ ಸಂಘದ ಅಧ್ಯಕ್ಷ ಜಯರಾಂ, ಗ್ರಾಪಂ  ಉಪಾಧ್ಯಕ್ಷೆ ತಿಮ್ಮಮ್ಮ, ಕನಕ ಸಂಘದ ಅಧ್ಯಕ್ಷ ಕುಮಾರಸ್ವಾಮಿ ಗ್ರಾಪಂ ಮಾಜಿ ಅಧ್ಯಕ್ಷರಾದ ರಾಜೇಗೌಡ, ಮಹಾ ಲಿಂಗೇಗೌಡ, ಸಂಘದ ಅಧ್ಯಕ್ಷ ಜಗದೀಶ್, ಶಿಕ್ಷಕ ನಿಂಗೇಗೌಡ ಮಾತ ನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ನಿಂಗೇಗೌಡ ವಹಿಸಿದ್ದರು. ಸಮಾಜದ ಮುಖಂಡರಾದ ತಿರುಕೇ ಗೌಡ, ಪುಟ್ಟೇಗೌಡ, ಮರಿಗೌಡ, ಗಿಡ್ಡೇಗೌಡ, ಗೋಪಾಲೇಗೌಡ, ಲೋಕೇಶ್, ಸೋಮಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.