ಸಮಾನತೆಗೆ ಜಾತಿ ಭೇದ ಅಡ್ಡಗೋಡೆ: ಬಾಲಕೃಷ್ಣ ರೈ
ಅರಸೀಕೆರೆ: ಮಾನವ ಹಕ್ಕು ವಂಚಿತರಿಗೆ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಕಾರ್ಯಪಡೆ ಕಾರ್ಯ ನಿರ್ವಹಿಸಬೇಕಿದೆ ಎಂದು ಮಾನವ ಹಕ್ಕುಗಳ ಮಹಾಮೈತ್ರಿ ರಾಜ್ಯಾಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣರೈ ಅಭಿಪ್ರಾಯಪಟ್ಟರು.
ಪಟ್ಟಣದ ರೋಟರಿ ಭವನದಲ್ಲಿ ಮಾನವ ಹಕ್ಕುಗಳ ಮಹಾಮೈತ್ರಿ ನೂತನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಹಾಗೂ ಸದಸ್ಯರ ಪದಗ್ರಹಣ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಜಾತಿ-ಜಾತಿಗಳ ಭಿನ್ನತೆಯೇ ಎಲ್ಲರ ಮನ ಒಂದಾಗಲು ಅಡ್ಡಗೋಡೆಯಾಗಿದೆ. ಇದು ನಿವಾರಣೆಯಾಗುವವರೆಗೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ ಎಂದರು.
ಸಮಾರಂಭ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ನಟರಾಜ್ ಮಾತನಾಡಿ ಪ್ರಸ್ತುತ ಅಗತ್ಯವಿದ್ದ ಸಂಸ್ಥೆ ಪ್ರಾರಂಭಗೊಂಡಿರುವುದು ಸಂತೋಷ. ಮೈತ್ರಿಯಲ್ಲಿ ಸಂಘರ್ಷವಿರದಂತೆ ಕಾರ್ಯನಿರ್ವಹಿಸಿ ಎಂದು ಕಿವಿಮಾತು ಹೇಳಿದ ಅವರು, ಮೈತ್ರಿಗೆ ತಮ್ಮ ಸಹಕಾರವೂ ಇರುತ್ತದೆ ಎಂದರು.
ಡಿವೈಎಸ್ಪಿ ಮಂಜುನಾಥ್ ಮಾತನಾಡಿ ಆಹಾರ, ನಡೆ-ನುಡಿ, ವಾಕ್ ಸ್ವಾತಂತ್ರ್ಯ ಹಾಗೂ ಮಕ್ಕಳಿಗೂ ತಮ್ಮ ಹಕ್ಕನ್ನು ಪಡೆಯುವ ನಿಟ್ಟಿನಲ್ಲಿ ಕಾನೂನು ರೂಪಿಸಲಾಗಿದೆ. ಕೆಲವು ವೇಳೆ ಮಾನವ ಹಕ್ಕಿನಿಂದ ವಂಚಿತನಾದಾಗ ಅವನಿಗೆ ನ್ಯಾಯ ದೊರಕಿಸಿಕೊಡುವಲ್ಲಿ ನಿಮ್ಮ ಸಂಘಟನೆ ಕಾರ್ಯಪ್ರವೃತ್ತವಾಗಬೇಕು ಎಂದರು.
ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ ಜಿಪಂ, ತಾಪಂ ಹಾಗೂ ಗ್ರಾಪಂಗಳಲ್ಲಿ ಅಕ್ರಮಗಳು ನಡೆದಿದ್ದು ಮಾನವ ಹಕ್ಕುಚ್ಯುತಿ ಆಗಿದೆ. ಶೈಕ್ಷಣಿಕ ಸಾಮಾಜಿಕ ಹಾಗೂ ಆರ್ಥಿಕ ನಿಟ್ಟಿನಲ್ಲಿ ಸಹಬಾಳ್ವೆ ಅಗತ್ಯವಿದೆ ಎಂದರು. ನ್ಯಾಯವಾದಿ ಹಿರಣ್ಣಯ್ಯ ಸಂಘಟನೆಯು ವಿಶಿಷ್ಟ ರೀತಿಯಲ್ಲಿ ಸಾಮಾಜಿಕ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.
ಮಾನವ ಹಕ್ಕುಗಳ ಭಾರತೀಯ ಮೈತ್ರಿ ಸಮಿತಿಗೆ ಪದಗ್ರಹಣ ಸ್ವೀಕರಿಸಿದವರೆಂದರೆ ಅಧ್ಯಕ್ಷ ನಟರಾಜ್, ಉಪಾಧ್ಯಕ್ಷೆ ಪದ್ಮಾಮೂತರ್, ಓಂಕಾರಮ್ಮಶಿವಮೂತರ್, ಆಯೇಶ್ ಖಾನಂ, ಸಂಘಟನಾ ಕಾರ್ಯದರ್ಶಿಗಳಾಗಿ ಕುಮಾರ್ ಎನ್.ಎಲ್. ಮತ್ತು ದಿವಾಕರ್ ಎಚ್.ಡಿ.ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಲೋಕೇಶಮ್ಮ ಸಿ.ಬಿ., ಮಹೇಶ್ವರಪ್ಪ, ಮಂಜುಳ, ಮಲ್ಲಿಕಾರ್ಜುನ್, ಲತಾ ಚಂದ್ರಶೇಖರ್, ರೀನಾ ಸುಮಂಗಲ, ವೀಣಾಬಾಬು, ಕಾತರ್ಕ್ ನಾಯ್ಕ ಕೆ, ರೇಖಾಕುಮಾರ್,ಸುಬ್ರಮಣ್ಯ ಎಸ್.ಉಮಾಬಾಯಿ, ಶ್ರೀಲಕ್ಷ್ಮೀ, ಮಾಲತಿ, ಗೀತಾರಘು, ಮಂಜುನಾಥ್ ಎಲ್. ಪದಗ್ರಹಣ ಸ್ವೀಕರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

