ರಸ್ತೆ ಡಾಂಬರೀಕರಣ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
ಬೇಲೂರು: ಅರೇಹಳ್ಳಿ ಬಿಕ್ಕೋಡು ಮುಖ್ಯ ರಸ್ತೆಯಲ್ಲಿನ ಹುಲಿಕಲ್ಲು ಬಸ್ ನಿಲ್ದಾಣದಿಂದ ಸೂರುಗೋಡು ಗ್ರಾಮಕ್ಕೆ ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಪಂಚಾಯ್ತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಿದರು. ಸೂರುಗೋಡು ಗ್ರಾಮಸ್ಥರು ಮತ್ತು ಕರ್ನಾಟಕ ಸಂಘಟಿತ ಕಟ್ಟಡ ಮತ್ತು ಟೈಲರಿಂಗ್ ಕೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ತಾಲೂಕಿನ ಅರೇಹಳ್ಳಿ ಹೋಬಳಿ ಸೂರುಗೋಡು ಗ್ರಾಮಕ್ಕೆ ಅನೇಕ ವರ್ಷಗಳಿಂದ ರಸ್ತೆ ಇಲ್ಲದೆ ತುಂಬಾ ತೊಂದರೆ ಆಗಿದೆ.
ಇತ್ತೀಚೆಗೆ ತಾಲೂಕು ಪಂಚಾಯಿತಿಯಿಂದ ಡಾಂಬರೀಕರಣಗೊಳಿಸುವಂತೆ ಆದೇಶ ಬಂದಿದ್ದು ತಾಪಂ ಮಾಜಿ ಅಧ್ಯಕ್ಷೆ ಕಮಲಚನ್ನಪ್ಪ ದುರಾಡಳಿತದಿಂದ ತಮ್ಮ ಸ್ವಾರ್ಥ ಸಾಧನೆಗೆ ಗ್ರಾಮಸ್ಥರ ಗಮನಕ್ಕೆ ತರದೆ ಮನೋಇಚ್ಛೆಯಿಂದ ಕೇವಲ 4 ಮನೆಗೆ ಉಪಯೋಗವಾಗುವಂತೆ ಡಾಂಬರೀಕರಣ ನಡೆಸಿರುವುದು ಖಂಡನೀಯ. ಈ ಸಂಬಂಧ ತಾಪಂ ಕಾರ್ಯ ನಿರ್ವಹಣಾಧಿಕಾರಿ ದೂರು ನೀಡಿದ್ದು ಕಾಮಗಾರಿ ತಾತ್ಕಾಲಿಕ ತಡೆಹಿಡಿಯುವಂತೆ ಅದೇಶ ನೀಡಿದ್ದರು ಗುತ್ತಿಗೆದಾರರು ಮತ್ತು ಕೆಲ ಅಧಿಕಾರಿಗಳು ಶಾಮೀಲಾಗಿ ಕಾಮಗಾರಿ ನಡೆಸಿದ್ದಾರೆ ಎಂದ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮೋಹನ್ಕುಮಾರ್ ಮಾತನಾಡಿ, 35 ಕುಟುಂಬಗಳು ವಾಸ ಮಾಡುವ ರಸ್ತೆಗೆ ಡಾಂಬರೀಕರಣ ಮಾಡುವುದನ್ನು ಬಿಟ್ಟು ಸರ್ಕಾರದಿಂದ ಬರುವ ಅನುದಾನವನ್ನು ಸ್ವಂತದ್ದೆಂದು ಭಾವಿಸಿ ತಮ್ಮ ಮನೆಯಿಂದ ಡಾಂಬರೀಕರಣ ಮಾಡಲು ಮುಂದಾಗಿರುವುದು ಸರಿಯಲ್ಲ. ತಾಪಂ ನೀಡಿರುವ ಅಭಿವೃದ್ದಿ ಸೌಲಭ್ಯಗಳನ್ನು ಮಾಜಿ ಅಧ್ಯಕ್ಷೆ ಕಮಲಚನ್ನಪ್ಪ ಗ್ರಾಮೀಣ ಜನರಿಗೆ ಅನುಕೂಲಕೂಲವಾಗುವಂತೆ ಬಳಸದೆ, ತಮಗೆ ಬೇಕಾದಂತೆ ಕಾಮಗಾರಿ ನಡೆಸುವ ಮೂಲಕ ಸ್ವಜನ ಪಕ್ಷಪಾತ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲೂ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪ್ರತ್ರಿಭಟನೆಯಲ್ಲಿ ಕೆಜೆಪಿ ರಾಜ್ಯ ಉಪಾಧ್ಯಕ್ಷ ಹೆಚ್.ಎಂ.ವಿಶ್ವನಾಥ್,ಕೆಜೆಪಿ ಮುಖಂಡ ಅರುಣಕುಮಾರ್, ಗ್ರಾಮದ ಅರುಣ್, ಸೋಮಶೇಖರ್, ಸೋಮಣ್ಣ, ಭೂಮೇಶ್, ಸತೀಶ್, ರಾಜಶೇಖರ್, ಸುಧಾ, ರಾಧ ಲೀಲಾವತಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

