ರೈತ ಸಂಘದ ಅಭ್ಯರ್ಥಿಗೆ ಸರ್ವ ಸಂಘಟನೆಗಳ ಬೆಂಬಲ
ಸಕಲೇಶಪುರ: ಪುರಸಭೆಯ ಚುನಾವಣೆಯಲ್ಲಿ ವಾರ್ಡ್ 3, 7, 12 ಮತ್ತು 19ನೇ ಅಭ್ಯರ್ಥಿಗಳಿಗೆ ಪ್ರಜಾ ಪ್ರಗತಿ ರಂಗ ಸೇರಿದಂತೆ ನಾನಾ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ನಂಜಮ್ಮ ಮಹಿಳಾ ಸಮಾಜದಲ್ಲಿ ಸಭೆ ನಡೆಸಿದ ರೈತ ಸಂಘ, ನಾಗರಿಕ ಸಂರಕ್ಷಣಾ ಸಮಿತಿ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬಿಎಸ್ಆರ್ ಕಾಂಗ್ರೆಸ್, ಸಿಪಿಐ, ಎಐಟಿಯು, ವೀರ ಕನ್ನಡಿಗ ಟೀಪ್ಪು ಸೇನೆ, ಕನ್ನಡ ಸೇನೆ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಪುರಸಭೆಯ ಚುನಾವಣೆಯಲ್ಲಿ ಒಗ್ಗಟ್ಟಾಗಿ ಎದುರಿಸಲು ನಿರ್ಧರಿಸಿದರು.
ಪುರಸಭೆಯ 3ನೇ ವಾರ್ಡ್ನ ಎಸ್ಡಿಪಿಐ ಅಭ್ಯರ್ಥಿ ಚನ್ನಮಲ್ಲಯ್ಯ, 7ನೇ ವಾರ್ಡಿನ ಪಕ್ಷೇತರ ಅಭ್ಯರ್ಥಿ ದೇವರಾಜ್, 12ನೇ ವಾರ್ಡ್ ರೈತ ಸಂಘದ ಅಭ್ಯರ್ಥಿ ಸಾ.ಸು. ವಿಶ್ವನಾಥ್ ಮತ್ತು 19ನೇ ವಾರ್ಡಿನ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಗುಲ್ಜಾರ್ ಬಾನು ಅವರ ಪರವಾಗಿ ಜಂಟಿಯಾಗಿ ಮಾರ್ಚ್ 2, 3 ಮತ್ತು 4 ರಂದು ಪ್ರಚಾರ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.
ಪುರಸಭೆ ಭ್ರಷ್ಟರ ತಾಣ: ಸಭೆಯಲ್ಲಿ ರೈತಸಂಘದ ಅಧ್ಯಕ್ಷ ಸಾ.ಸು.ವಿಶ್ವನಾಥ್ ಮಾತನಾಡಿ, ಇಲ್ಲಿಯ ಪ್ರಮುಖ ರಾಜಕೀಯ ಪಕ್ಷಗಳು ಪುರಸಭೆಯನ್ನು ಭ್ರಷ್ಟರ ತಾಣವನ್ನಾಗಿಸಿದ್ದಾರೆ. ಪಟ್ಟಣದ ರಸ್ತೆ, ಚರಂಡಿ, ಕಸ, ನೀರು ಎಲ್ಲವನ್ನೂ ತಿಂದು-ಕುಡಿದು ಚಪ್ಪರಿಸಿದ್ದಾರೆ. ಕೆಲವರಿಗೆ ಪುರಸಭೆ ಸಾವಿರಾರು ರೂಪಾಯಿ ಕಮಾಯಿ ನೀಡುವ ಮಾರುಕಟ್ಟೆಯಾದರೆ, ಇನ್ನು ಕೆಲವರಿಗೆ ಹಣದ ಬೆಳೆ ನೀಡುವ ಕಾಫಿ ತೋಟವಾಗಿದೆ. ಇಲ್ಲಿಯವರೆಗೆ ಒಬ್ಬ ಬಡವನಿಗೆ ನಿವೇಶನವಾಗಲಿ-ಮನೆಯಾಗಲಿ ನಿರ್ಮಿಸಿಕೊಡಲಿಲ್ಲ ಎಂದು ಹೇಳಿದರು.
ಪಟ್ಟಣದ ಪಕ್ಕದಲ್ಲೆ ನದಿ ಇದ್ದರೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಒಂದು ಲೋಟ ಶುದ್ಧ ಕುಡಿಯುವ ನೀರು ನೀಡಲಿಲ್ಲ. ಸುಮಾರು 50 ಕೋಟಿ ಹಣವನ್ನು ಪಟ್ಟಣದ ಅಭಿವೃದ್ಧಿಗೆ ವ್ಯಯಿಸಲಾಗಿದ್ದು, ಇಷ್ಟು ಕಾಮಗಾರಿಗಳು ಎಲ್ಲೆಲ್ಲಿ ನಡೆದಿವೆ ಎಂಬುದೇ ತಿಳಿಯುತ್ತಿಲ್ಲ. ಈ ಅವ್ಯವಸ್ಥೆಯನ್ನು ಸರಿಪಡಿಸಲು ಹೋರಾಟಗಾರರು ಪುರಸಭೆಗೆ ಪ್ರವೇಶಿಸಬೇಕೆಂದರು.
ಸಭೆಯಲ್ಲಿ ನಾಗರಿಕ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಮಲ್ನಾಡ್ ಮೆಹಬೂಬ್, ಸಿಪಿಐ ಮತ್ತು ಎ.ಐ.ಟಿ.ಯು ಮುಖಂಡರಾದ ಢೋಂಗ್ರೆ , ಧರ್ಮರಾಜ್, ವೀರ ಕನ್ನಡಿಗ ಟೀಪ್ಪು ಸೇನೆಯ ಅಧ್ಯಕ್ಷ ಝಾಕೀರ್, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಅಫ್ ಇಂಡಿಯಾದ ಇರ್ಫಾನ್, ಮೀಸೆ ಮಂಜಯ್ಯ,ಚ ನ್ನಮಲ್ಲಯ್ಯ, ಬಿಎಸ್ಆರ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಗುರುಮೂರ್ತಿ ದಸಂಸ ಮುಖಂಡರಾದ ಎಸ್.ಎನ್. ಮಲ್ಲಪ್ಪ, ಲಕ್ಷ್ಮಣ್ ಕೀರ್ತಿ, ನಾನಾ ಸಂಘಟನೆಗಳ ಮುಖಂಡರಾದ ಹಸೇನಾರ್ ಪುಟ್ಟರಾಜು, ಹಾಲಪ್ಪ, ವೀರಶೈವ ಯುವ ಜಾಗೃತಿ ವೇದಿಕೆಯ ಮಹೇಶ್, ಭರತ್, ಚೇತನ್, ಕನ್ನಡ ಸೇನೆ, ನಾನಾ ಸಂಘಟನೆಯ ಮುಖಂಡರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

