ಪೌರ ಚುನಾವಣೆ: ವಿದ್ಯುನ್ಮಾನ ಮತದಾನ
ಹಾಸನ: ಈ ಬಾರಿಯೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ವಿದ್ಯುನ್ಮಾನ ಯಂತ್ರಗಳ ಮೂಲಕ ಮತದಾನ ನಡೆಯಲಿದೆ.
ಜಿಲ್ಲೆಯ 5 ಪುರಸಭೆ, 2 ಪಟ್ಟಣ ಪಂಚಾಯ್ತಿ ಮತ್ತು 1 ನಗರಸಭೆಯ ಒಟ್ಟು 177 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, 306 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಅಲ್ಲಿ ವಿದ್ಯುನ್ಮಾನ ಯಂತ್ರಗಳ ಮೂಲಕವೇ ಮತದಾರರು ಬಟನ್ ಒತ್ತುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವರು. ಒಟ್ಟು 180 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಹೊಳೆನರಸೀಪುರ ಪುರಸಭೆಯ 2 ಮತ್ತು
ಆಲೂರು ಪಟ್ಟಣ ಪಂಚಾಯ್ತಿಯ 1 ವಾರ್ಡ್ನಲ್ಲಿ ಜೆಡಿಎಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ನಿಟ್ಟಿನಲ್ಲಿ 177 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
2 ವಾರ್ಡ್ಗಳಲ್ಲಿ 'ಕೈ' ಅಭ್ಯರ್ಥಿಗಳಿಲ್ಲ: ಹಾಸನ ನಗರಸಭೆಯ 2 ವಾರ್ಡ್ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹಾಕಿಲ್ಲ. 9 ಮತ್ತು 14ನೇ ವಾರ್ಡ್ಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳಿಲ್ಲ. 33 ವಾರ್ಡ್ಗಳಿಗೆ ಅಭ್ಯರ್ಥಿಗಳನ್ನು ಹೂಡಲಾಗಿದೆ.
9 ನೇ ವಾರ್ಡ್ನಿಂದ ಸ್ಪರ್ಧಿಸಲು ಕಾಂಗ್ರೆಸ್ ಬಿ ಫಾರಂ ಪಡೆದಿದ್ದ ನಟೇಶ್ ಕುಮಾರ್ ಎಂಬುವರು ನಾಮಪತ್ರ ಸಲ್ಲಿಸಲಿಲ್ಲ. ಜೆಡಿಎಸ್ ಅಭ್ಯರ್ಥಿಯಾಗಿ ಎಚ್.ಎಸ್. ಅನಿಲ್ಕುಮಾರ್ ಮತ್ತು ಬಿಜೆಪಿ ಅಭ್ಯರ್ಥಿ ಎಚ್.ಎಲ್. ವಿಜಯಕುಮಾರ್ ಮಾತ್ರ ಕಣದಲ್ಲಿ ಉಳಿದಿದ್ದು, 14 ನೇ ವಾರ್ಡ್ನಲ್ಲಿ ಕಾಂಗ್ರೆಸ್ ತನ್ನನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ.
ಕೆಜೆಪಿ ಬಿಟ್ಟು ಮತ್ತೆ ಬಿಜೆಪಿ ಸೇರ್ಪಡೆ
ಹಾಸನ: ಕೆಜೆಪಿಯಲ್ಲಿನ ಉಸಿರುಕಟ್ಟಿದ ವಾತಾವರಣದಿಂದ ಮತ್ತೆ ತವರು ಪಕ್ಷ ಬಿಜೆಪಿ ಸೇರ್ಪಡೆ ಆಗಿರುವುದಾಗಿ ಡಾ.ಎಚ್.ಆರ್.ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳ ಹಿಂದೆ ಬಿಜೆಪಿ ತೊರೆದು ಕೆಜೆಪಿ ಸೇರಿದೆ. ಪಕ್ಷ ಸೇರಿದ ಕೆಲವೇ ದಿನಗಳಲ್ಲಿ ಆ ಪಕ್ಷದ ವಾತಾವರಣ ಸರಿ ಇಲ್ಲದಿರುವುದು ಗೊತ್ತಾಯಿತು. ಯಾವುದೇ ನೈತಿಕ ಸಿದ್ಧಾಂತಗಳ ಬುನಾದಿ ಇಲ್ಲದೆ ಕೆಲವೇ ಕೆಲವು ವ್ಯಕ್ತಿಗಳ ಹಿತಾಶಕ್ತಿ ಅವಲಂಬಿಸಿ ಪಕ್ಷವನ್ನು ಬೆಂಬಲಿಸಿರುವ ಸ್ಥಳೀಯ ಮುಖಂಡರ ವರ್ತನೆಯಿಂದ ಮತ್ತು ಉಸಿರು ಗಟ್ಟಿಸುವ ವಾತಾವರಣ ಸೃಷ್ಟಿಯಾಗಿರುವ ಕಾರಣ ವಾಪಸ್ ಬಿಜೆಪಿ ಸೇರಿರುವುದಾಗಿ ಅವರು ತಿಳಿಸಿದರು. ತುಳಿಸಿ, ಮಂಜುನಾಥ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

