ಬೀದಿಗೆ ಬಿದ್ದ ಬಡ ಮಾಸ್ತರ ಕುಟುಂಬಕ್ಕೆ ಭರವಸೆಯ ಮಹಾಪೂರ
ಕ.ಪ್ರ. ವಾರ್ತೆ ತುರುವೇಕೆರೆ ಮಾ. 2
ಅನಾಥವಾಗಿರುವ ಬಡ ಮಾಸ್ತರ ಕುಟುಂಬಕ್ಕೆ ಭರವಸೆಯ ಮಹಾಪೂರವೇ ಹರಿದು ಬಂದಿದೆ.
'ಕನ್ನಡಪ್ರಭ'ದಲ್ಲಿ ಶನಿವಾರ ಪ್ರಕಟಗೊಂಡ ವರದಿಗೆ ಸ್ಪಂದಿಸಿರುವ ರಾಜ್ಯದ ಸಹೃದಯಿಗರು ಮಾಯಾಚಾರ್ ಅವರ ಕುಟುಂಬಕ್ಕೆ ಸಾಂತ್ವನದ ಮಾತುಗಳನ್ನಾಡಿದ್ದಾರೆ. ಬೆಳಗ್ಗೆಯಿಂದಲೇ ಮಾಯಾಚಾರ್ ಅವರ ಮಗಳು ಮಂಜುಳಾಗೆ ದೂರವಾಣಿ ಕರೆ ಮಾಡಿದ ಓದುಗರು ಧೈರ್ಯಗೆಡದಿರುವಂತೆ ಧೈರ್ಯ ಹೇಳಿದ್ದಾರೆ. ತಮ್ಮ ಕೈಲಾದ ಮಟ್ಟಿಗೆ ಹಣದ ಸಹಾಯ ಮಾಡುವ ಮಾತುಗಳನ್ನು ಆಡಿ ಆಕೆಯ ಬ್ಯಾಂಕ್ ಅಕೌಂಟ್‌ಗೆ ಹಣ ಸಂದಾಯ ಮಾಡಿದ್ದಾರೆ. ಬಳ್ಳಾರಿಯ ಮಂಜುನಾಥ್, ಬೆಂಗಳೂರಿನ ದೇವರಾಜು, ನೆಲಮಂಗಲದ ಕಿಶೋರ್, ಬೆಂಗಳೂರಿನ ಗಾಯಿತ್ರಿ, ಅಮೆರಿಕದಲ್ಲಿರುವ ಶಾಂತ ವರದರಾಜು, ಹಾವೇರಿಯ ನಿವೃತ್ತ ಶಿಕ್ಷಕರು ಸೇರಿದಂತೆ ನೂರಾರು ಮಂದಿ ಮಂಜುಳಾ ಅವರ ಬೆನ್ನು ತಟ್ಟಿದ್ದಾರೆ. ಧೈರ್ಯವಾಗಿದ್ದು ತನ್ನ ಸಹೋದರಿ ಹಾಗೂ ಸಹೋದರನನ್ನು ಸಲಹುವಂತೆ ಸೂಚಿಸಿದ್ದಾರೆ. ನಾಗರಾಜು ಎಂಬುವವರು ಸ್ವತಃ ಮಾಯಾಚಾರ್ ಅವರ ಮನೆಗೇ ತೆರಳಿ ಮಂಜುಳಾ ಅವರಿಗೆ 5 ಸಾವಿರ ಸಹಾಯ ಧನ ನೀಡಿದ್ದಾರೆ. ಶನಿವಾರವಾದ್ದರಿಂದ ಬ್ಯಾಂಕ್ ಅರ್ಧ ದಿನವಾಗಿದೆ. ಸೋಮವಾರ ಹಣ ಕಳಿಸುವ ಮಾತುಗಳನ್ನು ಅನೇಕರು ಹೇಳಿದ್ದಾರೆ. ಅಮೆರಿಕದಲ್ಲಿರುವ ಶಾಂತ ವರದರಾಜು ಅವರು ಮಂಜುಳಾ ಅವರ ಖಾತೆಗೆ ಹಣ ಜಮಾ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

