ನಾನಾ ಪಕ್ಷಗಳ ಮತಯಾಚನೆ
ಹಾಸನ: ನಗರದ 24ನೇ ವಾರ್ಡ್ ಜೆಡಿಎಸ್ ಅಭ್ಯರ್ಥಿ ಪ್ರಸನ್ನಕುಮಾರ್ ಪರವಾಗಿ ನಗರದಲ್ಲಿ ಭಾನುವಾರ ಶಾಸಕ ಎಚ್.ಎಸ್.ಪ್ರಕಾಶ್, ಎಂಎಲ್ಸಿ ಪಟೇಲ್ ಶಿವರಾಂ, ಮಾಜಿ ಶಾಸಕ ಕರೀಗೌಡ, ರಾಜೇಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೊನ್ನವಳ್ಳಿ ಸತೀಶ್, ತಾಲೂಕು ಅಧ್ಯಕ್ಷ ಎಸ್.ದೇವೇಗೌಡ, ಯುವ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಚ್.ಎಸ್.ರಘು ಚುನಾವಣಾ ಪ್ರಚಾರ ಮಾಡಿದರು. ನಗರದ ಗಾಂಧಿಬಜಾರ್ ರಸ್ತೆಯಲ್ಲಿ ಮತದಾರರ ಬಳಿ ತೆರಳಿ ಜೆಡಿಎಸ್ ಅಭ್ಯರ್ಥಿಗಳನ್ನು ಜಯಶೀಲರನ್ನಾಗಿಸಬೇಕೆಂದು ಮನವಿ ಮಾಡಿದರು.
ಸಿಪಿಐ(ಎಂ) ಮತಯಾಚನೆ: ನಗರಸಭೆಯ 11ನೇ ವಾರ್ಡ್ ಸಿಪಿಐ(ಎಂ) ಅಭ್ಯರ್ಥಿ ಶಾವಲ್ ಹಮೀದ್ ಪರವಾಗಿ ಕಾರ್ಯಕರ್ತರು ವಾರ್ಡ್ನಲ್ಲಿ ಭಾನುವಾರ ರೋಡ್ ಶೋ ನಡೆಸಿ ಮತಯಾಚಿಸಿದರು. ನಂತರ ನಡೆದ ಸಭೆಯಲ್ಲಿ ಮಾತನಾಡಿದ ಸಿಪಿಐ(ಎಂ) ಮುಖಂಡ ಧರ್ಮೇಶ್ ಮತಯಾಚಿಸಿದರು. ಅಭ್ಯರ್ಥಿ ಶಾವೆಲ್ ಹಮೀದ್ ಮಾತನಾಡಿ, ವಾರ್ಡ್ ಅಭಿವೃದ್ಧಿಗಾಗಿ ತಮಗೆ ಮತನೀಡಬೇಕೆಂದು ಮನವಿ ಮಾಡಿದರು. ರೈತ ಮುಖಂಡ ಎಚ್. ಆರ್. ನವೀನ್ಕುಮಾರ್ ಮಾತನಾಡಿದರು. ಪೃಥ್ವಿ, ಅರವಿಂದ್ ಇತರರು ಇದ್ದರು. ಬಹಿರಂಗ ಸಭೆಯಲ್ಲಿ ಕಾರ್ಯಕರ್ತರು ಚುನಾವಣೆಯ ಮಹತ್ವ ತಿಳಿಸುವ ಬೀದಿನಾಟಕ ಪ್ರದರ್ಶನ ಮತ್ತು ಕ್ರಾಂತಿಗೀತೆಗಳನ್ನು ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

